ಕುಮಟಾ : ದ್ವಿತೀಯ ಪಿಯು ವಿಜ್ಞಾನ, ಸರಸ್ವತಿ ಪಿಯು ಕಾಲೇಜು ರಾಜ್ಯಮಟ್ಟದ ರ‍್ಯಾಂಕ್‌ನೊಂದಿಗೆ ನೂರಕ್ಕೆ ನೂರು ಫಲಿತಾಂಶ

ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶ್ಯನ್ ಟ್ರಸ್ಟಿನ ವಿಧಾತ್ರಿ ಅಕಾಡೆಮಿ ಸಂಯೋಗದ ಬಿ.ಕೆ. ಭಂಡಾರ‍್ಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದೆ.
ಈ ಬಾರಿಯು ರಾಜ್ಯ ಮಟ್ಟದ ರ‍್ಯಾಂಕ್‌ನೊಂದಿಗೆ ಶೇಕಡಾ ೧೦೦ಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಕಾಲೇಜಿನ ವಿದ್ಯಾರ್ಥಿಗಳಾದ ರುಚಿತಾ ಮಂಜುನಾಥ ನಾಯಕ ೯೮.೩೩% ೬೦೦ಕ್ಕೆ ೫೯೦ ಅಂಕಗಳನ್ನು ಪಡೆದಿದ್ದಾರೆ. ರಚಿತಾ ಅವರು ಭೌತಶಾಸ್ತ್ರ -೧೦೦, ರಾಸಾಯನಶಾಸ್ತ್ರ -೧೦೦, ಗಣಿತದಲ್ಲಿ -೧೦೦, ಜೀವಶಾಸ್ತ್ರ -೧೦೦ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಗಣಪತಿ ಅರವಿಂದ ಶ್ಯಾನಭಾಗ ಗೋಳಿ ೯೮% ೬೦೦ಕ್ಕೆ ೫೮೮ ಅಂಕಗಳನ್ನು ಗಳಿಸಿದ್ದು, ಭೌತಶಾಸ್ತ್ರ-೧೦೦, ಗಣಿತ-೧೦೦, ಕಂಪ್ಯೂಟರ್ ಸೈನ್ಸ -೧೦೦ ಅಂಕಗಳು, ಸಂಜನಾ ಕೃಷ್ಣ ಭಟ್ ೯೮% ೬೦೦ಕ್ಕೆ ೫೮೮ ಅಂಕಗಳನ್ನು ಗಳಿಸಿದ್ದು, ರಸಾಯನ ಶಾಸ್ತ್ರ- ೧೦೦, ಗಣಿತದ-೧೦೦, ಕಂಪ್ಯೂಟರ್ ಸೈನ್ಸ -೧೦೦ ಪಡೆದಿದ್ದಾರೆ. ಶ್ರೀಲಕ್ಷ್ಮೀ ಆರ್ ಕಾಮತ್ ೯೮% ೬೦೦ಕ್ಕೆ ೫೮೮ ಅಂಕಗಳನ್ನು ಗಳಿಸಿದ್ದು, ಗಣಿತದಲ್ಲಿ ೧೦೦ ಪಡೆದಿದ್ದು, ಈ ಮೂವರು ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಪೃಥ್ವಿ ಗಜಾನನ್ ಹೆಗಡೆ ೯೭.೮೩% ೬೦೦ಕ್ಕೆ ೫೮೭ ಅಂಕ ಗಳಿಸಿದ್ದು, ಭೌತಶಾಸ್ತ್ರ-೧೦೦, ಗಣಿತ-೧೦೦ ಪಡೆದಿದ್ದಾರೆ, ಶ್ರವಣ್ ಎಂ ಪೈ ೯೭.೮೩%, ೬೦೦ಕ್ಕೆ ೫೮೭ ಅಂಕ ಗಳಿಸಿದ್ದು, ಭೌತಶಾಸ್ತ್ರ-೧೦೦, ರಸಾಯನ ಶಾಸ್ತ್ರ- ೧೦೦, ಗಣಿತದ-೧೦೦,ಜೀವಶಾಸ್ತ್ರ- ೧೦೦ ಪಡೆದಿದ್ದು ಇವರಿಬ್ಬರು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಇದಲ್ಲದೆ, ೧೬ ವಿದ್ಯಾರ್ಥಿಗಳು ೯೫%ಕ್ಕಿಂತ ಅಧಿಕ ಅಂಕಗಳಿಸಿದ್ದಾರೆ, ೩೩ ವಿದ್ಯಾರ್ಥಿಗಳು ೯೦ಕ್ಕಿಂತ ಅಧಿಕ ಅಂಕಗಳಿಸಿದರೆ, ೪೦
ವಿದ್ಯಾರ್ಥಿಗಳು ೮೫ಕ್ಕಿಂತ ಅಧಿಕ ಅಂಕಗಳಿಸಿದರೆ, ಉಳಿದೆಲ್ಲ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅಲ್ಲದೇ ೧೪ ವಿದ್ಯಾರ್ಥಿಗಳು ಗಣಿತದಲ್ಲಿ ಹಾಗೂ ೭ ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ, ೬ ವಿದ್ಯಾರ್ಥಿಗಳು ಕಂಪ್ಯೂಟರ್
ಸೈನ್ಸನಲ್ಲಿ, ೫ ವಿದ್ಯಾರ್ಥಿಗಳು ರಸಾಯನಶಾಸ್ತ್ರದಲ್ಲಿ, ೨ ವಿದ್ಯಾರ್ಥಿಗಳು ಜೀವಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದು
ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಆಡಳಿತ ಮಂಡಳಿ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ. ಹಾಗೂ ಪ್ರಾಚಾರ್ಯರಾದ ಕಿರಣ ಭಟ್ಟ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement