ಮುಂಬೈ : ನಿರ್ದೇಶಕಿ ಲೀನಾ ಮಣಿಮೇಕಲೈ ಅವರು ಈಗ ಮತ್ತೊಂದು ವಿವಾದ ಸೃಷ್ಟಿದ್ದಾರೆ. ಕೆಲ ಹಿಂದೆಷ್ಟೇ ಕಾಳಿ ದೇವಿ ಸಿಗರೇಟ್ ಸೇದುತ್ತಿರುವ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಬೆನ್ನಿಗೇ ಈಗ ಶಿವ ಮತ್ತು ಪಾರ್ವತಿ ವೇಷಾಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ನಿರ್ದೇಶಕಿ ಲೀನಾ ಮಣಿಮೇಕಲೈ ಅವರು ಪ್ರಚಾರಗಿಟ್ಟಿಸಿಕೊಳ್ಳುವ ಸಲುವಾಗಿಯೇ ಈ ರೀತಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ವಿವಾದಾತ್ಮಕ ಕಾಳಿ ಪೋಸ್ಟರ್ ಶೇರ್ ಮಾಡಿದ ನಂತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಹಲವು ಎಫ್ಐಆರ್ಗಳು ದಾಖಲಾಗಿದೆ.
ಕಾಳಿ ಪೋಸ್ಟರ್ ವಿರುದ್ಧ ಆಕ್ರೋಶ ಭುಗಿಲೇಳುತ್ತಿದ್ದಂತೆ ಟ್ವಿಟರ್ ಸಂಸ್ಥೆಯು ಲೀನಾಳ ಖಾತೆಯಿಂದ ವಿವಾದಾತ್ಮಕ ಕಾಳಿಮಾತೆ ಫೋಸ್ಟರ್ ಫೋಟೋವನ್ನು ನಿನ್ನೆಯಷ್ಟೇ ಡಿಲೀಟ್ ಮಾಡಿತ್ತು. ಆದರೆ ಅಷ್ಟಕ್ಕೆ ಸುಮ್ಮನಾಗದ ಲೀನಾ ಮಣಿಮೇಕಲೈ ಇಂದು ಶಿವ-ಪಾರ್ವತಿ ವೇಷಧಾರಿಗಳ ಬಾಯಲ್ಲಿ ಸಿಗರೇಟ್ ಇರುವ ಫೋಟೋವನ್ನು ಟ್ವಿಟರ್ನಲ್ಲಿ ಹಾಕಿ ಮತ್ತೆ ಕೆಣಕುವ ಕೆಲಸ ಮಾಡಿದ್ದಾರೆ.
ಅವರು ಶಿವ ಮತ್ತು ಪಾರ್ವತಿ ವೇಷಭೂಷಣಗಳನ್ನು ಧರಿಸಿರುವ ಇಬ್ಬರು ಧೂಮಪಾನ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದು, ಫೋಟೊಕ್ಕೆ “ಎಲ್ಲೆಡೆ” ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಮೊದಲು ಕಾಳಿ ದೇವಿಯು ಧೂಮಪಾನ ಮಾಡುತ್ತಿರುವ ಪೋಸ್ಟರ್ ಶೇರ್ ಮಾಡಿದ ನಂತರ ಭುಗಿಲೆದ್ದ ಆಕ್ರೋಶ ಕೆನಡಾದ ಆಗಾ ಖಾನ್ ಮ್ಯೂಸಿಯಂ ಸಾಕ್ಷ್ಯಚಿತ್ರದ ಪ್ರಸ್ತುತಿಯನ್ನು ತೆಗೆದುಹಾಕಲು ಕಾರಣವಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ