ಗೋಕರ್ಣ: ಜುಲೈ 13ರಿಂದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 29ನೇ ಚಾತುಮಾರ್ಸ್ಯ ಆರಂಭ

ಕುಮಟಾ: ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 29ನೇ ಚಾತುರ್ಮಾಸ್ಯ ಜುಲೈ 13ರಿಂದ ಸೆಪ್ಟೆಂಬರ್‌ 10ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಅಶೋಕೆಯಲ್ಲಿ ನಡೆಯಲಿದ್ದು, ಇದನ್ನು ಗುರುಕುಲ ಚಾತುರ್ಮಾಸ್ಯ ಎಂದು ಸಂಕಲ್ಪಿಸಲಾಗಿದೆ
ಈ ವರ್ಷದ ಚಾತುಮಾಸ್ಯ ಕುಮಟಾ ತಾಲೂಕಿನ ಗೋಕರ್ಣದ ಅಶೋಕೆಯಲ್ಲಿ ಶುಭಕೃತ ಸಂವತ್ಸರದ ಆಶಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯ ತನಕ ನಡೆಸಲು ನಿರ್ಧರಿಸಲಾಗಿದೆ. ಜುಲೈ 13ರಂದು ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಸಂಕಲ್ಪಿತ ಚಾತುರ್ಮಾಸ್ಯ ಕಾರ್ಯಕ್ಕೆ ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ ಆಗಮಿಸಲಿದ್ದಾರೆ.

ಜುಲೈ 15ರಿಂದ ಸೆಪ್ಟೆಂಬರ್‌ 9ರ ತನಕ ವಿಶೇಷ ಚಂಡಿ ಹವನ ನಡೆಸಲು ಉದ್ದೇಶಿಸಲಾಗಿದೆ. ಜುಲೈ 15ರಿಂದ ಸೆಪ್ಟೆಂಬರ್‌ 4ರ ತನಕ ವಿವಿಧ ಹವನ ಕಾರ್ಯಗಳು ನಿರಂತರ ನಡೆಯಲಿದೆ. ಚಾತುರ್ಮಾಸ್ಯದ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ದೇವಪೂಜೆ, ಹವನ, ಶ್ರೀಗಳಿಂದ ಚಾತುರ್ಮಾಸ್ಯ ಸಂದೇಶ ಇತ್ಯಾದಿ ಸಂಕಲ್ಪಿತ ಕಾರ್ಯಗಳು ನಡೆಯಲಿವೆ. ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಬರುವ ಸನಾತನ ಪೂಜಾ ವಿಧಿ ವಿಧಾನಗಳು ನೆರವೇರಲಿದೆ. 60 ದಿನಗಳ ಅವಧಿಯಲ್ಲಿ ಪ್ರತಿನಿತ್ಯ ಶ್ರೀರಾಘವೇಶ್ವರ ಸ್ವಾಮಿಗಳಿಂದ ಚಾತುರ್ಮಾಸ್ಯ ಸಂದೇಶ ಇರಲಿದೆ. ಪ್ರತಿ ಶುಕ್ರವಾರ ನವಚಂಡಿ ಹವನ ಮಾಡಲು ಸಂಕಲ್ಪಿಸಲಾಗಿದೆ.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

ಅರುಣ ಹವನ, ಗುರು ಅರುಣ ನಮಸ್ಕಾರ, ಸಹಸ್ರ ಚಂಡಿಹವನ, ಘನ ಪಾರಾಯಣ, ಸಪ್ತಶತಿ ಪಾರಾಯಣ, ವಿವಿಧ ಪ್ರಕರ್ಪಗಳ ಉದ್ಘಾಟನೆ, ವೈದಿಕ ಸಮಾವೇಶ, ಗುರಿಕಾರರ ಸಮಾವೇಶ, ಮಾತೃ ಸಮಾವೇಶ, ಯುವ ಮತ್ತು ಸೇವಾ ಸಮಾವೇಶವು ನಡೆಯಲಿದೆ. ಈ ಸಮಯದಲ್ಲಿ ಶ್ರೇಷ್ಠ ಕಲಾ ಪ್ರದರ್ಶನಗಳು ಪ್ರತಿಬಿಂಬಿತವಾಗಲಿದೆ ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಹರಿಪ್ರಸಾದ ಹರಿಯಪ್ಪು ತಿಳಿಸಿದ್ದಾರೆ.
ಚಾತುರ್ಮಾಸ್ಯದ ಪ್ರತಿನಿತ್ಯದ ಸೇವಾ ಕಾರ್ಯದಲ್ಲಿ ಶ್ರೀಮಠದ ವಲಯದ ಭಕ್ತರು ಭಾಗವಹಿಸಲಿದ್ದಾರೆ. ಶ್ರೀದೇವರ ವರ್ಧಂತಿ, ಶ್ರೀಕೃಷ್ಣಾಷ್ಟಮಿ, ಶ್ರೀ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಚಾತುರ್ಮಾಸ್ಯ ಸಂಪನ್ನ ಸಂದರ್ಭದಲ್ಲಿ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಹಾಗೂ ಕೊನೆಯ ದಿನದಂದು ಶ್ರೀಗಳಿಂದ ಸೀಮೋಲ್ಲಂಘನ ಸಂಕಲ್ಪ ನಡೆಯಲಿದೆ ಎಂದು ಹರಿಪ್ರಸಾದ ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement