ಉಡುಪಿ : ಕರ್ನಾಟಕ ಹೆಸರಾಂತ ಕಡಲ ತೀರಗಳಲ್ಲಿ ಒಂದಾಗಿರುವ ಮಲ್ಪೆ ಕಡಲತೀರದಲ್ಲಿ ಮುಳುಗಡೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೀಚ್ ಅಭಿವೃದ್ಧಿ ಸಮಿತಿಯು ಆಗಮಿಸುವ ಪ್ರವಾಸಿಗರು ನೀರಿಗೆ ಇಳಿಯದಂತೆ ಮಾಡಲು ಬೀಚ್ನಲ್ಲಿ ಬಲೆಗಳಿಂದ ಬೇಲಿ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
advertisement
ಎಷ್ಟೇ ಮನವಿ ಮಾಡಿದರೂ ಪ್ರವಾಸಿಗರು ಕಿವಿಗೊಡದ ಕಾರಣ ಬೀಚ್ ಅಭಿವೃದ್ಧಿ ಸಮಿತಿ ಈಗ ಈ ಕ್ರಮಕ್ಕೆ ಮುಂದಾಗಿದೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ತಡೆಯಲು ಮಲ್ಪೆ ಕಡಲತೀರದ ಪ್ರಮುಖ ಪ್ರದೇಶಗಳಲ್ಲಿ ಒಂದು ಕಿ.ಮೀ. ಉದ್ದ ಹಾಗೂ ಆರು ಅಡಿ ಎತ್ತರದ ಬಲೆಯನ್ನು ಬೇಳಿಯಂತೆ ಕಟ್ಟಲಾಗಿದೆ. ಅಪಾಯದ ಬಗ್ಗೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಕೆಂಪು ಧ್ವಜಗಳು ಹಾಗೂ ಪ್ರವಾಸಿಗರನ್ನು ಎಚ್ಚರಿಸುವ ಬ್ಯಾನರ್ಗಳನ್ನು ಹಾಕಲಾಗಿದೆ. ಪ್ರವಾಸಿಗರಿಗೆ ಸುರಕ್ಷಿತ ಸ್ಥಳ ಎಂದು ಸೂಚಿಸುವ ಪ್ರದೇಶಕ್ಕೆ ಹಳದಿ ಧ್ವಜಗಳನ್ನು ಕೆಲವು ಸ್ಥಳಗಳಲ್ಲಿ ಇರಿಸಲಾಗಿದೆ
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ | |
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ