ದ್ವಿತೀಯ ಪಿಯು ಫಲಿತಾಂಶ: ಕುಮಟಾ ಬಾಳಿಗಾ ಕಲಾ-ವಿಜ್ಞಾನ ಪಿಯು ಕಾಲೇಜ್‌-ವಿಜ್ಞಾನದಲ್ಲಿ ಶುಭಾ ಭಟ್ಟ, ಕಲಾ ವಿಭಾಗದಲ್ಲಿ ಶಾಂಭವಿ ಶೆಟ್ಟಿ ಪ್ರಥಮ

ಕುಮಟಾ: ಡಾ.ಎ.ವಿ.ಬಾಳಿಗಾ ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ಒಟ್ಟು ೨೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೩೩ ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶುಭಾ ಪರಮೇಶ್ವರ ಭಟ್ಟ ೬೦೦ಕ್ಕೆ ೫೯೦ (೯೮.೩೩%)ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪೂಜಾ ವಿನಾಯಕ ಭಟ್ಟ ೬೦೦ಕ್ಕೆ ೫೮೧(೯೬.೮೩%) ಅಂಕ ಹಾಗೂ ಸಿಂಚನಾ ವಾಸುದೇವ ಭಟ್ಟ ೬೦೦ಕ್ಕೆ ೫೮೧(೯೬.೮೩%) ಪಡೆದಿದ್ದು, ಇಬ್ಬರು ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ನೇಹಾ ಭಟ್ಟ ೬೦೦ಕ್ಕೆ ೫೭೪(೯೫.೧೬%) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಶುಭಾ ಭಟ್ಟ , ಸಿಂಚನಾ ಭಟ್ಟ, ಪೂಜಾ ಭಟ್ಟ ಹಾಗೂ ಸತೀಶ ನಾಯ್ಕ ಅವರು ಗಣಿತದಲ್ಲಿ ೧೦೦ಕ್ಕೆ ೧೦೦ ಅಂಕವನ್ನುಪಡೆದಿದ್ದಾರೆ. ಶುಭಾ ಭಟ್ಟ, ಸತೀಶ ನಾಯ್ಕ, ವೈಭವ ಬಾಳ್ಗಿ ಗಣಕ ವಿಜ್ಞಾನ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ ಹಾಗೂ ನೇಹಾ ಭಟ್ಟ ಭೌತಶಾಸ್ತ್ರ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕಲಾ ವಿಭಾಗದಲ್ಲಿ ೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೧೬ ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಂಭವಿ ನಾಗರಾಜ ಶೆಟ್ಟಿ ೬೦೦ಕ್ಕೆ ೫೪೦(೯೦%) ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

ಶಿವಾನಿ ಏಕನಾಥ ನಾಯ್ಕ ೬೦೦ಕ್ಕೆ ೫೨೬(೮೭.೭%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು , ದೀಪ್ತಿ ಫರ್ನಾಂಡಿಸ್ ೬೦೦ಕ್ಕೆ ೫೧೯(೮೬.೫%) ಅಂಕಗಳನ್ನು ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ಹಾಗೂ ಕಲಾ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ, ದ್ವೀತೀಯ ಹಾಗೂ ತೃತೀಯ ಸ್ಥಾನ ಪಡೆದವರೆಲ್ಲರೂ ಹುಡುಗಿಯರೇ ಆಗಿರುವುದು ಮತ್ತೊಂದು ವಿಶೇಷವಾಗಿದೆವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement