ಕೊನೆಗೂ ತನ್ನನ್ನು ತಾನೇ ಮದುವೆ ಮಾಡಿಕೊಂಡ ಯುವತಿ ಕ್ಷಮಾ ಬಿಂದು…! ಇದು ಭಾರತದಲ್ಲಿ ಮೊದಲ ಪ್ರಕರಣ

ಗುಜರಾತ್ ವಡೋದ್ರಾ ಯುವತಿ ಕ್ಷಮಾ ಬಿಂದು ಎಂಬ ಯುವತಿಯ ಸ್ವಯಂ ವಿವಾಹ ಗುರುವಾರ ನಿರ್ವಿಘ್ನವಾಗಿ ನೆರವೇರಿದೆ. ಆ ಮೂಲಕ ಭಾರತದಲ್ಲಿ ಇದೇ ಮೊದಲ ಸಲ ತಮ್ಮನ್ನೇ ತಾವು ವಿವಾಹ ಮಾಡಿಕೊಂಡ ವಿದ್ಯಾಮಾನ ನಡೆದಂತಾಗಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ತನ್ನನ್ನು ತಾನೇ ಸಂಪ್ರದಾಯಬದ್ಧವಾಗಿ ವಿವಾಹ ಮಾಡಿಕೊಳ್ಳುವುದಾಗಿ ಘೋಷಿಸಿದ ಕ್ಷಮಾ ಬಿಂದು ದೇಶಾದ್ಯಂತ ಸಂಚಲನ ಉಂಟು ಮಾಡಿದ್ದಳು. ಜೂನ್ 11ರಂದು ಎಲ್ಲಾ ಸಂಪ್ರದಾಯಗಳನ್ನು ಪಾಲಿಸಿಕೊಂಡು ಸ್ವಯಂ ವಿವಾಹ ಆಗಲಿರುವುದಾಗಿ ಯುವತಿ ಹೇಳಿಕೊಂಡಿದ್ದಳು.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ದೇವಸ್ಥಾನದಲ್ಲಿ ಮದುವೆಯಾಗುವ ಯುವತಿಯ ಆಕಾಂಕ್ಷೆಗೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿತ್ತು. ಹಿಂದೂ ಸಂಪ್ರದಾಯ ಪ್ರಕಾರ ಸ್ವಯಂ ವಿವಾಹ ಮಾಡಿಕೊಳ್ಳಲು ಅವಕಾಶವಿಲ್ಲ ಎಂಬ ಕಾರಣಕ್ಕಾಗಿ ದೇವಸ್ಥಾನದಲ್ಲಿ ಮದುವೆಯಾಗಲು ಬಿಡುವುದಿಲ್ಲ ಎಂದು ಬಿಜೆಪಿ ನಾಯಕಿಯೊಬ್ಬರು ಹೇಳಿದ್ದರು. ಹೀಗಾಗಿ ತಾವು ನಿಗದ ಪಡಿಸಿದ್ದಕ್ಕಿಂತ ಎರಡು ದಿನ ಮುಂಚಿತವಾಗಿಯೇ ಕ್ಷಮಾ ಬಿಂದು ತಮ್ಮನ್ನೇ ತಾವೇ ಮದುವೆ ಮಾಡಿಕೊಂಡಿದ್ದಾರೆ.

ಈ ಮದುವೆಯಲ್ಲಿ ಕ್ಷಮಾ ಎಲ್ಲ ಸಂಪ್ರದಾಯಗಳನ್ನು ಪಾಲನೆ ಮಾಡಿದ್ದಾರೆ. ಹಳದಿ ಹಾಗೂ ಮೆಹಂದಿ ಕಾರ್ಯಕ್ರಮವೂ ಸಂಪ್ರದಾಯದಂತೆ ನಡೆಯಿತು. . ವಿವಾಹದ ಬಳಿಕ ಎರಡು ವಾರ ಕಾಲ ಗೋವಾಗೆ ಹನಿಮೂನ್‌ಗೆ ತೆರಳುವುದಾಗಿ ಕ್ಷಮಾ ಹೇಳಿದ್ದಾರೆ.
ವಿವಾಹದ ಬಳಿಕ ಫೇಸ್ಬುಕ್‌ನಲ್ಲಿ ವೀಡಿಯೋ ಹರಿಬಿಟ್ಟಿರುವ ಕ್ಷಮಾ, ತನ್ನ ಮದುವೆಗೆ ಎಲ್ಲರ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ವಿವಾಹಕ್ಕೆ ಶುಭ ಕೋರಿದ ಎಲ್ಲರಿಗೂ ನಾನು ಕೃತಜ್ಞಳು ಎಂದು ಹೇಳಿದ್ದಾರೆ.ಮದುವೆಯು 40 ನಿಮಿಷಗಳಲ್ಲಿ ನಡೆಯಿತು ಮತ್ತು ಅವಳ ಸ್ನೇಹಿತರು ಅವಳನ್ನು ಉದ್ದಕ್ಕೂ ಬೆಂಬಲಿಸುವ ಭರವಸೆ ನೀಡಿದರು. “ಇತರ ವಧುಗಳಿಗಿಂತ ಭಿನ್ನವಾಗಿ, ನಾನು ಮದುವೆಯ ನಂತರ ನನ್ನ ಮನೆಯಿಂದ ಹೊರಹೋಗಬೇಕಾಗಿಲ್ಲ” ಎಂದು ವಧು ಹೇಳಿದಳು,

ಒಬ್ಬ ವ್ಯಕ್ತಿಯು ತನ್ನನ್ನು ತಾನು ಮದುವೆಯಾಗುವುದಕ್ಕೆ ಸೋಲೊಗಮಿ ಎನ್ನುತ್ತಾರೆ. ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರು ಜೀವನ ಸಂಗಾತಿಯಾಗಿ ಮೇಲೆ ತಮ್ಮನ್ನು ತಾವೇ ಆರಿಸಿಕೊಳ್ಳುತ್ತಿದ್ದಾರೆ. ಕ್ಷಮಾ ಅವರ ಸ್ವಯಂ-ವಿವಾಹದೊಂದಿಗೆ ಈ ಪ್ರವೃತ್ತಿಯು ಈಗ ಭಾರತವನ್ನೂ ತಲುಪಿದೆ.
ಸ್ವಯಂ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದು, ಏಕವ್ಯಕ್ತಿತ್ವದ ಪ್ರತಿಪಾದಕರು ತಮ್ಮನ್ನು ಮದುವೆಯಾಗುವುದು ವಿಮೋಚನೆ ಎಂದು ಹೇಳುತ್ತಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ