ಕಾರವಾರ: ನೈಲಾನ್ ಬಲೆ ನುಂಗಿ ಬೃಹತ್‌ ಡಾಲ್ಫಿನ್ ಸಾವು | ವೀಕ್ಷಿಸಿ

ಕಾರವಾರ: ಇಲ್ಲಿನ ದೇವಭಾಗ ಕಡಲತೀರದಲ್ಲಿ ಡಾಲ್ಫಿನ್ ಮೃತ ದೇಹ ಸೋಮವಾರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಡಾಲ್ಫಿನ್ ಹೊಟ್ಟೆಯಲ್ಲಿ ನೈಲಾನ್ ಬಲೆ ಇರುವುದು ಪತ್ತೆಯಾಗಿದೆ
ಮೀನಿನ ಬಲೆ ನುಂಗಿದ ಪರಿಣಾಮ ಡಾಲ್ಪಿನ್ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. ದೇವಭಾಗ್ ಕಡಲ ತೀರದಲ್ಲಿ ಪತ್ತೆಯಾದ ಡಾಲ್ಫಿನ್ ಮೃತ ದೇಹ ಗಂಡಾಗಿದ್ದು ಸುಮಾರು 7.5 ಫೀಟ್ ಉದ್ದವಿದೆ.

ಇಂಡೋ ಪೆಸಿಫಿಕ್ ಹಮ್ ಬ್ಯಾಕ್ ಜಾತಿಗೆ ಸೇರಿದ್ದಾಗಿದೆ. ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ಪ್ರಜಾತಿಯದ್ದಾಗಿದೆ. ಕಾರವಾರ ವಿಭಾಗ ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಪ್ರಕಾಶ ಕೆ.ಸಿ. ಅವರ ಮಾರ್ಗದರ್ಶನ ದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ‌.

ಈ ವೇಳೆ ಡಾಲ್ಫಿನ್ ಹೊಟ್ಟೆ ಯಲ್ಲಿ ನೈಲಾನ್ ಬಲೆ ತುಂಬಿಕೊಂಡಿದ್ದು ಪತ್ತೆಯಾಗಿದೆ ಸ್ಥಳದಲ್ಲಿ ಕೋಸ್ಟಲ್ ಮತ್ತು ಮಾರೈನ್ ನ ಆರ್‌ಎಫ್‌ಒಗಳಾದ ಪ್ರಕಾಶ ಯರಗಟ್ಟಿ, ಚಂದ್ರಶೇಖರ, ಮರೈನ್‌ ಜೀವಶಾಸ್ತ್ರ (marine biology) ಸಂಶೋಧನ ವಿದ್ಯಾರ್ಥಿಗಳಾದ ಶಾನ್‌ ನವಾಜ್‌, ಅಕ್ಷಯ, ರೀಫ್‌ ವಾಚ್‌ ಸಂಸ್ಥೆ ಯ, ತೇಜಸ್ವಿನಿ, ಡಾ. ಮೇಘನಾ ಸ್ಥಳೀಯರು ಇದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement