ಕುಮಟಾ: ಪ್ರವಾಸಕ್ಕೆ ಬಂದು ಈಜಲು ತೆರಳಿದ ನಾಲ್ವರು ಸಮುದ್ರ ಪಾಲು; ಇಬ್ಬರ ಶವ ಪತ್ತೆ

posted in: ರಾಜ್ಯ | 0

ಕುಮಟಾ; ಪ್ರವಾಸಕ್ಕೆ ಬಂದು ಸಮುದ್ರಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ಜಲ ಸಮಾಧಿಯಾಗಿ, ಮತ್ತಿಬ್ಬರು ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ್ ನಲ್ಲಿ ನಡೆದಿದೆ. ವಿದ್ಯಾರ್ಥಿಗಳ ತಂಡ ಶನಿವಾರ ರೆಸಾರ್ಟಿಗೆ ಬಂದಿದ್ದರು.
ಬೆಂಗಳೂರಿನ ಸುರೇಶ ಸಿ.ಎ ಫೌಂಡೇಶನ್‌ ಸಂಸ್ಥೆಯಿಂದ ೮೭ ಜನರು ಉತ್ತರಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಜಿಲ್ಲೆಯ ಕುಮಟಾದ ಬಾಡದ ಅರಬ್ಬಿ ಸಮುದ್ರಕ್ಕೆ ಹೊಂದಿರುವ ಸಿಲ್ವರ್ ಸ್ಯಾಂಡ್ ರೆಸಾರ್ಟ್ ಒಂದರಲ್ಲಿ ಉಳಿದು ಕೊಂಡಿದ್ದರು.
ಕೆಲವರು ಸಿಲ್ವರ್ ಸ್ಯಾಂಡ್ ರೆಸಾರ್ಟ್ ನ ಬಳಿಯಿರುವ ಕಾಗಲ್‌ ಸಮುದ್ರಕ್ಕಿಳಿದು ಆಟವಾಡುತ್ತಿದ್ದರು. ಈ ವೇಳೆ ನಾಲ್ವರು ನೀರು ಪಾಲಾಗಿದ್ದಾರೆ.ಶನಿವಾರ ಸಮುದ್ರಕ್ಕೆ ಇಳಿದ ಇವರಲ್ಲಿ ಅಲೆಯ ರಭಸಕ್ಕೆ ನಾಲ್ವರು ಕಾಣೆಯಾಗಿದ್ದರು. ನಾಪತ್ತೆಯಾದ ನಾಲ್ವರಲ್ಲಿ ಚೈತ್ರಶ್ರೀ ಮತ್ತು ಅರ್ಜುನ ಎಂಬವರ ಮೃತ ದೇಹ ಪತ್ತೆಯಾಗಿದ್ದು, ಕಿರಣ ಕುಮಾರ ಡಿ ಮತ್ತು ತೇಜಸ್ ಅವರಿಗಾಗಿ ಹುಡುಕಾಟ ನಡೆದಿದೆ.

advertisement

ಸ್ಥಳಕ್ಕೆ ಕುಮಟಾ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಸ್ಥಳೀಯರೊಂದಿಗೆ ಶೋಧಕಾರ್ಯ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಮಟಾ ಪೊಲೀಸರು ಅಗ್ನಿಶಾಮಕ ದಳದ ಸಹಾಯದೊಂದಿಗೆ ಹುಡುಕಾಟ ನಡೆಸಿದ್ದಾರೆ. ಕುಮಟಾ ಪಿಎಸ್ಐ ನವಿನ ನಾಯ್ಕ ತನಖೆ ನಡೆಸುತ್ತಿದ್ದಾರೆ.
ಮಳೆಗಾಲದ ಈ ಸಂದರ್ಭದಲ್ಲಿ ಅರಬ್ಬಿ ಸಮುದ್ರ ಪ್ರಕ್ಷ್ಯುಬ್ದವಾಗಿರುತ್ತದೆ. ಸ್ಥಳೀಯ ಮೀನುಗಾರರೇ ಸಮುದ್ರಕ್ಕೆ ಇಳಿಯುವುದಿಲ್ಲ. ಆದಾಗ್ಯೂ ಪ್ರವಾಸಕ್ಕೆ ಬಂದವರು ಸಮುದ್ರದಲ್ಲಿ ಈಜಾಡಲು ಇಳಿದಿದ್ದಾರೆ. ಹವಾಮಾನ ಇಲಾಖೆಯೂ ನಾಲ್ಕು ದಿನಗಳ ಕಾಲ ಸಮುದ್ರಕ್ಕೆ ತೆರಳದಂತೆ ನಾಡ ದೋಣಿ ಮತ್ತು ಪಾತಿದೋಣಿ ಮೀನುಗಾರರಿಗೂ ಎಚ್ಚರಿಕೆ ನೀಡಿತ್ತು.
ಮಾನ್ಸೂನ್‌ ಆರಂಭದಲ್ಲಿ ಅರಬ್ಬೀ ಸಮುದ್ರವು ತೆರೆಗಳು ಅಪಾಯಕರವಾಗಿರುತ್ತದೆ. ರಕ್ಕಸ ಗಾತ್ರದ ಅಲೆಗಳು ತೀರ ಪ್ರದೇಶದಲ್ಲೇ ಏಳುತ್ತವೆ. ಅದಾಗ್ಯೂ ಸಮುದ್ರದ ಅರಿವಿಲ್ಲದ ಪ್ರವಾಸಕ್ಕೆ ಬಂದ ಜನರು ಅಪಾಯಕ್ಕೆ ಬಲಿಯಾಗುತ್ತಿರುವದು ಉತ್ತರ ಕನ್ನಡ ಕರಾವಳಿ ತೀರದಲ್ಲಿ ಸಾಮಾನ್ಯ ಎನ್ನುವಂತಾಗಿ ಬಿಟ್ಟಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಸಮಯಕ್ಕೆ ದೊರಕದ ಬ್ರಿಟನ್‌ ವೀಸಾ: ಅಂತಾರಾಷ್ಟ್ರೀಯ ವಿದಾರ್ಥಿ ಕ್ರೀಡಾಕೂಟಕ್ಕೆ ತೆರಳಲಾಗದೆ ಬೆಂಗಳೂರು ವಿದ್ಯಾರ್ಥಿಗಳಿಗೆ ನಿರಾಸೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.4 / 5. ಒಟ್ಟು ವೋಟುಗಳು 5

ನಿಮ್ಮ ಕಾಮೆಂಟ್ ಬರೆಯಿರಿ

advertisement