ಚೆನ್ನೈ: ತಮ್ಮ ತಂದೆ-ದಕ್ಷಿಣದ ಸೂಪರ್ಸ್ಟಾರ್ ಚಿಯಾನ್ ವಿಕ್ರಮ್ ಹೃದಯಾಘಾತವಾಗಿದೆ ಎಂಬ ಸುಳ್ಳು ವರದಿಗಳ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪುತ್ರ ಧ್ರುವ ವಿಕ್ರಮ್ ಅವರು ತಮ್ಮ ತಂದೆಗೆ ಹೃದಯಾಘಾತವಾಗಿಲ್ಲ ಎಂದು ಹೇಳಿದ್ದಾರೆ.
ಆರೋಗ್ಯದ Instagram ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಹೃದಯಾಘಾತದ ವರದಿಗಳನ್ನು ಆಧಾರರಹಿತ’ ಎಂದು ತಳ್ಳಿಹಾಕಿದ್ದಾರೆ.
ದಕ್ಷಿಣದ ಸೂಪರ್ಸ್ಟಾರ್ ವಿಕ್ರಮ್ ಅವರಿಗೆ ಎದೆನೋವಿ ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ವಿಕ್ರಂ ತಮ್ಮ ಮುಂಬರುವ ಚಿತ್ರ ‘ಪೊನ್ನಿಯಿನ್ ಸೆಲ್ವನ್’ ನ ಟೀಸರ್ ಬಿಡುಗಡೆಗೆ ಹಾಜರಾಗಬೇಕಿತ್ತು, ಆದರೆ ಎದೆನೋವಿ ಕಾಣಿಸಿಕೊಂಡಿದ್ದರಿಂದ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆತ್ಮೀಯ ಅಭಿಮಾನಿಗಳು ಮತ್ತು ಹಿತೈಷಿಗಳೇ, ಅಪ್ಪಾ ಅವರಿಗೆ ಎದೆಯಲ್ಲಿ ಸ್ವಲ್ಪ ಅಸ್ವಸ್ಥತೆ ಇತ್ತು ಮತ್ತು ಅದಕ್ಕಾಗಿಯೇ ಚಿಕಿತ್ಸೆ ಪ ಯುತ್ತಿದ್ದಾರೆ. ವರದಿಗಳು ಹೇಳುವಂತೆ ಅವರಿಗೆ ಹೃದಯಾಘಾತವಾಗಿಲ್ಲ. ಈ ವದಂತಿಗಳನ್ನು ಹಾಗೂ ಮಾಧ್ಯಮದಲ್ಲಿ ಬಂದ ವರದಿಗಳಿಗೆ ನಮಗೆ ನೋವಾಗಿದೆ” ಎಂದು ಪೋಸ್ಟ್ನಲ್ಲಿ ಅವರು ಬರೆದಿದ್ದಾರೆ.
ಈ ಸಮಯದಲ್ಲಿ ನಮ್ಮ ಕುಟುಂಬಕ್ಕೆ ನಮಗೆ ಅಗತ್ಯವಿರುವ ಗೌಪ್ಯತೆಯನ್ನು ನೀಡುವಂತೆ ನಾವು ವಿನಂತಿಸುತ್ತೇವೆ. ನಮ್ಮ ತಂದೆ ಈಗ ಆರೋಗ್ಯವಾಗಿದ್ದಾರೆ. ಅವರು ಒಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ