ಮದುವೆ ಸಂಭ್ರಮಾಚರಣೆಗೆಂದು ವರ ಹಾರಿಸಿದ ಗುಂಡಿನಿಂದ ಸ್ನೇಹಿತನ ಸಾವು

ಲಕ್ನೋ: ಮದುವೆ ಮೆರವಣಿಗೆ ವೇಳೆ ವರನೊಬ್ಬ ಸಂಭ್ರಮದ ನಿಮಿತ್ತ ಹಾರಿಸಿದ ಗುಂಡು ಅಲ್ಲೇ ಇದ್ದ ಸ್ನೇಹಿತನಿಗೆ ತಗುಲಿ ಆತ ಸಾವಿಗೀಡಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮನೀಶ್ ಮಧೇಶಿಯಾ ಎಂಬ ವರ ಮದುವೆ ಮೆರವಣಿಗೆ ಸಮಯದಲ್ಲಿ ಸಂಭ್ರಮದಲ್ಲಿ ಗುಂಡು ಹಾರಿಸಿದ್ದಾನೆ. ಅದು ಯಡವಟ್ಟಾಗಿ ಸ್ನೇಹಿತ ಬಾಬು ಲಾಲ್ ಯಾದವ್ ಎಂಬವರಿಗೆ ತಗುಲಿ ಆತ ಮೃತಪಟ್ಟಿದ್ದಾರೆ. ಸೋನಭದ್ರ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ಈತನನ್ನು ಕುದುರೆ ಮೇಲೆ ಮರೆವಣಿಗೆ ಮಾಡಲಾಗುತ್ತಿತ್ತು

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಆ ಸಂದರ್ಭದಲ್ಲಿ ಸುತ್ತಲೂ ಜನರು ಸೇರಿ ಸಂಭ್ರಮಿಸುತ್ತಿದ್ದರು.
ಸಂಭ್ರಮಿಸುತ್ತಿದ್ದ ವರ ಮನೀಶ್ ಮಧೇಶಿಯಾ ತನ್ನ ಬಳಿ ಇದ್ದ ಸ್ನೇಹಿತನ ಗನ್‌ ತೆಗೆದುಕೊಂಡು ಮೇಲ್ಮುಖವಾಗಿ ಗುಂಡು ಹಾರಿಸಿದ್ದಾನೆ. ಅದು ಅಲ್ಲೇ ಇದ್ದ ಬಾಬು ಲಾಲ್ ಯಾದವ್‍ಗೆ ಗುಂಡು ತಗುಲಿ ದುರಂತ ಸಂಭವಿಸಿದೆ. ಬಾಬು ಲಾಲ್‌ ಯಾದವ್ ಯೋಧರಾಗಿದ್ದರು.

ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಘಟನೆಗೆ ಸಂಬಂಧಿಸಿ ಯಾದವ್ ಕುಟುಂಬ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೀಶ್‍ನನ್ನು ಬಂಧಿಸಿದ್ದಾರೆ ಹಾಗೂ ಬಂದೂಕನ್ನು ವಶ ಪಡಿಸಿಕೊಂಡಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು 19 ಸಾವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ