ಮೆಕ್ಸಿಕೋದಲ್ಲಿ ವರ್ಣರಂಜಿತ ಸಮಾರಂಭದಲ್ಲಿ ಮೊಸಳೆ ಮದುವೆಯಾದ ಮೇಯರ್‌ | ವೀಕ್ಷಿಸಿ

ಇಂಟರ್ನೆಟ್‌ನಲ್ಲಿನ ಸಂಪೂರ್ಣ ವಿಲಕ್ಷಣ ವಿದ್ಯಮಾನದಲ್ಲಿ ಮೆಕ್ಸಿಕೋದ ಓಕ್ಸಾಕಾ ಎಂಬ ಸಣ್ಣ ಮೀನುಗಾರಿಕಾ ನಗರದ ಮೇಯರ್ ವಧುವಿನಂತೆ ಸಿಂಗರಿಸಿಕೊಂಡ ಮೊಸಳೆ(ಅಲಿಗೇಟರ್)ಯನ್ನು ವಿವಾಹವಾಗಿದ್ದಾರೆ…!. ಅವರು ತಮ್ಮ ಅಸಾಂಪ್ರದಾಯಿಕ ವಧುವಿಗೆ ಮುತ್ತನ್ನೂ ನೀಡಿದ್ದಾರೆ ಮತ್ತು ಅದರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಸ್ಯಾನ್ ಪೆಡ್ರೊ ಹುವಾಮೆಲುಲಾ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಏಳು ವರ್ಷದ ಹೆಣ್ಣು ಅಲಿಗೇಟರ್ (ಮೊಸಳೆ) ಅನ್ನು ಗುರುವಾರ ಹಳೆಯ ಆಚರಣೆಯ ಭಾಗವಾಗಿ ವಿವಾಹವಾದರು. ಬಾಯಿ ಮುಚ್ಚಿದ್ದ ಸರೀಸೃಪಕ್ಕೂ ಮುತ್ತಿಟ್ಟರು. ಒಕ್ಸಾಕಾ ರಾಜ್ಯದ ಚೊಂಟಾಲ್ ಮತ್ತು ಹುವಾವ್ ಸ್ಥಳೀಯ ಸಮುದಾಯಗಳಲ್ಲಿ ಈ ಸಂಪ್ರದಾಯವು ಶತಮಾನಗಳ ಹಿಂದಿನ ಹಿಸ್ಪಾನಿಕ್ ಕಾಲದ ಪದ್ಧತಿ ನಡೆದುಕೊಂಡು ಬಂದಿದೆ. ಪ್ರಕೃತಿಯ ಅನುಗ್ರಹಕ್ಕಾಗಿ ಇದು ಪ್ರಾರ್ಥನೆಯ ಪದ್ಧತಿಯಾಗಿದೆ. ನಾವು ಸಾಕಷ್ಟು ಮಳೆಗಾಗಿ ಪ್ರಕೃತಿಯನ್ನು ಪ್ರಾರ್ಥಿಸುತ್ತೇವೆ ಎಂದು ಸೋಸಾ ಹೇಳಿದರು.
ರಾಯಿಟರ್ಸ್ ಪ್ರಕಾರ, ಆಚರಣೆಯು ಮೊಸಳೆಯನ್ನು ಮದುವೆಯ ಬಿಳಿ ಡ್ರೆಸ್ ಮತ್ತು ಇತರ ವರ್ಣರಂಜಿತ ಉಡುಪುಗಳಲ್ಲಿ ಅಲಂಕಾರ ಮಡಲಾಗಿತ್ತು. ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಸರೀಸೃಪವು ಭೂಮಿ ತಾಯಿ ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ ಮತ್ತು ಮೇಯರ್‌ನೊಂದಿಗಿನ ಅವಳ ವಿವಾಹವು ಮಾನವರು ದೈವಿಕವಾಗಿ ಸೇರುವುದನ್ನು ಸಂಕೇತಿಸುತ್ತದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

ಮದುವೆಯನ್ನು ಬಹಳ ಸಂಭ್ರಮದಿಂದ ನೆರವೇರಿಸಲಾಯಿತು. ಹಬ್ಬದ ರೀತಿಯಲ್ಲಿ ಹಿನ್ನೆಲೆಯಲ್ಲಿ ಕಹಳೆ ಮತ್ತು ಡೋಲು ಮೊಳಗುತ್ತಿದ್ದಂತೆ ಸ್ಥಳೀಯರು ಅಲಿಗೇಟರ್ ವಧುವನ್ನು ತಮ್ಮ ತೋಳುಗಳಲ್ಲಿ ಹೊತ್ತೊಯ್ದರು.
ಸ್ವಾಭಾವಿಕವಾಗಿ, ಆನ್‌ಲೈನ್‌ನಲ್ಲಿ ಈ ವೀಡಿಯೊ ವೈರಲ್ ಆಗಿದೆ. ನೆಟಿಜನ್‌ಗಳು ತುಂಬಾ ಗೊಂದಲಕ್ಕೊಳಗಾದರು ಮತ್ತು ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಹಲವಾರು ಇತರ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement