ಡಿಎಂಕೆ ಪ್ರತ್ಯೇಕ ತಮಿಳುನಾಡು ಬೇಡಿಕೆ ಇಡುವಂತೆ ಮಾಡಬೇಡಿ: ಸಿಎಂ ಸ್ಟಾಲಿನ್ ವೇದಿಕೆಯಲ್ಲಿದ್ದಾಗಲೇ ಸ್ವಾಯತ್ತತೆ ಬೇಡಿಕೆ ಇಟ್ಟ ಎ ರಾಜಾ

ನಮಕ್ಕಲ್ (ತಮಿಳುನಾಡು): ರಾಜ್ಯ ಸ್ವಾಯತ್ತತೆಯನ್ನು ನಿರಾಕರಿಸುವ ಮೂಲಕ ಪ್ರತ್ಯೇಕ ತಮಿಳುನಾಡು ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಡಿಎಂಕೆಯನ್ನು ಒತ್ತಾಯಿಸಬೇಡಿ ಎಂದು ಡಿಎಂಕೆ ಸಂಸದ ಎ ರಾಜಾ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ನಾಮಕ್ಕಲ್‌ನಲ್ಲಿ ನಡೆದ ಡಿಎಂಕೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದ, ಎ ರಾಜಾ, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಉಪಸ್ಥಿತಿಯಲ್ಲಿ ರಾಜ್ಯ ಸ್ವಾಯತ್ತತೆ ನೀಡುವಂತೆ ಕೇಂದ್ರವನ್ನು ಒತ್ತಾಯಿಸಿದರು. ‘ರಾಜ್ಯಗಳಿಗೆ ಸ್ವಾಯತ್ತತೆ, ಕೇಂದ್ರದಲ್ಲಿ ಒಕ್ಕೂಟ’ ಎಂಬ ವಿಷಯದ ಕುರಿತು ಭಾಷಣ ಮಾಡಿದ ಅವರು, ತಮಿಳುನಾಡಿಗೆ ರಾಜ್ಯ ಸ್ವಾಯತ್ತತೆ ಸಿಗುವವರೆಗೆ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.

advertisement

ನಮ್ಮ ಸೈದ್ಧಾಂತಿಕ ನಾಯಕ ಪೆರಿಯಾರ್ ಅವರು ಭಾರತದಿಂದ ಪ್ರತ್ಯೇಕವಾದ ತಮಿಳುನಾಡನ್ನು ಪ್ರತಿಪಾದಿಸಿದರು ಎಂದು ಅವರು ಹೇಳಿದರು. “ಆದಾಗ್ಯೂ, ಪ್ರಜಾಪ್ರಭುತ್ವ ಮತ್ತು ಭಾರತದ ಏಕತೆಗಾಗಿ ನಾವು ಆ ಬೇಡಿಕೆಯನ್ನು ಇಲ್ಲಿಯವರೆಗೆ ಬದಿಗಿಟ್ಟಿದ್ದೇವೆ. ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಒತ್ತಾಯಿಸಬೇಡಿ ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸುತ್ತೇನೆ. ದಯವಿಟ್ಟು ನಮಗೆ ರಾಜ್ಯ ಸ್ವಾಯತ್ತತೆ ನೀಡಿ ಎಂದು ಅವರು ಮನವಿ ಮಾಡಿದರು.

ಓದಿರಿ :-   ದುರಸ್ತಿ ಮಾಡುವಾಗಲೇ ಮೊಬೈಲ್‌ ಸ್ಫೋಟ, ಹೊತ್ತಿಕೊಂಡ ಬೆಂಕಿ ಜ್ವಾಲೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವಿವಿಧ ಅಂಶಗಳಲ್ಲಿ ಕೇಂದ್ರ ಸರ್ಕಾರದ ಕರುಣೆಗೆ ರಾಜ್ಯಗಳನ್ನು ಬಿಟ್ಟು ಕೇಂದ್ರವು ಹೆಚ್ಚಿನ ಅಧಿಕಾರವನ್ನು ಅನುಭವಿಸುವುದನ್ನು ಮುಂದುವರೆಸಿದೆ ಎಂದು ಆರೋಪಿಸಿದ ರಾಜಾ, ಜಿಎಸ್‌ಟಿ ಕೊಡುಗೆಯಲ್ಲಿ ತಮಿಳುನಾಡು ಪಾಲು 6.5% ಆಗಿದ್ದರೆ, ರಾಜ್ಯವು ಮರಳಿ ಪಡೆದದ್ದು ಕೇವಲ 2.2% ಎಂದು ಗಮನಸೆಳೆದರು. ಸರಳ ಸಮಸ್ಯೆಗಳಿಗೂ ರಾಜ್ಯಗಳು ಕೇಂದ್ರವನ್ನು ಅವಲಂಬಿಸಬೇಕಾಗಿದೆ ಎಂದರು.

ಆರ್ಥಿಕವಾಗಿ ಮತ್ತು ಉದ್ಯೋಗಾವಕಾಶದ ವಿಷಯದಲ್ಲಿ ನಮ್ಮ ಬೇಡಿಕೆಯನ್ನು ಕೇಂದ್ರವು ಹಿಂದಕ್ಕೆ ತಳ್ಳಿದೆ. “ನಾವು ಭಾರತದಲ್ಲಿ ಇರುವವರೆಗೂ, ತಮಿಳರು ಯಾವುದೇ ಆರ್ಥಿಕ ಬೆಳವಣಿಗೆಯನ್ನು ಪಡೆಯುವುದಿಲ್ಲ ಅಥವಾ ಉದ್ಯೋಗಗಳಲ್ಲಿ ಯಾವುದೇ ಭಾಗವನ್ನು ಪಡೆಯುವುದಿಲ್ಲ ಎಂದು ಅವರು ಹೇಳಿದರು.
ಡಿಎಂಕೆ ಪ್ರತ್ಯೇಕತಾವಾದಿ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ ಎಂದು ಹೇಳಿರುವ ಬಿಜೆಪಿ ನಾಯಕರು ಈ ಹೇಳಿಕೆಗೆ ಟೀಕಿಸಿದ್ದಾರೆ. ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಟ್ವೀಟ್ ಮಾಡಿ, “ಕೇಂದ್ರದಲ್ಲಿ ಪಕ್ಷವನ್ನು ವಿರೋಧಿಸುವುದು ಒಂದು ವಿಷಯ ಆದರೆ ಹಾಗೆ ಮಾಡುವಾಗ ನೀವು ಏಕ ಭಾರತ ಕಲ್ಪನೆಯನ್ನು ವಿರೋಧಿಸಲು ಪ್ರಾರಂಭಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಭಾರತದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಅನಾವರಣಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement