ಅಮೆರಿಕದಲ್ಲಿ ಕಾರಿನಲ್ಲಿ ಕುಳಿತಿದ್ದ ಭಾರತ ಮೂಲದ ವ್ಯಕ್ತಿಯ ಕೊಲೆ

ನ್ಯೂಯಾರ್ಕ್‌ : 31 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬನನ್ನು ಅಮೆರಿಕದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪಾರ್ಕಿಂಗ್‌ನಲ್ಲಿ ಕಾರೊಳಗೆ ಕುಳಿತಿದ್ದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ಮಾಡಿ ಕೊಲೆ ಮಾಡಲಾಗಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚೆಗಷ್ಟೆ ಅನಿವಾಸಿ ಭಾರತೀಯನೊಬ್ಬನ ಮೇಲೆ ಗುಂಡಿನ ದಾಳಿ ಕೊಲೆ ಮಾಡಲಾಗಿತ್ತು. ಇದೇ ರೀತಿಯ ಮತ್ತೊಂದು ಘಟನೆ ಇಂದು ಕೂಡ ನಡೆದಿದೆ.

advertisement

ವರದಿಗಳ ಪ್ರಕಾರ ಭಾರತೀಯ ಪ್ರಜೆ, ನ್ಯೂ ಯಾರ್ಕಿನ ಸೌಥ್‌ ಓಜೋನ್‌ ಪಾರ್ಕ್‌ ಬಳಿ ಮೃತ ಸತ್ನಾಮ್‌ ಸಿಂಗ್‌ ಸ್ನೇಹಿತನ ಜೀಪ್‌ ರ್ಯಾಂಗ್ಲರ್‌ ಎಸ್‌ಯುವಿಯೊಳಗೆ ಕುಳಿತಿದ್ದ. ಆಗ ಒಬ್ಬ ವ್ಯಕ್ತಿ ಪಿಸ್ಟೋಲ್‌ ಜತೆಗೆ ಬಂದು, ಸತ್ನಾಮ್‌ ಸಿಂಗ್‌ ಎಂಬವರಿಗೆ ಗುಂಡಿಕ್ಕಿದ್ದಾನೆ. ಶನಿವಾರ ಮಧ್ಯಾಹ್ನ ಸುಮಾರು 3:45ಕ್ಕೆ ಈ ಘಟನೆ ನಡೆದಿದೆ ಎಂದು ನ್ಯೂ ಯಾರ್ಕ್‌ ಡೈಲಿ ನ್ಯೂಸ್‌ ವರದಿ ಮಾಡಿದೆ. ಪೊಲೀಸರ ಮಾಹಿತಿ ಪ್ರಕಾರ ಸತ್ನಾಮ್‌ ಸಿಂಗ್ ಸಾವಿಗೀಡಾದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಅವರು ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

ಓದಿರಿ :-   3 ಪ್ರಯತ್ನಗಳಲ್ಲಿ 737 ಕೆಜಿ ಎತ್ತುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಅಮೆರಿಕದ ಮಹಿಳಾ ಪವರ್‌ಲಿಫ್ಟರ್...! ವೀಕ್ಷಿಸಿ

ಸತ್ನಾಮ್‌ ಸಿಂಗ್‌ ಎದೆ ಮತ್ತು ಕತ್ತಿಗೆ ಗುಂಡು ತಗುಲಿತ್ತು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಿಂಗ್‌ ಮೃತಪಟ್ಟಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ನ್ಯೂ ಯಾರ್ಕ್‌ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್‌ ಮೂಲಗಳ ಪ್ರಕಾರ, ಆರೋಪಿ ಸತ್ನಾಮ್‌ ಸಿಂಗ್‌ ಕೊಲ್ಲುವ ಉದ್ದೇಶದಿಂದ ಬಂದಿದ್ದನಾ ಅಥವಾ ಕಾರಿನ ಮಾಲೀಕರನ್ನು ಕೊಲೆ ಮಾಡುವ ಉದ್ದೇಶವಿತ್ತಾ ಎಂಬುದು ಇನ್ನೂ ತಿಳಿದಿಲ್ಲ. ಕೇವಲ ಕಾರನ್ನು ಫಾಲೋ ಮಾಡಿ ಬಂದು, ಒಳಗಿರುವುದು ಕಾರಿನ ಮಾಲೀಕನಲ್ಲ ಎಂಬುದನ್ನು ಗಮನಿಸದೇ ಕೊಲೆ ಮಾಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ರೀತಿಯಾಗಿಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಯಾವುದೇ ಬಂಧನವಾಗಿಲ್ಲ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement