ಮಗನ ಶವ ಪಡೆಯಲು ಆಸ್ಪತ್ರೆ ಸಿಬ್ಬಂದಿಗೆ ₹ 50,000 “ಲಂಚ” ನೀಡಲು ಹಣಕ್ಕಾಗಿ ಭಿಕ್ಷೆ ಬೇಡಿದ ದಂಪತಿ…!

ಸಮಸ್ಟಿಪುರ(ಬಿಹಾರ): ತಮ್ಮ ಮಗನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹಣಕ್ಕಾಗಿ ವೃದ್ಧ ದಂಪತಿ ಬಿಹಾರದ ಸಮಸ್ಟಿಪುರದಲ್ಲಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಆಸ್ಪತ್ರೆಯ ಉದ್ಯೋಗಿಯೊಬ್ಬರು ತಮ್ಮ ಮಗನ ಶವವನ್ನು ಬಿಡುಗಡೆ ಮಾಡಲು ದಂಪತಿಗೆ ₹ 50,000 ಹಣ ಕೇಳಿದ್ದಾರೆ ಎನ್ನಲಾಗಿದೆ.

advertisement

ದಂಪತಿ ಬಳಿ ಹಣ ಇಲ್ಲದ ಕಾರಣ ‘ಹಣಕ್ಕಾಗಿ ಭಿಕ್ಷೆ ಬೇಡುತ್ತಾ’ ಅವರು ಊರೂರು ಅಲೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಈ ಜೋಡಿಯ ವೀಡಿವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಮಗ ನಾಪತ್ತೆಯಾಗಿದ್ದ ಎಂದು ತಂದೆ ತಿಳಿಸಿದ್ದಾರೆ.

ಕೆಲವು ಸಮಯದ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದ, ಈಗ, ನನ್ನ ಮಗನ ಶವ ಸಮಸ್ಟಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿದೆ, ನನ್ನ ಮಗನ ಶವವನ್ನು ಕೊಡಲು ಆಸ್ಪತ್ರೆಯ ಉದ್ಯೋಗಿ ₹ 50,000 ಕೇಳಿದ್ದಾರೆ, ನಾವು ಬಡವರು, ಹೇಗೆ ನಾವು ಈ ಮೊತ್ತವನ್ನು ಪಾವತಿವುದು? ”ಎಂದು ಮಹೇಶ್ ಠಾಕೂರ್ ಪ್ರಶ್ನಿಸಿದ್ದಾರೆ.

ಆಸ್ಪತ್ರೆಯಲ್ಲಿನ ಬಹುತೇಕ ಆರೋಗ್ಯ ಕಾರ್ಯಕರ್ತರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ರೋಗಿಗಳ ಸಂಬಂಧಿಕರಿಂದ ಸಿಬ್ಬಂದಿ ಹಣ ಪಡೆದಿರುವ ಹಲವಾರು ನಿದರ್ಶನಗಳಿವೆ.
ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. “ಈ ಘಟನೆಗೆ ಹೊಣೆಗಾರರನ್ನು ಬಿಡಲಾಗುವುದಿಲ್ಲ. ಇದು ಮಾನವೀಯತೆಗೆ ಅವಮಾನ” ಎಂದು ಸಮಸ್ಟಿಪುರದ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಹೇಳಿದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಮದ್ಯದ ನೀತಿ : ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ, 20 ಸ್ಥಳಗಳಲ್ಲಿ ಶೋಧ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement