ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್‌ ಮಾಡಿದ್ದಕ್ಕೆ ಮತ್ತೊಂದು ಶಂಕಿತ ಹತ್ಯೆ ಪ್ರಕರಣ ಬೆಳಕಿಗೆ: ಪ್ರಕರಣದ ತನಿಖೆ ಎನ್‌ಐಎಗೆ

ಮುಂಬೈ: ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ತೇಲಿಯನ್ನು ಕೊಲ್ಲುವ ಒಂದು ವಾರದ ಮೊದಲು, ಜೂನ್ 21 ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 54 ವರ್ಷದ ಕೆಮಿಸ್ಟ್‌ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಕೊಲೆಯಾಗಿದ್ದು,
ಟಿವಿ ಚರ್ಚೆಯಲ್ಲಿ ಪ್ರವಾದಿಯ ಬಗ್ಗೆ ವಿವಾದಾತ್ಮಕ ಕಾಮೆಂಟ್‌ ಮಾಡಿದ ಬಿಜೆಪಿಯ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಪ್ರತೀಕಾರವಾಗಿ ಕೊಲ್ಹೆಯನ್ನು ಕೊಲ್ಲಲಾಗಿದೆ ಎಂದು ತನಿಖಾಧಿಕಾರಿಗಳು ಈಗ ನಂಬಿದ್ದಾರೆ. ಏತನ್ಮಧ್ಯೆ ಅಮರಾವತಿಯಲ್ಲಿ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲಾಗಿದೆ ಎಂದು ಗೃಹ ಸಚಿವಾಲಯ ಶನಿವಾರ ತಿಳಿಸಿದೆ.
ಈ ಪ್ರಕರಣದಲ್ಲಿ ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಮುದ್ದಾಸಿರ್ ಅಹ್ಮದ್, 22, ಶಾರುಖ್ ಪಠಾಣ್, 25, ಅಬ್ದುಲ್ ತೌಫಿಕ್, 24, ಶೋಯೆಬ್ ಖಾನ್, 22, ಮತ್ತು ಅತಿಬ್ ರಶೀದ್, 22 ಎಂದು ಗುರುತಿಸಲಾಗಿದೆ. ಅಮರಾವತಿಯ ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕೊಹ್ಲೆ ಅವರ ಪುತ್ರ ಸಂಕೇತ್ ನೀಡಿದ ದೂರಿನ ನಂತರ ಅವರನ್ನು ಬಂಧಿಸಲಾಗಿದೆ. ಆರನೇ ಆರೋಪಿ ಶಮೀಮ್ ಅಹ್ಮದ್ ತಲೆಮರೆಸಿಕೊಂಡಿದ್ದಾನೆ.

ಘಟನೆ ನಡೆದಿದ್ದು ಹೇಗೆ?
ದೂರಿನ ಪ್ರಕಾರ, ಜೂನ್ 21 ರಂದು ತಡರಾತ್ರಿ ಕೊಲ್ಹೆ ತನ್ನ ಅಂಗಡಿ ‘ಅಮಿತ್ ಮೆಡಿಕಲ್ ಸ್ಟೋರ್’ ಅನ್ನು ಮುಚ್ಚಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಕೊಲ್ಹೆ ಅವರ ಸ್ಕೂಟರಿನಲ್ಲಿ ಮನೆಗೆ ಹೋಗುತ್ತಿದ್ದರು. ಅವರ ಮಗ ಸಂಕೇತ್ (27) ಮತ್ತು ಅವರ ಪತ್ನಿ ವೈಷ್ಣವಿ ಮತ್ತೊಂದು ಸ್ಕೂಟರ್‌ನಲ್ಲಿ ಅವರೊಂದಿಗೆ ಹೋಗುತ್ತಿದ್ದರು. ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಏಕಾಏಕಿ ಕೊಲೆ ಅವರ ಬೈಕ್‌ ನಿಲ್ಲಿಸಿದರು. ನಂತರ ಒಮ್ಮೆಗೇ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ನಂತರ, ಮತ್ತೊಬ್ಬ ವ್ಯಕ್ತಿ ಆಗಮಿಸಿದ್ದ. ಆದರೆ ಅಷ್ಟರಲ್ಲಿ ಸಹಾಯಕ್ಕಾಗಿ ಹೆಂಡಿ ಮತ್ತು ಮಗ ಕೂಗಿಕೊಂಡಾಗ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪುತ್ರ ಸಂಕೇತ್ ಪೊಲೀಸರಿಗೆ ತಿಳಿಸಿದ್ದಾರೆ.ನಂತರ ಸ್ಥಳೀಯರ ನೆರವಿನೊಂದಿಗೆ ಕೊಲ್ಹೆ ಅವರನ್ನು ಸಮೀಪದ ಆಕ್ಸನ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ವೇಳೆ ಸಾವಿಗೀಡಾದರು.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

ಐವರು ಬಂಧಿತ ವ್ಯಕ್ತಿಗಳು ಆರನೇ ಆರೋಪಿಯ ಸಹಾಯವನ್ನು ಕೋರಿದ್ದಾರೆ ಎಂದು ಅಮರಾವತಿ ಪೊಲೀಸರು ಹೇಳಿದ್ದಾರೆ, ಅವರು ಪರಾರಿಯಾಗಲು ವಾಹನ ಮತ್ತು 10,000 ರೂ.ಗಳ ಸಹಾಯವನ್ನು ಕೇಳಿದ್ದರು. ತಪ್ಪಿಸಿಕೊಂಡಿರುವ ಶಂಕಿತ ಆರೋಪಿಯು ಕೊಲೆಯ ಇತರ ಐದು ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಿದ್ದ ಎಂದು ಅವರು ಹೇಳಿದರು.
ಮೆಡಿಕಲ್ ಸ್ಟೋರ್‌ನಿಂದ ಹೊರಡುವಾಗ ಕೊಲ್ಹೆಯ ಮೇಲೆ ನಿಗಾ ಇಡಲು ಮತ್ತು ಇತರ ಮೂವರನ್ನು ಎಚ್ಚರಿಸಲು ಆತ ಇಬ್ಬರಿಗೆ ಜವಾಬ್ದಾರಿ ವಹಿಸಿದ್ದ ಎಂದು ಹೇಳಲಾಗಿದೆ.
“ತನಿಖೆಯ ಸಮಯದಲ್ಲಿ, ಕೊಲ್ಹೆ ಅವರು ವಾಟ್ಸಾಪ್‌ನಲ್ಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ಹಂಚಿಕೊಂಡಿದ್ದರು ಎಂದು ನಾವು ತಿಳಿದುಕೊಂಡಿದ್ದೇವೆ” ಎಂದು ಅಧಿಕಾರಿಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಏತನ್ಮಧ್ಯೆ, ಸಂಕೇತ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತನ್ನ ತಂದೆ ಎಂದಿಗೂ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ತಿಳಿಸಿದ್ದಾರೆ.

“ಅವರ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ನಾನು ಕೇಳಿದೆ, ಆದರೆ ನಾನು ಅವರ ಫೇಸ್‌ಬುಕ್ ಪ್ರೊಫೈಲ್ ಅನ್ನು ಪರಿಶೀಲಿಸಿದ್ದೇನೆ ಮತ್ತು ಆಕ್ಷೇಪಾರ್ಹ ಏನೂ ಕಂಡುಬಂದಿಲ್ಲ. ಉದ್ದೇಶ ಏನು ಎಂದು ಪೊಲೀಸರು ಮಾತ್ರ ಹೇಳಬಹುದು” ಎಂದು ಅವರು ಹೇಳಿದರು.
ಅಮರಾವತಿ ನಗರ ಪೊಲೀಸ್ ಕಮಿಷನರ್ ಆರ್ತಿ ಸಿಂಗ್ ಪ್ರಕಾರ, “ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ ಮತ್ತು ಉಳಿದವರನ್ನು ನಾವು ಹುಡುಕುತ್ತಿದ್ದೇವೆ, ತಪ್ಪಿಸಿಕೊಂಡವರ ಬಂಧನವು ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ನಮಗೆ ಸ್ಪಷ್ಟತೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಅಮರಾವತಿಯಲ್ಲಿ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲಾಗಿದೆ ಎಂದು ಗೃಹ ಸಚಿವಾಲಯ ಶನಿವಾರ ತಿಳಿಸಿದೆ.
ಕೊಲೆಯ ಹಿಂದಿನ ಪಿತೂರಿ, ಸಂಘಟನೆಗಳ ಒಳಗೊಳ್ಳುವಿಕೆ ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುವುದು” ಎಂದು ಸಚಿವಾಲಯ ಹೇಳಿದೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement