ಚಿರಾಪುಂಜಿಯಲ್ಲಿ ಒಂದೇ ದಿನಕ್ಕೆ ಸುರಿದ 972 ಮಿಮೀ ಮಳೆ…! 27 ವರ್ಷಗಳಲ್ಲೇ ಜೂನ್‌ನಲ್ಲಿ ಸುರಿದ ಅತಿ ಹೆಚ್ಚು ಮಳೆ

ಒಂದು ದಿನದಲ್ಲಿ 811.6 ಮಿಮೀ ಮಳೆಯನ್ನು ದಾಖಲಿಸಿದ ಕೇವಲ ಎರಡು ದಿನಗಳ ನಂತರ, ಮೇಘಾಲಯದ ಚಿರಾಪುಂಜಿಯಲ್ಲಿ ಶುಕ್ರವಾರ ಬೆಳಿಗ್ಗೆ 8:30 ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ 972 ಮಿಮೀ ಮಳೆ ಸುರಿದಿದೆ. ಇದು 1995ರ ನಂತರ ಜೂನ್‌ ತಿಂಗಳಲ್ಲಿ ೊಂದು ದಿನದಲ್ಲಿ ಸುರಿದ ಅತಿ ಹೆಚ್ಚು ಮಳೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಐಎಂಡಿ ದಾಖಲೆಗಳನ್ನು ಇಡಲು ಪ್ರಾರಂಭಿಸಿದಂದಿನಿಂದ ವಿಶ್ವದ ಅತ್ಯಂತ ಆರ್ದ್ರ ಸ್ಥಳಗಳಲ್ಲಿ ಒಂದಾದ ಚಿರಾಪುಂಜಿ ಒಂಬತ್ತು ಸಂದರ್ಭಗಳಲ್ಲಿ ಜೂನ್ ತಿಂಗಳಲ್ಲಿ 800 ಮಿಮೀ ಗಿಂತ ಹೆಚ್ಚು ಮಳೆಯನ್ನು ದಾಖಲಿಸಿದೆ ಎಂದು ಐಎಂಡಿ ಡೇಟಾ ತೋರಿಸಿದೆ.
ಶುಕ್ರವಾರದ ವರೆಗೆ, ಚಿರಾಪುಂಜಿಯಲ್ಲಿ ಈ ತಿಂಗಳು ಒಟ್ಟು 4081.3 ಮಿಮೀ ಮಳೆಯಾಗಿದೆ ಎಂದು ಗುವಾಹತಿಯಲ್ಲಿರುವ IMD ಯ ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಸುನೀತ್ ದಾಸ್ ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ 8:30 ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ, ಪೂರ್ವ ಖಾಸಿ ಹಿಲ್ಸ್‌ನಲ್ಲಿರುವ ಪಟ್ಟಣವು ಮಳೆ ಮಾಪಕದಲ್ಲಿ 811.2 ಮಿಮೀ ಮಳೆ ಅಳೆಯಿತು.
ಜೂನ್ 16, 1995 ರಂದು, ಚಿರಾಪುಂಜಿ 1563.3 ಮಿಮೀ ಮಳೆಯನ್ನು ದಾಖಲಿಸಿತ್ತು. ಒಂದು ದಿನ ಮೊದಲು, ಜೂನ್ 15, 1995 ರಂದು, ಇದು 930 ಮಿಮೀ ಮಳೆಯನ್ನು ದಾಖಲಿಸಿತ್ತು.

ಯಾವಾಗಲೂ ಈ ರೀತಿ ಮಳೆಯಾಗುವುದಿಲ್ಲ. 50-60 ಸೆಂ.ಮೀ (ಚಿರಾಪುಂಜಿಯಲ್ಲಿ) ಪ್ರತಿ ವರ್ಷ ಒಮ್ಮೆ ಅಥವಾ ಎರಡು ಬಾರಿ ಸಾಮಾನ್ಯವಾಗಿದೆ. ಆದರೆ 80 ಸೆಂ ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣವು ಖಂಡಿತವಾಗಿಯೂ ಸಾಮಾನ್ಯವಲ್ಲ” ಎಂದು ಸುನೀತ್‌ ದಾಸ್ ತಿಳಿಸಿದ್ದಾರೆ.
ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಟ್ರಫ್ ಮುಂದುವರಿದಿದೆ ಮತ್ತು ನೈಋತ್ಯ ಮಾರುತಗಳು ನಿರಂತರವಾಗಿ ಬಂಗಾಳ ಕೊಲ್ಲಿಯಿಂದ ಸಾಕಷ್ಟು ತೇವಾಂಶವನ್ನು ತರುತ್ತಿವೆ. ಈ ಮಾರುತಗಳು ಖೈ ಬೆಟ್ಟಗಳ ಬಂಡೆಗಳಿಗೆ ಅಪ್ಪಳಿಸುತ್ತವೆ ಮತ್ತು ಮಳೆಯನ್ನು ಸುರಿಸುತ್ತವೆ” ಎಂದು ಅವರು ಹೇಳಿದರು.
ಚಿರಾಪುಂಜಿಯಲ್ಲಿ ಗುರುವಾರ 673.6 ಮಿಮೀ, ಬುಧವಾರ 811.6 ಮಿಮೀ, ಮಂಗಳವಾರ 62.6 ಮಿಮೀ, ಸೋಮವಾರ 293 ಮಿಮೀ ಮತ್ತು ಭಾನುವಾರ 354 ಮಿಮೀ ಮಳೆ ದಾಖಲಾಗಿದೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಒಂದು ಅಥವಾ ಎರಡು ದಿನಗಳ ಕಾಲ ವಿಪರೀತ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಅದರ ನಂತರ, ತೀವ್ರತೆಯು ಕಡಿಮೆಯಾಗುತ್ತದೆ ಎಂದು ವಿಜ್ಞಾನಿ ಹೇಳಿದರು. ಚಿರಾಪುಂಜಿಯಿಂದ 10 ಕಿಮೀ ವೈಮಾನಿಕ ದೂರದಲ್ಲಿ, ಭಾರತದ ಅತ್ಯಂತ ಆರ್ದ್ರ ಸ್ಥಳವಾದ ಮೌಸಿನ್ರಾಮ್, ಬುಧವಾರ ಬೆಳಿಗ್ಗೆ 8:30 ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ 710.6 ಮಿಮೀ ಮಳೆಯನ್ನು ದಾಖಲಿಸಿದೆ, ಇದು ಜೂನ್ 1966ರ ನಂತರ ಗರಿಷ್ಠವಾಗಿದೆ.
ಜೂನ್ 10, 1966 ರಂದು, ಮೌಸಿನ್ರಾಮ್ 717.6 ಮಿಮೀ ಮಳೆಯನ್ನು ದಾಖಲಿಸಿತ್ತು. ಜೂನ್ 7, 1966 ರಂದು, ಇದು 944.7 ಮಿಮೀ ಮಳೆಯನ್ನು ದಾಖಲಿಸಿರುವುದು IMD ದಾಖಲೆಗಳನ್ನು ನಿರ್ವಹಿಸಲು ಪ್ರಾರಂಭಿಸಿದ ನಂತರ ಜೂನ್ ತಿಂಗಳಲ್ಲಿ ಒಂದು ದಿನಕ್ಕೆ ಸುರಿದ ಅತ್ಯಧಿಕ ಮಳೆಯಾಗಿದೆ.

ಜೂನ್ 8, 2015 ರಂದು ಪಟ್ಟಣವು 24-ಗಂಟೆಗಳಲ್ಲಿ 623.4 ಮಿಮೀ ಮಳೆ ಸುರಿದಿತ್ತು. “ಮೌಸಿನ್ರಾಮ್ ಪ್ರಸ್ತುತ ಭಾರತದಲ್ಲಿ ಅತ್ಯಂತ ತೇವವಾದ ಸ್ಥಳವಾಗಿದೆ, ಸರಾಸರಿ ವಾರ್ಷಿಕ ಮಳೆ 11802.4 ಮಿಮೀ (1974-2022 ಅವಧಿಯ ಸರಾಸರಿ) ಚಿರಾಪುಂಜಿ 11359 ಮೀಮೀ ಮಳೆ ಒಂದು ವರ್ಷದಲ್ಲಿ ಮಿಮೀ ಮಳೆ (1971-2020ರ ಅವಧಿಯ ಸರಾಸರಿ) ಪಡೆಯುತ್ತದೆ ಎಂದು ದಾಸ್ ಹೇಳಿದರು.
ಒಟ್ಟಾರೆಯಾಗಿ, ಈಶಾನ್ಯ ಮತ್ತು ಪೂರ್ವ ಭಾರತದಲ್ಲಿ 220.3 ಮಿಮೀ ಮಳೆಯಾಗಿದೆ, ಇದು ಮಾನ್ಸೂನ್ ಪ್ರಾರಂಭವಾಗುವ ಜೂನ್ 1 ರಿಂದ ಸಾಮಾನ್ಯಕ್ಕಿಂತ 39% ಹೆಚ್ಚು ಎಂದು ಅವರು ಹೇಳಿದ್ದಾರೆ.
ಜೂನ್ 1 ರಿಂದ ಮೇಘಾಲಯದಲ್ಲಿ 865.7 ಮಿಮೀ ಮಳೆ ಸುರಿಯುತ್ತಿದೆ, ಇದು ಸಾಮಾನ್ಯಕ್ಕಿಂತ 153% ಹೆಚ್ಚು, ಅರುಣಾಚಲ ಪ್ರದೇಶದಲ್ಲಿ 253.1 ಮಿಮೀ ಮಳೆಯಾಗಿದೆ, ಸಾಮಾನ್ಯಕ್ಕಿಂತ 22 ಶೇಕಡಾ ಹೆಚ್ಚು, ಅಸ್ಸಾಂ 372.9 ಮಿಮೀ ಮಳೆಯನ್ನು ದಾಖಲಿಸಿದೆ, ಇದು ಸಾಮಾನ್ಯಕ್ಕಿಂತ 79% ಕ್ಕಿಂತ ಹೆಚ್ಚು. ಆದಾಗ್ಯೂ, ಈ ಪ್ರದೇಶದ ಎಲ್ಲಾ ರಾಜ್ಯಗಳು ಉತ್ತಮ ಮಳೆಯನ್ನು ಕಂಡಿಲ್ಲ. ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಶೇ.50, ಶೇ.46 ಮತ್ತು ಶೇ.38ರಷ್ಟು ಮಳೆ ಕೊರತೆಯಾಗಿದೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement