ರಿಯಲ್‌ ಸಿಂಗಂ…: ದೊಡ್ಡ ಮಚ್ಚು ಕೈಯಲ್ಲಿ ಹಿಡಿದುಕೊಂಡಿದ್ದ ದಾಳಿಕೋರನನ್ನು ಹೆಡೆಮುರಿ ಕಟ್ಟಿದ ಈ ನಿರಾಯುಧ ಪೋಲೀಸ್ ಅಧಿಕಾರಿ | ವೀಕ್ಷಿಸಿ

ನವದೆಹಲಿ: ದೊಡ್ಡ ಮಚ್ಚು ಹಿಡಿದುಕೊಂಡಿದ್ದ ದಾಳಿಕೋರನೊಬ್ಬನ್ನು ಆಯುಧವಿಲ್ಲದ ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯದಿಂದ ಎದುರಿಸಿ ಬಗ್ಗುಬಡಿಯುತ್ತಿರುವ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ.
ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪೊಲೀಸ್ ವಾಹನವು ಮಚ್ಚು ಬೀದಿ ಬದಿಯಲ್ಲಿ ನಿಂತಿರುವ ವ್ಯಕ್ತಿಯ ಪಕ್ಕದಲ್ಲಿ ನಿಲ್ಲುತ್ತಿರುವಾಗ ವೇಳೆ ವೀಡಿಯೊ ಸೆರೆಹಿಡಿದಿದೆ.
ಪೊಲೀಸ್‌ ಅಧಿಕಾರಿ ತನ್ನ ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಅಧಿಕಾರಿಯ ಮೇಲೆ ದಾಳಿ ಮಾಡಲು ತಕ್ಷಣವೇ ವ್ಯಕ್ತಿ ತನ್ನ ಕೈಯಲ್ಲಿ ಮಚ್ಚು ತೆಗೆದುಕೊಂಡಿದ್ದಾನೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಆದಾಗ್ಯೂ, ಸಬ್ ಇನ್ಸ್‌ಪೆಕ್ಟರ್ ವೀರಾವೇಶದಿಂದ ದಾಳಿಕೋರನ ವಿರುದ್ಧ ಹೋರಾಡಿ ಮಚ್ಚುಹಿಡಿದ ವ್ಯಕ್ತಿಯನ್ನು ನೆಲಕ್ಕೆ ಬೀಳಿಸಿ ಆತನನ್ನು ಹಣ್ಣುಗಾಯಿ-ನೀರುಗಾಯಿ ಮಾಡಿದ್ದಾರೆ.
ಅಧಿಕಾರಿ ಆತನ ಕೈಯಲ್ಲಿದ್ದ ಮಚ್ಚನ್ನು ಕಸಿದುಕೊಳ್ಳುತ್ತಿದ್ದಂತೆ ಇಬ್ಬರು ಒಬ್ಬರ ಮೇಲೆ ಒಬ್ಬರು ಬೀಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಈ ವೀಡಿಯೊವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಸ್ವಾತಿ ಲಾಕ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದು ನಿಜವಾದ ಹೀರೋ ಹೇಗಿರುತ್ತಾನೆ ಎಂದು ತೋರಿಸುತ್ತದೆ ಕೇರಳದ ಈ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ವಂದನೆಗಳು ಎಂದು ಅವರು ಬರೆದಿದ್ದಾರೆ. ಈ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಪೊಲೀಸ್ ಅಧಿಕಾರಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಜೂನ್ 12 ರಂದು ಸಂಜೆ 6 ಗಂಟೆಗೆ ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಗಾಯದಿಂದಾಗಿ ಅಧಿಕಾರಿ ಬೆರಳುಗಳಿಗೆ ಏಳು ಹೊಲಿಗೆ ಹಾಕಬೇಕಾಯಿತು. ಮಚ್ಚನ್ನು ಹಿಡಿದ ವ್ಯಕ್ತಿಯನ್ನು ಸುಗತನ್ ಎಂದು ಗುರುತಿಸಲಾಗಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಸಂಜಯ್ ರಾವತ್‌ಗೆ ಹಾಜರಾಗಲು ಜುಲೈ 1ಕ್ಕೆ ಹೊಸ ಸಮನ್ಸ್ ನೀಡಿದ ಇಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ