ಧಾರವಾಹಿ ನೋಡಿ ಮಲ ತಂದೆ ಮೇಲೆ ಅತ್ಯಾಚಾರದ ದೂರು ನೀಡಿದ ಮಗಳು:7 ವರ್ಷದ ನಂತರ ಖುಲಾಸೆ, ತಪ್ಪು ಮಾಡದೆ ಶಿಕ್ಷೆ ಅನುಭವಿಸಿದ ತಂದೆ…!

ಮುಂಬೈ: 2015ರಲ್ಲಿ ತನ್ನ 15 ವರ್ಷದ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತನಾಗಿದ್ದ 35 ವರ್ಷದ ವ್ಯಕ್ತಿಯನ್ನು ಕಲ್ಯಾಣ್ ಸೆಷನ್ಸ್ ನ್ಯಾಯಾಲಯವು ಏಳು ವರ್ಷ ಜೈಲುವಾಸ ಅನುಭವಿಸಿದ ನಂತರ ಖುಲಾಸೆಗೊಳಿಸಿದೆ.
ಪ್ರಕರಣದಲ್ಲಿ ಈ ವ್ಯಕ್ತಿಯನ್ನು ಆತನ ಮಲ ಮಗಳು, ಪತ್ನಿ ಮತ್ತು ಪತ್ನಿಯ ಮೊದಲ ಪತಿ ತಪ್ಪಾಗಿ ಸಿಲುಕಿಸಿದ್ದಾರೆ. ತನ್ನ ಬಾಯ್‌ಫ್ರಂಡ್‌ ಜೊತೆಗಿನ ತನ್ನ ಸಂಬಂಧವನ್ನು ಮರೆಮಾಡಲು ಮತ್ತು ತನ್ನ ಹೆತ್ತವರನ್ನು ಮತ್ತೆ ಒಂದುಗೂಡಿಸಲು ಟಿವಿಲ್ಲಿ ಜನಪ್ರಿಯ ಅಪರಾಧ ಕಾರ್ಯಕ್ರಮವನ್ನು ವೀಕ್ಷಿಸಿದ ನಂತರ ಆತನ ಮಲಮಗಳು ಈ ಯೋಜನೆಯನ್ನು ರೂಪಿಸಿ ತನ್ನ ಮಲ ತಂದೆಯನ್ನು ಸಿಲುಕಿಸಿದ್ದಳು…!
ವ್ಯಕ್ತಿ 2018ರಲ್ಲಿ ಜೈಲಿನಲ್ಲಿ ತನ್ನ ವಕೀಲರನ್ನು ಭೇಟಿಯಾದಾಗ ವಕೀಲರು ಈ ವ್ಯಕ್ತಿಯ ಉತ್ತಮ ನಡವಳಿಕೆ ಗಮನಿಸಿದರು ಮತ್ತು ಈ ಪ್ರಕರಣದಲ್ಲಿ ನ್ಯಾಯಕೊಡಿಸಲು ತೀರ್ಮಾನಿಸಿದರು. ಈ ಪ್ರಕರಣದಲ್ಲಿ ಹೆಚ್ಚಿನದನ್ನು ಅರಿತುಕೊಂಡ ವಕೀಲರು ತಮ್ಮದೇ ಆದ ತನಿಖೆಯನ್ನು ಪ್ರಾರಂಭಿಸಿದರು. ನಂತರ ನರ್ಕರ್‌ ಅವರಿಗೆ ನ್ಯಾಯ ಕೊಡಿಸಿದರು.

ಪ್ರಕರಣದ ಹಿನ್ನೆಲೆ:
28 ವರ್ಷ ವಯಸ್ಸಿನ ವಿಪುಲ್ ನರ್ಕರ್ ಎಂಬ ವ್ಯಕ್ತಿ 2014ರಲ್ಲಿ ತನ್ನ ಸ್ವಂತ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದರು. ಅವರು ವಿಚ್ಛೇದಿತ ಮಹಿಳೆಯೊಬ್ಬರನ್ನು ಉಪಾಹಾರ ಗೃಹದಲ್ಲಿ ಭೇಟಿಯಾದ ನಂತರ ಪರಿಚಯವಾಗಿ ಹತ್ತಿರವಾದರು. ವಿಚ್ಛೇದಿತ ಮಹಿಳೆಗೆ, 15 ವರ್ಷದ ಮಗಳು ಮತ್ತು 13 ವರ್ಷದ ಮಗ ಇದ್ದರು. ನರ್ಕರ್ ಅವರು ಇವರಿಗಾಗಿ ಡೊಂಬಿವಿಲಿಯಲ್ಲಿ ಫ್ಲಾಟ್ ಖರೀದಿಸಿದರು ಮತ್ತು ನಂತರ 34 ವರ್ಷ ವಯಸ್ಸಿನ ವಿಚ್ಛೇದಿತ ಮಹಿಳೆಯನ್ನು ಮದುವೆಯಾದರು. ತನ್ನ ಮಲ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶವನ್ನೂ ಕೊಡಿಸಿದರು.
ಒಂದು ವರ್ಷದ ನಂತರ, 2015ರಲ್ಲಿ, ನರ್ಕರ್ ತನ್ನ ಮಲ ಮಗಳನ್ನು ಬೇರೆ ಹುಡುಗನೊಂದಿಗೆ ಎರಡು ಬಾರಿ ನೋಡಿದ ನಂತರ ಅವಳನ್ನು ಗದರಿಸಿದ್ದಾನೆ ಹಾಗೂ ಅವಳಿಗೆ ಓದಿನ ಕಡೆ ಗಮನ ಕೊಡುವಂತೆ ತಾಕೀತು ಮಾಡಿದ್ದಾರೆ. ಆದರೆ ಇದು ಅವಳಿಗೆ ಸರಿ ಬರಲಿಲ್ಲ.
ಅದೇ ವರ್ಷ ಏಪ್ರಿಲ್‌ನಲ್ಲಿ, ಹುಡುಗಿ ಫಿನೈಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಂತರ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಆ ಹುಡುಗಿ ತನ್ನ ಮಲತಂದೆ ವಿಪುಲ್‌ ನರ್ಕರ್‌ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾರೆ. ತಕ್ಷಣವೇ ನರ್ಕರ್‌ ಅವರನ್ನು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಅತ್ಯಾಚಾರ ಆರೋಪಕ್ಕಾಗಿ ಬಂಧಿಸಲಾಯಿತು. ನರ್ಕರ್ ಅವರ ಬಳಿ ಆಗ ಹಣವಿರಲಿಲ್ಲ ಮತ್ತು ಪ್ರಕರಣದಲ್ಲಿ ಹೋರಾಡಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ಜೈಲಿನಲ್ಲಿಯೇ ಇರಬೇಕಾಯಿತು.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

ಆದರೆ 2018 ರಲ್ಲಿ, ನಾನು ಅಧರವಾಡಿ ಜೈಲಿನಲ್ಲಿ ನರ್ಕರ್‌ ಅವರನ್ನು ಭೇಟಿಯಾದರು. ವಿಪುಲ್‌ ನರ್ಕರ್ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದರು ಮತ್ತು ಹೆಚ್ಚಿನ ಕೈದಿಗಳಿಗೆ ಅರ್ಜಿಗಳನ್ನು ಬರೆಯುವಂತಹ ಸಣ್ಣ ಕೆಲಸಗಳಲ್ಲಿ ಸಹಾಯ ಮಾಡುವುದನ್ನು ನಾನು ಗಮನಿಸಿದ್ದೇನೆ. ಅವರು ಬಹಳ ಸುಂದರವಾದ ಕೈಬರಹವನ್ನು ಹೊಂದಿದ್ದರು ಮತ್ತು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ನನಗೆ ಆ ವ್ಯಕ್ತಿಯ ಬಗ್ಗೆ ಕುತೂಹಲ ಹೆಚ್ಚಾಯಿತು ಮತ್ತು ಆ ವ್ಯಕ್ತಿಯ ಕಥೆಯನ್ನು ತಿಳಿದುಕೊಳ್ಳಲು ಬಯಸಿದೆ. ನಂತರ ಈ ಪ್ರಕರಣವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. 2019 ರಲ್ಲಿ, ನಾನು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಮತ್ತು ಪ್ರಕ್ರಿಯೆಗಳು ಪ್ರಾರಂಭವಾದವು. ಆದಾಗ್ಯೂ, ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಅವರು ಇದು ಮತ್ತಷ್ಟು ವಿಳಂಬವಾಯಿತು ಎಂದು ವಕೀಲ ಗಣೇಶ್ ಘೋಲಾಪ್ ತಿಳಿಸಿದ್ದಾರೆ.
ವಕೀಲ ಗಣೇಶ್ ಘೋಲಾಪ್ ಅವರು ಮಲ ತಂದೆಯ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ ಬಾಲಕಿ, ಆಕೆಯ ಮೂವರು ಪುರುಷ ಸ್ನೇಹಿತರು, ಆಕೆಯ ಪ್ರಿನ್ಸಿಪಾಲ್, ವೈದ್ಯಕೀಯ ಅಧಿಕಾರಿಗಳು ಮತ್ತು ನೆರೆಹೊರೆಯವರು ಸೇರಿದಂತೆ 12 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದರು.

ಹಡುಗಿಯ ವೈದ್ಯಕೀಯ ವರದಿಯು ಲೈಂಗಿಕ ದೌರ್ಜನ್ಯದ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ. ಘಟನೆಯ ಸಮಯದಲ್ಲಿ ಅವಳು ಅಪ್ರಾಪ್ತಳಾಗಿದ್ದಳು ಎಂದು ಸಾಬೀತುಪಡಿಸಲು ಆಕೆಯ ಜನನ ಪ್ರಮಾಣಪತ್ರವನ್ನು ಆಕೆಯ ಪೋಷಕರು ಅಥವಾ ಶಾಲೆಯ ಪ್ರಾಂಶುಪಾಲರಿಗೆ ನೀಡಲು ಸಾಧ್ಯವಾಗಲಿಲ್ಲ. ನಂತರ ನಾವು ಹುಡುಗಿಯನ್ನು ಕ್ರಾಸ್ ಎಕ್ಸಾಮಿನ್ ಮಾಡಲು ನಿರ್ಧರಿಸಿದೆವು. ಆಗ ನಿಜವಾದ ವಿಷಯವನ್ನು ಆ ಹುಡುಗಿ ಬಾಯ್ಬಿಟ್ಟಿದ್ದಾಳೆ. ಅವರು ಡೊಂಬಿವಿಲಿಯಲ್ಲಿ ನರ್ಕರ್ ಖರೀದಿಸಿದ್ದ ಮನೆಯನ್ನು ಮಾರಿ ತನ್ನ ನಿಜವಾದ ತಂದೆಯೊಂದಿಗೆ ವಾಸಿಸಲು ಹೋಗಿದ್ದಾಗಿ ತಿಳಿಸಿದರು. ಅಲ್ಲದೆ ತನ್ನ ಗೆಳೆಯ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಹುಡುಗಿ ಜನಪ್ರಿಯ ಅಪರಾಧ ಕಾರ್ಯಕ್ರಮವನ್ನು ಟೀವಿಯಲ್ಲಿ ನೋಡುತ್ತಿದ್ದಳು, ಅಲ್ಲಿಂದ ಅವಳು ತನ್ನ ಮಲತಂದೆಯನ್ನು ಸಿಲುಕಿಸುವ ಕಲ್ಪನೆಯನ್ನು ಪಡೆದಳು, ಇದರಿಂದ ತನ್ನ ಹೆತ್ತವರು ಕೂಡ ಮತ್ತೆ ಒಂದಾಗಬಹುದು ಎಂಬ ಆಲೋಚನೆಯೂ ಇದರಲ್ಲಿ ಇತ್ತು ಎಂದು ಅವಳು ನ್ಯಾಯಾಲಯಕ್ಕೆ ತಿಳಿಸಿದಳು.
ನ್ಯಾಯಾಲಯದಲ್ಲಿ ಸಂಪೂರ್ಣ ನಾಟಕವು ತೆರೆದುಕೊಂಡ ನಂತರ, ನ್ಯಾಯಾಧೀಶರು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಎಲ್ಲಾ ಅತ್ಯಾಚಾರ ಮತ್ತು ಪೋಕ್ಸೊ ಆರೋಪಗಳಿಂದ ನರ್ಕರ್ ಅವರನ್ನು ಖುಲಾಸೆಗೊಳಿಸಿದರು.

ಪ್ರಮುಖ ಸುದ್ದಿ :-   ಐಪಿಎಲ್‌ (IPL)2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು..? ಈ ವೀಡಿಯೊಗಳನ್ನು ನೋಡಿ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement