ಹೃದಯ ವಿದ್ರಾವಕ ಘಟನೆ….ಆಸ್ಪತ್ರೆಯೊಳಗೆ ನುಗ್ಗಿ ವಾರ್ಡ್‌ ಹಾಸಿಗೆಯಲ್ಲಿ ಮಲಗಿದ್ದ ಮೂರು ದಿನದ ಮಗುವನ್ನು ಹೊತ್ತೊಯ್ದು ಸಾಯಿಸಿದ ನಾಯಿಗಳು…!

ಚಂಡೀಗಡ: ಹರ್ಯಾಣದ ಪಾಣಿಪತ್ ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬೀದಿ ನಾಯಿಗಳು 3 ದಿನದ ನವಜಾತ ಶಿಶುವನ್ನು ಕೊಂದು ಹಾಕಿವೆ. ನಾಯಿಗಳು ಆಸ್ಪತ್ರೆಗೆ ಪ್ರವೇಶಿಸಿ ತಾಯಿ ಪಕ್ಕದಲ್ಲಿ ಮಲಗಿದ್ದ ಮೂರು ದಿನದ ಹೆಣ್ಣುಶಿಶುವನ್ನು ಕಚ್ಚಿಕೊಂಡು ಹೋಗಿವೆ. ನಂತರ ಆಸ್ಪತ್ರೆ ಪಕ್ಕದ ಜಾಗದಲ್ಲಿ ಮಗುವಿನ ಶವ ಪತ್ತೆಯಾಗಿದೆ.
ದೊರೆತ ಮಾಹಿತಿಯ ಪ್ರಕಾರ, ಸೆಕ್ಟರ್ 13-17 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಸ್ಪತ್ರೆ ಇದೆ. ಅಲ್ಲಿ ಉತ್ತರ ಪ್ರದೇಶದ ಫೋರ್ಗನ್ ಕೈರಾನಾ ಗ್ರಾಮದ ಆಸ್ ಮೊಹಮ್ಮದ್ ಎಂಬವರ ಪತ್ನಿ ಶಬ್ನಮ್ ಅವ ಅವರನ್ನು ಜೂನ್ 25 ರಂದು ಹೆರಿಗೆಗೆ ದಾಖಲಿಸಲಾಗಿತ್ತು.ಅದೇ ದಿನ ರಾತ್ರಿ 8:15ಕ್ಕೆ ಶಬನಮ್ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಜನರಲ್ ವಾರ್ಡ್‌ನ ಕೊಠಡಿಯಲ್ಲಿ ಅವರನ್ನು ದಾಖಲಿಸಲಾಗಿದೆ. ಸೋಮವಾರ ರಾತ್ರಿ ಮಗುವಿನ ಜೊತೆಗೆ ಬಾಣಂತಿ, ಆಕೆಯ ಗಂಡ, ಮಗುವಿನ ಅಜ್ಜಿ ಕೂಡ ಕೋಣೆಯಲ್ಲಿದ್ದರು. ತಾಯಿ ಹಾಸಿಗೆಯ ಮೇಲೆ ಮಲಗಿದ್ದರೆ, ಉಳಿದವರು ಕೆಳಗೆ ನೆಲದ ಮೇಲೆ ಮಲಗಿದ್ದರು.

ಮಗುವಿಗೆ ಹಾಲುಣಿಸಿದ ನಂತರ, ತಂದೆ ಮತ್ತು ತಾಯಿ ಮಗುವನ್ನು ಪಕ್ಕದಲ್ಲಿ ನೆಲದ ಮೇಲೆ ಮಲಗಿಸಿದ್ದರು. ಅಷ್ಟರಲ್ಲಿ ಮಧ್ಯಾಹ್ನ 2:15ರ ಸುಮಾರಿಗೆ ಮನೆಯವರ ಕಣ್ಣು ತೆರೆದಾಗ ಮಗು ಇರಲಿಲ್ಲ. ಸಂಬಂಧಿಕರು ಆಸ್ಪತ್ರೆಯ ಹೊರಗೆ ಓಡಿ ಬಂದು ನೋಡಿದಾಗ ಮಗು ನಾಯಿಯ ಬಾಯಲ್ಲಿತ್ತು.
ನಾಯಿ ಮಗುವನ್ನು ಕಚ್ಚಿ ಹಿಡಿದಿತ್ತು. ಕುಟುಂಬಸ್ಥರು ಮಗುವನ್ನು ನಾಯಿಯಿಂದ ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿದ ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಇದನ್ನು ಕೇಳಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು.
ಮಗುವಿನ ಶವವನ್ನು ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಅಲ್ಲಿ ಪಂಚನಾಮ ಮಾಡಿ ಶವಾಗಾರದಲ್ಲಿ ಇರಿಸಲಾಗಿದೆ. ಅದೇ ಸಮಯದಲ್ಲಿ, ಮೃತರ ಸಂಬಂಧಿಕರು ಆಸ್ಪತ್ರೆಯ ಆಡಳಿತದ ಮೇಲೆ ಭದ್ರತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಿಸಿಟಿವಿ ಪರಿಶೀಲನೆಯಲ್ಲಿ, ನಾಯಿಯು ಮಗುವನ್ನು ಆಸ್ಪತ್ರೆಯಿಂದ 2:07 ಕ್ಕೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement