ದ್ವಿತೀಯ ಪಿಯು ಫಲಿತಾಂಶ: ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದವರು

ಬೆಂಗಳೂರು: ಬೆಂಗಳೂರು: ಕರ್ನಾಟಕ ಪಿಯು ಬೋರ್ಡ್‌ 2021-2022ನೇ ಸಾಲಿನ ಇಂದು (ಜೂನ್ 18) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಅನೇಕ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಂಗಳೂರು: ಕರ್ನಾಟಕ ಪಿಯು ಬೋರ್ಡ್‌ 2021-2022ನೇ ಸಾಲಿನ ಇಂದು (ಜೂನ್ 18) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ಶೇ.61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸೀಮ್ರಾನ್ ಶೇಷರಾವ್ ಹಾಗೂ ವಾಣಿಜ್ಯ ವಿಭಾಗದಲ್ಲಿ ವಾಣಿಜ್ಯ ವಿಭಾಗದಲ್ಲಿ ಮಾನವ್ ವಿನಯ್ ಕೇಜ್ರಿವಾಲ್, ನೀಲು ಸಿಂಗ್, ಆಕಾಶ್ ದಾಸ್‌, ನೇಹಾ ಬಿ.ಆರ್ ಅವರು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಶ್ವೇತಾ ಭೀಮಶಂಕರ ಬೈರಗೊಂಡ ಮತ್ತು ಕೊಟ್ಟೂರಿನ ಸಹನಾ ಮಡಿವಾಳ ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೆ ಹಂಚಿಕೊಂಡಿದ್ದಾರೆ.

ಮಲ್ಲೇಶ್ವರದ ಪಿಯೂ ಬೋರ್ಡ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಚಿವ ಬಿ.ಸಿ.ನಾಗೇಶ ಅವರು ಟಾಪರ್ಸ್​ಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಕಲಾ ವಿಭಾಗದಲ್ಲಿ ಶ್ವೇತಾ ಭೀಮಶಂಕರ ಹಾಗೂ ಸಹನಾ ಅವರು 600ಕ್ಕೆ 594 ಅಂಕಗಳನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಾನವ್ ವಿನಯ್ ಕೇಜ್ರಿವಾಲ್, ನೀಲು ಸಿಂಗ್, ಆಕಾಶ್ ದಾಸ್‌, ನೇಹಾ ಬಿ.ಆರ್ ಅವರು 600 ಕ್ಕೆ 596 ಅಂಕಗಳಿಸಿದ್ದಾರೆ ವಿಜ್ಞಾನ ವಿಭಾಗದಲ್ಲಿ ಸೀಮ್ರಾನ್ ಅವರು 600ಕ್ಕೆ 598 ಅಂಕಗಳನ್ನು ಪಡೆದಿದ್ದಾರೆ. ಶ್ರೀಕೃಷ್ಣ ಪೇಜತಾಯ, ಸಾಯಿ ಚಿರಾಗ್, ಆಲಂ ಮೊಹಮ್ಮಸ್ ರಫೀಕ್ ಹಾಗೂ ಭವ್ಯಾ ನಾಯಕ್ ಅವರು 600 ಕ್ಕೆ 597 ಅಂಕ ಗಳಿಸಿದ್ದಾರೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರು…

ಸಿಮ್ರಾನ್ ಶೇಷರಾವ್- 600 ಕ್ಕೆ 598 ಅಂಕ
ಶ್ರೀಕೃಷ್ಣ ಪೇಜತಾಯ -600 ಕ್ಕೆ 597 ಅಂಕ
ಸಾಯಿ ಚಿರಾಗ್ -600ಕ್ಕೆ 597 ಅಂಕ
ಆಲಂ ಮೊಹಮ್ಮಸ್ ರಫೀಕ್- 600 ಕ್ಕೆ 597 ಅಂಕ
ಭವ್ಯಾ ನಾಯಕ್ – 600 ಕ್ಕೆ 597

ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರು..

ಶ್ವೇತಾ ಭೈರಾಗೊಂಡ- 600 ಕ್ಕೆ 594 ಅಂಕ
ಸಹನಾ ಮಡಿವಾಳ- 600 ಕ್ಕೆ 594

ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದವರು…

ನೀಲು ಸಿಂಗ್ – 600 ಕ್ಕೆ 596 ಅಂಕ
ಆಕಾಶ್ ದಾಸ್ – 600 ಕ್ಕೆ 596 ಅಂಕ
ನೇಹಾ ಬಿ.ಆರ್ -600 ಕ್ಕೆ 596 ಅಂಕ
ಮಾನವ್ ವಿನಯ್ ಕೇಜ್ರಿವಾಲ್ -600 ಕ್ಕೆ 596 ಅಂಕ

ಹಲವು ವಿದ್ಯಾರ್ಥಿಗಳು ಹಲವು ವಿಷಯಕ್ಕೆ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ. ಅದರಲ್ಲಿ ಗಣಿತ ಶಾಸ್ತ್ರದಲ್ಲಿ 14,210 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದರೆ, ಗಣಕ ವಿಜ್ಞಾನದಲ್ಲಿ 4858, ರಸಾಯನ ಶಾಸ್ತ್ರ-2917, ವ್ಯವಹಾರ ಅಧ್ಯಯನ-2837, ನ್ನಡದಲ್ಲಿ 563 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಿದ್ದಾರೆ. ಸಂಸ್ಕೃತದಲ್ಲಿ -1119 ಹಾಗೂ ಅರ್ಥಶಾಸತ್ರದಲ್ಲಿ -1472 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಇಂಗ್ಲಿಷ್​ನಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ಸರ್ಕಾರಿ ಕಾಲೇಜುಗಳಲ್ಲಿ 52.84% ಫಲಿತಾಂಶ ಬಂದಿದ್ದು, ಅನುದಾನಿತ ಕಾಲೇಜು 62.05% ಹಾಗೂ ಖಾಸಗಿ ಕಾಲೇಜುಗಳು 76.50% ಫಲಿತಾಂಶ ಪಡೆದುಕೊಂಡಿವೆ. ಇನ್ನುಳಿದಂತೆ ಕಾರ್ಪೊರೇಷನ್ ಕಾಲೇಜು 55.72% ಫಲಿತಾಂಶ ಪಡೆದುಕೊಂಡಿದೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪಡೆಯಲು ಜೂನ್ 30 ಕೊನೆ ದಿನವಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜುಲೈ 13 ಕೊನೆ ದಿನವಾಗಿದೆ

 

 

 

 

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement