ಸಿಂಹಿಣಿ ಮತ್ತು 40 ಮೊಸಳೆಗಳು… ನದಿಯಲ್ಲಿ ಸತ್ತ ಹಿಪ್ಪೋ ಮೇಲೆ ನಿಂತ ಸಿಂಹಿಣಿಯನ್ನು ಸುತ್ತುವರಿದ 40 ಮೊಸಳೆಗಳು :ಮುಂದೇನಾಯ್ತು ನೋಡಿ

ನೀರಿನಲ್ಲಿ ಸುಮಾರು 40 ಮೊಸಳೆಗಳು ಸುತ್ತುವರಿದ ಹಾಗೂ ಈ ಮೊಸಳೆಗಳ ಮಧ್ಯೆ ಸಿಂಹವು ಸತ್ತ ಹಿಪ್ಪೋ ಮೇಲೆ ಸಿಕ್ಕಿಹಾಕಿಕೊಂಡ ಅದ್ಭುತ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆಂಟೋನಿ ಪೆಸಿ ಅವರು ಮೇ 23, 2022 ರಂದು ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಗೇಮ್ ಡ್ರೈವ್‌ನಲ್ಲಿ ಈ ವೀಡಿಯೊವನ್ನು ಸೆರೆಹಿಡಿದಿದ್ದಾರೆ. ಅವರು ನದಿಯಲ್ಲಿ ಹಸಿದ ಪ್ರಾಣಿಭಕ್ಷಕಗಳಿಂದ ಸುತ್ತುವರಿದ ತೇಲುತ್ತಿರುವ ಹಿಪಪಾಟಮಸ್‌ನ ದೈತ್ಯ ಮೃತದೇಹವನ್ನು ಗುರುತಿಸಿದರು.

ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಸಿಂಹಿಣಿಯೊಂದು ಹಿಪ್ಪೋ ದೇಹದ ಮೇಲೆ ನಿಂತಿರುವುದನ್ನು ಕಾಣಬಹುದು. ಸಮೀಪಿಸುತ್ತಿರುವ ಮೊಸಳೆಗಳಿಂದ ಸಿಂಹಿಣಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿಂಹಿಣಿ ನೀರಿನಲ್ಲಿ ತನ್ನ ಸುತ್ತಲಿನ 40 ಮೊಸಳೆಗಳ ಮಧ್ಯೆ ಹೇಗೆ ತಪ್ಪಿಸಿಕೊಂಡಿದೆ ಎಂಬುದನ್ನು ಈ ವೀಡಿಯೊ ದೃಶ್ಯಾವಳಿ ತೋರಿಸುತ್ತದೆ.

ಸಿಂಹಿಣಿಯು ಸತ್ತ ಹಿಪ್ಪೋದಿಂದ ಜಿಗಿಯಲು ಪ್ರಯತ್ನಿಸುತ್ತಿರುವಾಗ, ಅದರ ಮುಂದೆ ಈಜುತ್ತಿದ್ದ ಮೊಸಳೆಗಳು ತಮ್ಮ ದವಡೆಗಳನ್ನು ತೆರೆದವು. ಮೊಸಳೆಗಳು ಸಿಂಹಿಣಿಯನ್ನು ಹಿಡಿಯಲು ಪ್ರಯತ್ನಿಸುತ್ತಿರುವಾಗ ಸಿಂಹಿಣಿ ಪಾರಾಗಲು ಪ್ರಯತ್ನಿಸಿ ಮೊಸಳೆಗಳ ಮೇಲಿಂದ ಜಿಗಿಯುತ್ತದೆ. ವೇಗವಾಗಿ ಈಜುವ ಮೂಲಕ ಅದ್ಭುತವಾಗಿ ಮೊಸಳೆಗಳ ದವಡೆಯಿಂದ ಪಾರಾಗುತ್ತದೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement