ಪುರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಹತ್ಯೆ ಪ್ರಕರಣ: ಪರಾರಿಯಾಗಲು ಯತ್ನಿಸಿದ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ಕೋಲಾರ: ಮುಳಬಾಗಲು ಪುರಸಭೆ ಸ್ಥಾಯಿ ಮಂಡಳಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ (51) ಹತ್ಯೆ ಪ್ರಕರಣದ ಆರೋಪಿ ಬಾಲಾಜಿ ಸಿಂಗ್ ಅಲಿಯಾಸ್ ಗಬ್ಬರ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೋಲಾರ-ಮುಳಬಾಗಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಮಾತನಾಡಿ, ಬಲ ಮೊಣಕಾಲಿಗೆ ಗುಂಡು ತಗುಲಿರುವ ಬಾಲಾಜಿ ಸಿಂಗ್ ಕೋಲಾರ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದರು.

ಪೊಲೀಸ್ ತಂಡವು ಗುರುವಾರ ರಾತ್ರಿ ಮೈಸೂರಿನಿಂದ ಸಿಂಗ್‌ನನ್ನು ಬಂಧಿಸಿದೆ. ಬೆಳಗ್ಗೆ 6 ಗಂಟೆಗೆ ಮುಳಬಾಗಲಿಗೆ ಕರೆದೊಯ್ಯುವಾಗ, ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಡೇರಹಳ್ಳಿ ಅರಣ್ಯ ಪ್ರದೇಶದ ಬಳಿ ಮೂತ್ರ ಮಾಡಲು ವಾಹನ ನಿಲ್ಲಿಸುವಂತೆ ಸಿಂಗ್ ಕೇಳಿಕೊಂಡಿದ್ದಾನೆ ಆತ, ಕೈಕೋಳದಿಂದ ಬಿಡುಗಡೆಯಾದ ತಕ್ಷಣ ತನ್ನನ್ನು ಕಾಯುತ್ತಿದ್ದ ಕಾನ್‌ಸ್ಟೇಬಲ್‌ ರಾಜೇಶ್ ಅವರನ್ನು ತಳ್ಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಮತ್ತೊಬ್ಬ ಪೋಲೀಸ್ ವಿನಾಯಕನ ತಲೆ ಮತ್ತು ಎಡಗೈಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ್ ಎಚ್ಚರಿಕೆ ನೀಡಿದರೂ ಕೇಳಲಿಲ್ಲ. ನಂತರ ಆತನನ್ನು ಹಿಡಿಯಲು ಅವರ ಬಲಗಾಲಿಗೆ ಗುಂಡು ಹಾರಿಸಬೇಕಾಯಿತು ಮತ್ತು ಸಿಂಗ್‌ನನ್ನು ಚಿಕಿತ್ಸೆಗಾಗಿ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ,
ಮುಳಬಾಗಲು ಪಟ್ಟಣದ ಮುತ್ಯಾಲಪೇಟೆಯಲ್ಲಿ ಜೂ.7 ರಂದು ಮುಳಬಾಗಲು ಪುರಸಭೆ ಸ್ಥಾಯಿ ಮಂಡಳಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ (51) ಅವರನ್ನು ದುಷ್ಕರ್ಮಿಗಳ ತಂಡ ಕಡಿದು ಹತ್ಯೆ ಮಾಡಿತ್ತು.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಉಚ್ಚಾಟನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement