ನವಜಾತ ಮರಿಯಾನೆ ಕರೆದೊಯ್ಯಲು ಆನೆಗಳ ಹಿಂಡಿನ ಅಭೇದ್ಯ ಕೋಟೆ: ಆನೆಗಳ ರಕ್ಷಣಾ ಕ್ರಮಕ್ಕೆ ಎಂಥವರೂ ತಲೆದೂಗಬೇಕು | ವೀಕ್ಷಿಸಿ

ಕೊಯಂಬತ್ತೂರು : ಪುಟ್ಟ ನವಜಾತ ಶಿಶುಗಳ ರಕ್ಷಣೆ ವಿಷಯದಲ್ಲಿ ತಾಯಿ ಹಾಗೂ ಕುಟುಂಬ ಮಾಡುವ ಕಾಳಜಿ ತುಂಬ ಸೂಕ್ಷ್ಮ ಹಾಗೂ ಜಾಗರೂಕವಾಗಿರುತ್ತದೆ. ಮಗುವಿನ ಸುರಕ್ಷತೆಗೆ ಕುಟುಂಬ ಮೊದಲ ಆದ್ಯತೆ ನೀಡುತ್ತದೆ. ಆದರೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಇದನ್ನು ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಪ್ರಾಣಿಗಳು ಕೂಡ ಇದೇ ರೀತಿ ತಮ್ಮ ನವಜಾತ ಮರಿಗಳಿಗೆ ರಕ್ಷಣೆ ನೀಡುತ್ತವೆ ಎಂಬುದು ಅಷ್ಟೇ ಸತ್ಯ. ಆನೆಗಳ ಗುಂಪಿನ ಇತ್ತೀಚಿನ ಈ ವೀಡಿಯೊ ಇದನ್ನು ಪುಷ್ಠಿಕರಿಸುತ್ತದೆ.
ಆನೆಗಳು ಕೂಡ ಮಾನವರಷ್ಟೇ ಬುದ್ಧಿವಂತ ಪ್ರಾಣಿಗಳು ಹಾಗೂ ಗುಂಪು ಜೀವಿಗಳು. ಆನೆಗಳು ಹಿಂಡುಗಳಾಗಿ ಕುಟುಂಬ ಜೀವನ ನಡೆಸುತ್ತವೆ. ಇವುಗಳು ತಮ್ಮ ನವಜಾತ ಮರಿಗಳ ಸುರಕ್ಷತೆಗೆ ಕೈಗೊಳ್ಳುವ ಕ್ರಮಗಳು ಎಲ್ಲರೂ ಕಲಿಯುವಂತಿರುತ್ತದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ವೀಡಿಯೊದಲ್ಲಿ ಕಾಣಿಸಿದಂತೆ ಆನೆಗಳ ಹಿಂಡೊಂದು ಕಾಡಿನ ಮಧ್ಯದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿವೆ. ಈ ವೇಳೆ ಈ ಹಿಂಡಿನಲ್ಲಿ ಪುಟ್ಟ ನವಜಾತ ಮರಿಯೂ ಇದ್ದು, ಇದನ್ನು ಯಾರಿಗೂ ಕಾಣದಂತೆ ಆನೆಗಳ ಹಿಂಡುಗಳ ತಮ್ಮ ಮಧ್ಯೆ ಜಾಗರೂಕರಾಗಿ ಇರಿಸಿಕೊಂಡು ಕರೆದುಕೊಂಡು ಹೋಗುತ್ತಿವೆ. ಹಿಂದೆ ಮುಂದೆ ಹಾಗೂ ಅಕ್ಕಪಕ್ಕ ದೊಡ್ಡ ದೊಡ್ಡ ಆನೆಗಳು ಸಾಗುತ್ತಿದ್ದರೆ ಇವುಗಳ ಮಧ್ಯೆ ರಕ್ಷಣಾ ಕೋಟೆಯ ಮಧ್ಯೆ ಪುಟ್ಟ ಮರಿಯಾನೆ ಸಾಗುತ್ತಿದೆ.

ಓದಿರಿ :-   ಯುಎನ್, ಟರ್ಕಿ, ಇರಾನ್, ಈಜಿಪ್ಟ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಿದ ಭಾರತ

ಈ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಜಗತ್ತಿನಲ್ಲಿ ಯಾರೂ ಕೂಡ ಆನೆ ಹಿಂಡಿನಂತೆ ತನ್ನ ಕಂದನಿಗೆ ಈ ರೀತಿಯ ಭದ್ರತೆ ನೀಡಲು ಸಾಧ್ಯವಿಲ್ಲ. ಇದು ಝೆಡ್‌ ಪ್ಲಸ್ ಭದ್ರತೆ ಅಲ್ಲ. ಇದು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯಲ್ಲಿರುವ ಸತ್ಯಮಂಗಲ ಅರಣ್ಯದಲ್ಲಿ ಕಂಡು ಬರುವ ದೃಶ್ಯ ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆನೆ ಹಿಂಡು ಮರಿಯನ್ನು ರಕ್ಷಿಸುತ್ತಿರುವುದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಆನೆಗಳು ಎಷ್ಟು ಬಲವಾದ ಬಂಧವನ್ನು ಹೊಂದಿವೆಯೆಂದರೆ ಪ್ರತಿಯೊಂದು ಹೆಣ್ಣಾನೆಯೂ ಎಲ್ಲಾ ಮರಿಗಳಿಗೆ ತಾಯಿಯಾಗುತ್ತವೆ. ಅವುಗಳ ಗುಂಪಿನ ಮರಿಗಳಿಗೆ ತುಂಬಾ ರಕ್ಷಣೆ ನೀಡುತ್ತವೆ. ಮತ್ತು ಈ ವೀಡಿಯೊ ಎಲ್ಲವನ್ನೂ ಹೇಳುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   G-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬಳಿಗೆ ನಡೆದುಬಂದ ಅಮೆರಿಕ ಅಧಕ್ಷ ಬೈಡನ್‌, ತದನಂತರ....| ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

3 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ