ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕೆ ಬಿಜೆಪಿಯಿಂದ ಅಮಾನತುಗೊಂಡ ನೂಪುರ್ ಶರ್ಮಾ ಅವರ ಪರವಾಗಿ ಟ್ವೀಟ್ ಮಾಡಿದ್ದಕ್ಕೆ ತನಗೆ ಜೀವ ಬೆದರಿಕೆಗಳು ಬಂದಿವೆ ಎಂದು ಡಚ್ ಸಂಸದ, ‘ಪಾರ್ಟಿ ಫಾರ್ ಫ್ರೀಡಂ’ನ ಮುಖ್ಯಸ್ಥ ಗೀರ್ಟ್ ವೈಲ್ಡರ್ಸ್ ಹೇಳಿದ್ದಾರೆ.
ಪ್ರವಾದಿ ಹೇಳಿಕೆಯ ವಿವಾದದ ಕುರಿತು ಅಮಾನತುಗೊಂಡ ಬಿಜೆಪಿ ನಾಯಕ ನೂಪುರ್ ಶರ್ಮಾ ಪರವಾಗಿ ಟ್ವೀಟ್ ಮಾಡಿರುವ ಡಚ್ ಬಲಪಂಥೀಯ ರಾಜಕಾರಣಿ ಗೀರ್ಟ್ ವೈಲ್ಡರ್ಸ್, “ನೂರಾರು ಕೊಲೆ ಬೆದರಿಕೆಗಳನ್ನು ಸ್ವೀಕರಿಸಿದ ನಂತರ ತಾನು ನೂಪುರ ಶರ್ಮಾ ಅವರಿಗೆ ಬೆಂಬಲದ ನಿರ್ಧಾರ ಇನ್ನಷ್ಟು ದೃಢವಾಗಲಿದೆ ಮತ್ತು ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ. ”
ತಮಗೆ ಬಂದ ಬೆದರಿಕೆ ಸಂದೇಶಗಳನ್ನು ಅವರು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕಾಗಿಯೇ ನಾನು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದು. ನೂರಾರು ಕೊಲೆ ಬೆದರಿಕೆಗಳು ನನಗೆ ಬಂದಿವೆ. ಇವುಗಳು, ನಾನು ಮತ್ತಷ್ಟು ದೃಢವಾಗಿ ಮತ್ತು ಹೆಮ್ಮೆಯಿಂದ ಅವರನ್ನು ಬೆಂಬಲಿಸುವಂತೆ ಮಾಡಿವೆ. ಯಾಕೆಂದರೆ ಕೆಟ್ಟದ್ದು ಎಂದಿಗೂ ಗೆಲ್ಲಲಾರದು…. ಎಂದಿಗೂ…’ ಎಂದು ಗೀರ್ಟ್ ವೈಲ್ಡರ್ಸ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಏತನ್ಮಧ್ಯೆ, ಭಾನುವಾರದ ತನ್ನ ಇತ್ತೀಚಿನ ಟ್ವೀಟ್‌ನಲ್ಲಿ, ಡಚ್ ರಾಜಕಾರಣಿ ‘ನಾನು ಭಾರತೀಯನೂ ಅಲ್ಲ, ಹಿಂದುವೂ ಅಲ್ಲ. ಆದರೆ ನನಗೆ ಒಂದು ವಿಷಯ ಗೊತ್ತು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವುದನ್ನು ಸಮರ್ಥಿಸುವುದು, ಪ್ರವಾದಿ ಬಗ್ಗೆ ಸತ್ಯ ಹೇಳುವುದು ಸರಿಯಲ್ಲ ಎಂಬ ವಾದ ಜಾತ್ಯತೀತತೆಯ ಅರ್ಥ ಆಗಬಾರದು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವ ಸಂದರ್ಭದಲ್ಲಿ ನೂಪುರ್ ಶರ್ಮಾ ಪ್ರತಿಕ್ರಿಯಿಸಿರುವುದು ಸಂಪೂರ್ಣ ಸಮರ್ಥನೀಯ’ ಎಂದು ಗೀರ್ಟ್ ವೈಲ್ಡರ್ಸ್ ಹೇಳಿದ್ದಾರೆ.
ನೂಪುರ್ ಶರ್ಮಾ ಅವರನ್ನು ಸಾರ್ವಜನಿಕವಾಗಿ ಸಮರ್ಥಿಸಲು ಮತ್ತು ಬೆಂಬಲಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ ಗೀರ್ಟ್ ವೈಲ್ಡರ್ಸ್, “ಅಪರಾಧಿಗಳು ಮತ್ತು ಭಯೋತ್ಪಾದಕರು ಮಾತ್ರ ತಮ್ಮ ಧಾರ್ಮಿಕ ಅಸಹಿಷ್ಣುತೆ ಮತ್ತು ದ್ವೇಷವನ್ನು ವ್ಯಕ್ತಪಡಿಸಲು ಬೀದಿ ಹಿಂಸಾಚಾರವನ್ನು ಬಳಸುತ್ತಾರೆ” ಎಂದು ಹೇಳಿದ್ದಾರೆ.
ಪ್ರವಾದಿ ಮೊಹಮ್ಮದ್ ಅವರ ಕುರಿತು ಮಾಧ್ಯಮವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಪಕ್ಷದ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ | |
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ