ಬಾಂಗ್ಲಾದಲ್ಲಿ ಹೊತ್ತಿ ಉರಿದ ಕಂಟೈನರ್ ಡಿಪೋ, 16 ಮಂದಿ ಸಾವು, 450 ಮಂದಿಗೆ ಗಂಭೀರ ಗಾಯ

ಢಾಕಾ: ಆಗ್ನೇಯ ಬಾಂಗ್ಲಾದೇಶದ ಕಂಟೈನರ್ ಡಿಪೋದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 16 ಮಂದಿ ಸಾವಿಗೀಡಾಗಿದ್ದು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳಲ್ಲಿ 20 ಮಂದಿ ಸ್ಥಿತಿ ಗಂಭೀರವಾಗಿದ್ದು, ಶೇ.60-90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದೇಶದ ಪ್ರಮುಖ ಬಂದರು ಚಿತ್ತಗಾಂಗ್‌ನ ಹೊರಗೆ 40 ಕಿಲೋಮೀಟರ್ (25 ಮೈಲಿ) ದೂರದಲ್ಲಿರುವ ದೇಶೀಯ ಕಂಟೇನರ್ ಸಂಗ್ರಹಣಾ ಘಟಕದಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಗೋದಾಮಿನಲ್ಲಿದ್ದ ಕೆಲವು ಕಂಟೈನರ್ ಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಸೇರಿದಂತೆ ರಾಸಾಯನಿಕಗಳಿದ್ದವು ಎನ್ನಲಾಗಿದೆ. ಅಪಘಾತದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.. ಘಟನೆಯ ಪ್ರಾಥಮಿಕ ತನಿಖೆಯ ಪ್ರಕಾರ, ಕಂಟೈನರ್ ಡಿಪೋದಲ್ಲಿ ರಾಸಾಯನಿಕಗಳಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ ಎಂದು ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಎಂಸಿಎಚ್) ಪೊಲೀಸ್ ಔಟ್‌ಪೋಸ್ಟ್ ಸಬ್-ಇನ್‌ಸ್ಪೆಕ್ಟರ್ (ಎಸ್‌ಐ), ನೂರುಲ್ ಆಲಂ ಅವರು ಹೇಳಿದ್ದಾರೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement