ಭಾರತ-ಚೀನಾ ಗಡಿಯಲ್ಲಿ ತಾನು ಪಾರ್ವತಿ ದೇವಿ ಅವತಾರ ಎಂದ ಮಹಿಳೆ, ಕೈಲಾಸ ಪರ್ವತದಲ್ಲಿರುವ ಶಿವನ ಮದುವೆಯಾಗ್ತಾಳಂತೆ…!

ಪಿಹೋರಗಢ: ಭಾರತ-ಚೀನಾ ಗಡಿಗೆ ಸಮೀಪವಿರುವ ನಾಭಿಧಾಂಗ್‌ನ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ತಾನು ಪಾರ್ವತಿ ದೇವಿಯ ಅವತಾರವೆಂದು ಹೇಳಿಕೊಂಡಿದ್ದು, ಪ್ರದೇಶವನ್ನು ತೊರೆಯಲು ನಿರಾಕರಿಸಿದ್ದಾರೆ ಮತ್ತು ಕೈಲಾಸ ಪರ್ವತದಲ್ಲಿ ನೆಲೆಸಿರುವ ಶಿವನನ್ನು ಮದುವೆಯಾಗುವುದಾಗಿ ಹೇಳಿದ್ದಾರೆ.
ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್ ಕೌರ್ ಎಂಬ ಮಹಿಳೆಯನ್ನು ಅಲ್ಲಿಮದ ತೆರವು ಮಾಡಲು ಹೋಗಿದ್ದ ಪೊಲೀಸ್ ತಂಡವು ನಿರಾಶೆಯಿಂದ ಹಿಂತಿರುಗಬೇಕಾಯಿತು, ಏಕೆಂದರೆ ಮಹಿಳೆ ತನ್ನನ್ನು ಕರೆದೊಯ್ಯಲು ಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು ಎಂದು ಪಿಥೋರಗಢ ಎಸ್ಪಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ.
ಆದರೆ, ಅವರನ್ನು ಬಲವಂತದಿಂದ ಧಾರ್ಚುಲಾಗೆ ಕರೆತರಲು ದೊಡ್ಡ ತಂಡವನ್ನು ಕಳುಹಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ನಿವಾಸಿಯಾಗಿರುವ ಮಹಿಳೆ, ಎಸ್‌ಡಿಎಂ ಧಾರ್ಚುಲಾ ನೀಡಿದ 15 ದಿನಗಳ ಅನುಮತಿಯ ಮೇರೆಗೆ ತಾಯಿಯೊಂದಿಗೆ ಅವರು ಗುಂಜಿಗೆ ಹೋಗಿದ್ದರು, ಆದರೆ ಮೇ 25 ರಂದು ಅವರ ಅನುಮತಿ ಅವಧಿ ಮುಗಿದ ನಂತರವೂ ನಿರ್ಬಂಧಿತ ಪ್ರದೇಶವನ್ನು ತೊರೆಯಲು ಅವರು ನಿರಾಕರಿಸಿದರು” ಎಂದು ಎಸ್‌ಪಿ ಹೇಳಿದರು. .

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

ಮಹಿಳೆಯನ್ನು ನಿರ್ಬಂಧಿತ ಪ್ರದೇಶದಿಂದ ಕರೆತರಲು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ಮೂವರು ಸದಸ್ಯರ ಪೊಲೀಸ್ ತಂಡವನ್ನು ಧಾರ್ಚುಲಾದಿಂದ ಕಳುಹಿಸಲಾಗಿದೆ ಆದರೆ ಬರಿಗೈಯಲ್ಲಿ ಹಿಂತಿರುಗಬೇಕಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದರು.
“ನಾವು ಈಗ ಮಹಿಳೆಯನ್ನು ಮರಳಿ ಕರೆತರಲು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 12 ಸದಸ್ಯರ ದೊಡ್ಡ ಪೊಲೀಸ್ ತಂಡವನ್ನು ಕಳುಹಿಸಲು ಯೋಜಿಸಿದ್ದೇವೆ” ಎಂದು ಅವರು ಹೇಳಿದರು.
ಮಹಿಳೆ ತಾನು ಪಾರ್ವತಿ ದೇವಿಯ ಅವತಾ ಮತ್ತು ಶಿವನನ್ನು ಮದುವೆಯಾಗಲು ಬಂದಿರುವುದಾಗಿ ಹೇಳಿಕೊಳ್ಳುತ್ತಿದ್ದು, ಮಾನಸಿಕವಾಗಿ ಸ್ಥಿರವಾಗಿಲ್ಲ. ಗುಂಜಿ ಪ್ರದೇಶವು ಕೈಲಾಸ-ಮಾನಸ ಸರೋವರದ ಹಾದಿಯಲ್ಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement