ಹೈದರಾಬಾದ್ ಅಪ್ರಾಪ್ತಳ ಗ್ಯಾಂಗ್ ರೇಪ್ ಪ್ರಕರಣ: ಎಐಎಂಐಎಂ ಶಾಸಕರ ಅಪ್ರಾಪ್ತ ಪುತ್ರನ ಬಂಧನ

ಹೈದರಾಬಾದ್‌: ಮೇ 28 ರಂದು ಹೈದರಾಬಾದ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಶಾಸಕರ ಪುತ್ರನನ್ನು ಬಂಧಿಸಲಾಗಿದೆ.
ಆರೋಪಿ, ಅಪ್ರಾಪ್ತನಾಗಿದ್ದು, ಸೋಮವಾರ ಬಂಧಿಸಿ ವೀಕ್ಷಣೆ ಮನೆಗೆ (observation home) ಕಳುಹಿಸಲಾಗಿದೆ. ಈ ಪ್ರಕರಣದ ಐವರು ಬಾಲಾಪರಾಧಿಗಳಲ್ಲಿ ಈತ ಒಬ್ಬರಾನಾಗಿದ್ದಾನೆ. ಪ್ರಕರಣದಲ್ಲಿ ಐವರನ್ನೂ ಬಂಧಿಸಲಾಗಿದ್ದು, ಎಲ್ಲರೂ ಪ್ರಸ್ತುತ ವೀಕ್ಷಣಾ ಮನೆಯಲ್ಲಿದ್ದಾರೆ. ಪ್ರಕರಣದಲ್ಲಿ ಜೂನ್ 3 ರಂದು ಬಂಧಿತನಾಗಿದ್ದ 18 ವರ್ಷದ ಯುವಕ ಮಾತ್ರ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಎಐಎಂಐಎಂ ಶಾಸಕರ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆಯೇ ಹೊರತು ಸಾಮೂಹಿಕ ಅತ್ಯಾಚಾರದ ಪ್ರಕರಣವಲ್ಲ ಎಂದು ಮೂಲಗಳು ತಿಳಿಸಿವೆ ಎಂದು ನ್ಯೂಸ್‌ 18.ಕಾಮ್‌ ವರದಿ ಮಾಡಿದೆ.

ಸಂತ್ರಸ್ತೆಯು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಇನ್ನೋವಾದಲ್ಲಿ ಈತ ಇರಲಿಲ್ಲ, ಆದರೆ ಅವನು ಮರ್ಸಿಡಿಸ್‌ನಲ್ಲಿ ಪ್ರಯಾಣಿಸುವಾಗ ಅವಳನ್ನು ನಿಂದಿಸಿದ ಎಂದು ಆರೋಪಿಸಲಾಗಿದೆ ಮೂಲಗಳು ತಿಳಿಸಿವೆ. ಸಾಮೂಹಿಕ ಅತ್ಯಾಚಾರ ನಡೆದ ಇನ್ನೋವಾ ಸರ್ಕಾರಿ ವಾಹನ ಎಂದು ತೋರುತ್ತದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಮೇ 28 ರಂದು ಜುಬಿಲಿ ಹಿಲ್ಸ್‌ನ ಏಕಾಂತ ಸ್ಥಳದಲ್ಲಿ ಬಾಲಕಿ ಪಬ್‌ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಹುಡುಗಿ ಪಬ್‌ನಿಂದ ಹೊರಡುತ್ತಿರುವಾಗ, ಅಲ್ಲಿ ಅವಳನ್ನು ಭೇಟಿಯಾದ ಕೆಲವು ಯುವಕರು ಅವಳ ಬಳಿಗೆ ಬಂದು ಅವಳನ್ನು ಮನೆಗೆ ಬಿಡುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದರು. ಈ ಹುಡುಗರು ಹೈದರಾಬಾದ್‌ನ ಐಷಾರಾಮಿ ಪ್ರದೇಶವಾದ ಜೂಬಿಲಿ ಹಿಲ್ಸ್‌ನಲ್ಲಿ ಕಾರನ್ನು ನಿಲ್ಲಿಸಿದರು ಮತ್ತು ಹುಡುಗಿಯ ಮೇಲೆ ಸರದಿಯಲ್ಲಿ ಅತ್ಯಾಚಾರ ಮಾಡಿದರು ಎಂದು ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಬಿಜೆಪಿ ಶಾಸಕ ಎಂ ರಘುನಂದನ್ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಹಿಂದೆ ಕೆಲವು ಛಾಯಾಚಿತ್ರಗಳನ್ನು ಪ್ರದರ್ಶಿಸಿದರು ಮತ್ತು ಇದು ಪ್ರಕರಣದಲ್ಲಿ ಎಐಎಂಐಎಂ ಶಾಸಕರ ಪುತ್ರನ ‘ಭಾಗಿತ್ವವನ್ನು’ ತೋರಿಸಿದೆ ಎಂದು ಆರೋಪಿಸಿದ್ದಾರೆ.
ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಟಿಆರ್‌ಎಸ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್‌ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸದವು. ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಕೆಲವು ರಾಜಕೀಯವಾಗಿ ಪ್ರಭಾವಿ ವ್ಯಕ್ತಿಗಳ ಸಂಬಂಧಿಕರು ಭಾಗಿಯಾಗಿರುವ ಕುರಿತು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದಾರೆ. ಆಡಳಿತಾರೂಢ ಟಿಆರ್‌ಎಸ್‌ನ ಸ್ನೇಹಿ ಪಕ್ಷವಾದ ಎಐಎಂಐಎಂಗೆ ಸೇರಿದವರ ಕುಟುಂಬ ಸದಸ್ಯರ ಶಾಮೀಲಾಗಿರುವ ಬಗ್ಗೆ ಆರೋಪಗಳು ಬಂದಾಗ ಸಿಬಿಐ ತನಿಖೆ ನಡೆಸುವುದು ರಾಜ್ಯ ಸರ್ಕಾರದ ಕನಿಷ್ಠ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ನಾಯಕ ಹೇಳಿದರು. ಹಾಗೂ ತೆಲಂಗಾಣದಲ್ಲಿ ಪಬ್‌ಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement