ರಾಷ್ಟ್ರಪತಿ ಚುನಾವಣೆ: ಅಧಿಸೂಚನೆ ಪ್ರಕಟಿಸಿದ ಚುನಾವಣಾ ಆಯೋಗ

ನವದೆಹಲಿ: ಜುಲೈನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಅಧಿಸೂಚನೆ ಪ್ರಕಟಿಸಿದೆ. ಅಧಿಸೂಚನೆ ಪ್ರಕಾರ, ಜೂನ್ 29 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜೂನ್ 30ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜುಲೈ 02ರಂದು ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. ಜುಲೈ 18 ಸೋಮವಾರದಂದು ಮತದಾನ ನಡೆಯಲಿದೆ. ಹಾಗೂ ಜುಲೈ 21ರಂದು ಮತ ಎಣಿಕೆ … Continued

ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಭರ್ಜರಿ ಗೆಲುವು

ಬೆಳಗಾವಿ: ವಾಯವ್ಯ ಪದವೀಧರ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿಗಿಂತ 34,693 ಹೆಚ್ಚು ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ನಿರಾಣಿ 44,815 ಮತ ಪಡೆದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಸಂಕ ಅವರು 10,112 ಮತಗಳನ್ನಷ್ಟೇ ಪಡೆದರು.ಚುನಾವಣೆಯಲ್ಲಿ ಒಟ್ಟು 65,922 ಮತಗಳು ಚಲಾವಣೆಯಾಗಿದ್ದು, 9006 … Continued

ಕಾಶ್ಮೀರಿ ಪಂಡಿತರ ಹತ್ಯೆ- ಗೋವು ಸಾಗಿಸುವ ಮುಸ್ಲಿಂ ಡ್ರೈವರ್​ ಮೇಲಿನ ಹಲ್ಲೆ ಎರಡೂ ಒಂದೇ ತೆರನಾದುದು: ನಟಿ ಸಾಯಿ ಪಲ್ಲವಿ

ನವದೆಹಲಿ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಟಿ ಸಾಯಿ ಪಲ್ಲವಿ ಖಂಡಿಸಿದ್ದಾರೆ ಹಾಗೂ ಧಾರ್ಮಿಕ ಮೂಲಭೂತವಾದವನ್ನು ಕಟುವಾಗಿ ಟೀಕಿಸಿದ್ದಾರೆ ಕಾಶ್ಮೀರಿಗಳ ವಲಸೆಯನ್ನು ಗೋಸಂರಕ್ಷಕತೆಗೆ ಹೋಲಿಸಿದ್ದಾರೆ. “ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ಕಾಶ್ಮೀರಿ ಫೈಲ್ಸ್‌ ಚಿತ್ರ ತೋರಿಸಿವೆ. ನೀವು ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ಪರಿಗಣಿಸುತ್ತಿದ್ದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ … Continued

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತದ ತಂಡ ಪ್ರಕಟ: ಹಾರ್ದಿಕ್ ಪಾಂಡ್ಯ ನಾಯಕನಾಗಿ ಆಯ್ಕೆ

ಮುಂಬೈ: ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಆಲ್‌ ರೌಂಡರ್‌ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನ್ನಾಗಿ ಆಯ್ಕೆ ಮಾಡಲಾಗಿದೆ. ಭುವನೇಶ್ವರಕುಮಾರ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಬ್ಯಾಟಿಂಗ್‍ನಲ್ಲಿ ಮಿಂಚಿದ್ದ ರಾಹುಲ್ ತ್ರಿಪಾಠಿ ಅವರು ಆಯ್ಕೆಗಾರರು ಪರಿಗಣಿಸಿದ್ದಾರೆ. ಆಫ್ರಿಕಾ ಸರಣಿಯಿಂದ ಅವಕಾಶ ವಂಚಿತರಾಗಿದ್ದ ಸಂಜು ಸ್ಯಾಮ್ಸನ್‍ಗೆ ತಂಡಕ್ಕೆ ಆಯ್ಕೆ ಮಾಡಲಾಗಿದೆ. … Continued

3 ದಿನ, 30 ತಾಸುಗಳ ಕಾಲ ವಿಚಾರಣೆ : ಶುಕ್ರವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ ಇಡಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಶುಕ್ರವಾರ ಮತ್ತೆ ಸಮನ್ಸ್ ಜಾರಿ ಮಾಡಿದೆ. ಗುರುವಾರ ವಿನಾಯಿತಿ ನೀಡುವಂತೆ ಕಾಂಗ್ರೆಸ್ ಸಂಸದರು ಕೋರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಗೆ ಬುಧವಾರ ಬೆಳಿಗ್ಗೆ 11:35ರ ಸುಮಾರಿಗೆ ರಾಹುಲ್ … Continued

ರಾಜ್ಯದಲ್ಲಿ ಏರುತ್ತಿರುವ ಕೊರೊನಾ ಸೋಂಕು : ಗುರುವಾರ 648 ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಇಂದು, ಗುರುವಾರ ರಾಜ್ಯದಲ್ಲಿ ಒಟ್ಟು 648 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಜೊತೆಗೆ ಒಂದು ಸಾವು ವರದಿಯಾಗಿದೆ. 532 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,997ಕ್ಕೆ ತಲುಪಿದೆ. ರಾಜ್ಯದ ಇಂದಿನ ಸಕಾರಾತ್ಮಕ ಶೇ. … Continued

ಓಪನ್ ರೂಫ್ ಆಡಿ ಕಾರಿನಲ್ಲಿ ವಾಹನ ದಟ್ಟಣೆ ರಸ್ತೆಯಲ್ಲಿ ಡ್ಯಾನ್ಸ್‌ ಮಾಡುತ್ತ ಸೆಲ್ಫಿ ತೆಗೆದುಕೊಂಡ ವರ: ದುಸ್ಸಾಹಸಕ್ಕೆ ಬಿತ್ತು 2 ಲಕ್ಷ ರೂ.ದಂಡ | ವೀಕ್ಷಿಸಿ

ನವದೆಹಲಿ: ಉತ್ತರ ಪ್ರದೇಶದಲ್ಲಿ ವರನ ಅದ್ಧೂರಿ ವಿವಾಹ ಮೆರವಣಿಗೆಗೆ ದಂಡದ ರೂಪದಲ್ಲಿ ₹ 2 ಲಕ್ಷ ವೆಚ್ಚವಾಗಿದೆ. ವರನು ತನ್ನ ಸ್ನೇಹಿತರೊಂದಿಗೆ ಮುಜಾಫರ್‌ನಗರದ ಜನನಿಬಿಡ ರಸ್ತೆಯಲ್ಲಿ ಕಾರಿನ ತೆರೆದ ಛಾವಣಿಯ ಮೇಲೆ ನೃತ್ಯ ಮಾಡುತ್ತಿರುವುದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕ್ಲಿಪ್ ಪಾರ್ಟಿ ಗಾಳಿಯಲ್ಲಿ ಕೈಗಳನ್ನು ಮೇಲಕ್ಕೆತ್ತಿ ಗ್ರೂವ್ ಮಾಡುವುದನ್ನು ಮತ್ತು ಉನ್ನತ-ಮಟ್ಟದ ಕಾರುಗಳ … Continued

ನಾಲ್ಕು ತಿಂಗಳ ಕಾಲ ಭಾರತೀಯ ಗೋಧಿಯ ರಫ್ತು, ಮರು-ರಫ್ತುಗಳನ್ನು ಸ್ಥಗಿತಗೊಳಿಸಿದ ಯುಎಇ

ಅಬುಧಾಬಿ/ನವದೆಹಲಿ: ಭಾರತೀಯ ಗೋಧಿಯನ್ನು ಮರು-ಮಾರಾಟ ಮಾಡುವುದನ್ನು ತಡೆಯಲು, ಯುಎಇ ಸರ್ಕಾರವು ಭಾರತದಿಂದ ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತು ಮತ್ತು ಮರು-ರಫ್ತುಗಳನ್ನು ನಾಲ್ಕು ತಿಂಗಳ ಅವಧಿಗೆ ಸ್ಥಗಿತಗೊಳಿಸಲು ಆದೇಶಿಸಿದೆ ಎಂದು ಗಲ್ಫ್ ರಾಷ್ಟ್ರದ ಆರ್ಥಿಕ ಸಚಿವಾಲಯವನ್ನು ಉಲ್ಲೇಖಿಸಿ ಏಜೆನ್ಸಿಗಳು ಬುಧವಾರ ವರದಿ ಮಾಡಿವೆ. ಇದು ಯುಎಇಗೆ ಮಾರಾಟವಾಗುವ ಭಾರತೀಯ ಗೋಧಿಯನ್ನು ಯುಎಇಯ ದೇಶೀಯ ಬಳಕೆಯನ್ನು ಹೊರತುಪಡಿಸಿ … Continued

ಪರಿಷತ್‌ ಚುನಾವಣೆ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಗೆಲುವು

ಬೆಳಗಾವಿ : ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಫಲಿತಾಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಬಿಜೆಪಿ ತೆಕ್ಕಯಿಂದ ಸ್ಥಾನವನ್ನು ಕಸಿದುಕೊಂಡಿದೆ. ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಬಿಜೆಪಿಯ ಅರುಣ ಶಹಾಪುರ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಪ್ರಕಾಶ ಹುಕ್ಕೇರಿ 11,460 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ‌ ಅಭ್ಯರ್ಥಿ ಅರುಣ … Continued

ಬಿಷಪ್ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ರೆವರೆಂಡ್ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಪ್ರಸನ್ನಕುಮಾರ್ ಸ್ಯಾಮ್ಯುಯೆಲ್ ಅವರು ಚರ್ಚ್ ಆಫ್ ಸೌತ್ ಇಂಡಿಯಾ (CSI) ಕರ್ನಾಟಕ ಸೆಂಟ್ರಲ್ ಡಯಾಸಿಸ್‌ನ ಬೆಂಗಳೂರು ಬಿಷಪ್. 2015ರಲ್ಲಿ ನಗರದ ಶಾಲೆಯೊಂದರ ಆವರಣದಲ್ಲಿ ಕೆಲ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ … Continued