ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ಬೆಳ್ಳಂಬೆಳಗ್ಗೆ ಮನೆಯಿಂದ ಹೊರಗೆ ಓಡಿದ ಜನ

ವಿಜಯಪುರ: ಶನಿವಾರ ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯಲ್ಲಿ ಇಂದು, ಶನಿವಾರ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳ್ಳಂಬೆಳಗ್ಗೆ ಭಾರೀ ಶಬ್ದದೊಂದಿಗೆ 4-5 ಸೆಕೆಂಡ್​ಗಳ‌ ಕಾಲ ಭೂಮಿ ಕಂಪಿಸಿದ್ದು, ಆಗಷ್ಟೇ ನಿದ್ದೆಯಿಂದ ಏಳುತ್ತಿದ್ದ ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಶನಿವಾರ ಬೆಳಿಗ್ಗೆ 6:22ಕ್ಕೆ ಕಾಲ ಭೂಮಿ ಕಂಪಿಸಿದೆ. ಜಯಪುರದ ನಗರದ ರೇಲ್ವೆ ಸ್ಟೇಷನ್ ಏರಿಯಾ, ಗೋಳಗುಮ್ಮ ಏರಿಯಾ, ಗ್ಯಾಂಗಬಾವಡಿ, ಕೀರ್ತಿನಗರ, ಜಲನಗರ, ಕನಕದಾಸ ಬಡಾವಣೆ, ಇಬ್ರಾಹಿಂಪುರ, ಸಾಯಿ ಪಾರ್ಕ್, ರಾಜಾಜಿನಗರ, ಮನಗೂಳಿ ಅಗಸಿ, ಹೀಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. . ವಿಜಯಪುರ, ತಿಕೋಟಾ, ಬಬಲೇಶ್ವರ, ಇಂಡಿ ಹಾಗೂ ಚಡಚಣ ತಾಲೂಕುಗಳು ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಭೂಮಿ ನಡುಗಿದ ಅನುಭವವಾಗಿದೆ ಎಂದು ಅನೇಕರು ಹೇಳಿದ್ದಾರೆ.

 

 

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ನಿಮ್ಮ ಕಾಮೆಂಟ್ ಬರೆಯಿರಿ

advertisement