ಹುಬ್ಬಳ್ಳಿ: ಜೊಮ್ಯಾಟೊ ಆರ್ಡರ್​ನಲ್ಲಿ ಚಿಕನ್ ಸುಕ್ಕಾ ಜೊತೆ ಪಾರ್ಸಲ್‌ನಲ್ಲಿ ಬಂತು ಮಿಕ್ಸರ್ ಬ್ಲೇಡ್…!

ಹುಬ್ಬಳ್ಳಿ: ಜೊಮ್ಯಾಟೊ ಮೂಲಕ ಆನ್‌ಲೈನ್​ನಲ್ಲಿ ಚಿಕನ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಆಹಾರದಲ್ಲಿ ಮಿಕ್ಸರ್ ಗ್ರೈಂಡರ್​ನ ಬ್ಲೇಡ್​ನ ತುಂಡು ಸಿಕ್ಕಿದೆ ಎಂದು ವರದಿಯಾಗಿದೆ.
ನಗರದ ಮಲ್ಲಿಕಾರ್ಜುನ ಎಂಬವರು ಜೊಮ್ಯಾಟೊ ಆಪ್ ಮೂಲಕ ವಿದ್ಯಾನಗರದ ಹೋಟೆಲ್​ನಿಂದ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು. ಅದರಂತೆ ಚಿಕನ್‌ ಸುಕ್ಕಾ ಪಾರ್ಸಲ್‌ ಬಂದಿದೆ. ಊಟ ಮಾಡುವಾಗ ಚಿಕನ್ ಸುಕ್ಕಾದಲ್ಲಿ ಮಿಕ್ಸರ್ ಬ್ಲೇಡ್ ಕಾಣಿಸಿಕೊಂಡಿದೆ. ಅವರು ಒಮ್ಮೆ ಗೊಂದಲಕ್ಕೆ ಒಳಗಾದರು. ನಂತರ ಅವರು ಈ ಬಗ್ಗೆ ಜೂಮ್ಯಾಟೋ ಆಪ್ ಮತ್ತು ಹೋಟೆಲ್​ನವರಿಗೆ ವಿಚಾರಿಸಿದರೆ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement