ಇಸ್ರೊ ನಿರ್ಮಿತ ‘ಜಿಸ್ಯಾಟ್‌-24’ ಉಪಗ್ರಹ ಉಡಾವಣೆ

ಬೆಂಗಳೂರು: ಅತ್ಯಾಧುನಿಕ ಜಿಸ್ಯಾಟ್-24 ಉಪಗ್ರಹವನ್ನು ದಕ್ಷಿಣ ಅಮೆರಿಕದ ಫ್ರೆಂಚ್‌ ಗಯಾನಾದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಎಂದು ಇಸ್ರೊ ತಿಳಿಸಿದೆ. ಇಸ್ರೊ ನಿರ್ಮಿತ ಈ ಉಪಗ್ರಹವನ್ನು ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್‌) ಉಡಾವಣೆ ಮಾಡಿದೆ.
24-ಕೆಯು ಬ್ಯಾಂಡ್‌ ಸಂವಹನ ಉಪಗ್ರಹವಾಗಿರುವ ಜಿಸ್ಯಾಟ್‌-24ನ ಒಟ್ಟು ತೂಕ 4,180 ಕೆ.ಜಿ ಎಂದು ಇಸ್ರೊ ತಿಳಿಸಿದೆ. ಏರಿಯನ್ 5 ಎರಡು ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಯಶಸ್ವಿಯಾಗಿ ಇರಿಸಿದೆ:

ಕೇಂದ್ರ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ತಂದಿರುವ ಸುಧಾರಣೆಗಳ ನಂತರ ಉಡಾವಣೆ ಮಾಡಲಾದ ಮೊದಲ ಸಂವಹನ ಉಪಗ್ರಹ ಇದಾಗಿದೆ. ಇಸ್ರೊದ ಅಂಗಸಂಸ್ಥೆಯಾದ ಎನ್‌ಎಸ್‌ಐಎಲ್‌ಗೆ ಇಂದು ಮಹತ್ವದ ದಿನ. ಡಿಟಿಎಚ್‌ ಸೇವೆ ನೀಡುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ಇಸ್ರೊ ಮುಖ್ಯಸ್ಥ ಡಾ.ಎಸ್‌.ಸೋಮನಾಥ್ ಹೇಳಿದ್ದಾರೆ. 2019ರಲ್ಲಿ ಎನ್‌ಎಸ್‌ಐಎಲ್ ಸ್ಥಾಪಿಸಲಾಗಿದ್ದು, ಇದು ಉಪಗ್ರಹಗಳ ನಿರ್ಮಾಣ, ಉಡಾವಣೆ ಹಾಗೂ ಅವುಗಳ ನಿರ್ವಹಣೆ ಮಾಡುತ್ತದೆ.
ಈ ಜಿಸ್ಯಾಟ್-24 ಉಪಗ್ರಹವನ್ನು ಡಿಟಿಎಚ್‌ ಸೇವೆ ನೀಡುವ ಟಾಟಾ ಪ್ಲೇ ಕಂಪನಿಗೆ ಲೀಸ್‌ ನೀಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement