ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳು ಅರೆಸ್ಟ್

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 4 ಗಂಟೆಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಹಾಂತೇಶ ಶಿರೂರು, ಮಂಜುನಾಥ ದುಮ್ಮವಾಡ ಎಂದು ಹೇಳಲಾಗಿದೆ. ಹತ್ಯೆ ನಂತರ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ವಿದ್ಯಾನಗರ ಪೊಲೀಸರು ರಾಮದುರ್ಗದ ಬಳಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಚಂದ್ರಶೇಖರ್‌ ಗುರೂಜಿ ಇಂದು ಹೋಟೆಲಿನಲ್ಲಿ ತಂಗಿದ್ದರು. ಹೋಟೆಲಿನಲ್ಲಿ ತಂಗಿದ್ದ ಇವರನ್ನು ಕರೆ ಮಾಡಿದ ಇಬ್ಬರು ರಿಸೆಪ್ಶನಿಸ್ಟ್‌ ಜಾಗಕ್ಕೆ ಬರಲು ಹೇಳಿದ್ದಾರೆ. ಗುರೂಜಿ ಇವರ ಬಳಿ ಬರುತ್ತಿದ್ದಂತೆ ಇಬ್ಬರು ಎದ್ದು ನಿಂತಿದ್ದಾರೆ. ಗುರೂಜಿ ಕುಳಿತ ಬಳಿಕ ಒಬ್ಬ ಆಶೀರ್ವಾದ ಪಡೆಯುವ ನಾಟಕ ಮಾಡಿ ನಮಸ್ಕರಿಸಿದ್ದಾನೆ. ಕೆಲ ಕ್ಷಣದಲ್ಲೇ ನಿಂತಿದ್ದ ಮತ್ತೊಬ್ಬ ಯುವಕ ಚಾಕುವಿನಿಂದ ಇರಿದಿದ್ದಾನೆ. ನಂತರ ಇಬ್ಬರು ಮನ ಬಂದಂತೆ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು.
ಆರೋಪಿಗಳಿಬ್ಬರೂ ಚಂದ್ರಶೇಖರ ಗುರೂಜಿಗೆ ಒಂದು ಕಾಲದಲ್ಲಿ ಆಪ್ತರಾಗಿದ್ದು, ಸರಳವಾಸ್ತು ಸಂಸ್ಥೆಯಲ್ಲಿ 2013ರಿಂದ 2019ರ ವರೆಗೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಆರೋಪಿ ಮಹಾಂತೇಶ್ ಗುರೂಜಿಯ ಖಾಸಗಿ ವ್ಯವಹಾರ ನೋಡಿಕೊಳ್ಳುತ್ತಿದ್ದ, ಕೆಲ ವರ್ಷದ ಹಿಂದೆ ಇಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಬಂದಿತ್ತು ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement