ವಿಂಬಲ್ಡನ್ 2022: ನಿಕ್ ಕಿರ್ಗಿಯೋಸ್ ಸೋಲಿಸಿ 7ನೇ ವಿಂಬಲ್ಡನ್ ಪ್ರಶಸ್ತಿ ಗೆದ್ದ ಜೊಕೊವಿಕ್

ಲಂಡನ್‌: ಸೆರ್ಬಿಯಾದ ನೊವಾಕ್ ಜೊಕೊವಿಕ್, ಭಾನುವಾರ (ಜುಲೈ 10) ಸೆಂಟರ್ ಕೋರ್ಟ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಅವರನ್ನು 4-6, 6-3, 6-4, 7-6 (7-3) ಸೆಟ್‌ಗಳಿಂದ ಸೋಲಿಸಿ ವಿಂಬಲ್ಡನ್ 2022 ಪ್ರಶಸ್ತಿ ಗೆದ್ದರು.
35 ವರ್ಷ ವಯಸ್ಸಿನ ಆಟಗಾರ ರೋಜರ್ ಫೆಡರರ್, ಪೀಟ್ ಸಾಂಪ್ರಾಸ್ ಮತ್ತು ಜಾರ್ನ್ ಬೋರ್ಗ್ ನಂತರ ಸತತ ನಾಲ್ಕು ಪ್ರಶಸ್ತಿಗಳನ್ನು ಗೆದ್ದ ನಾಲ್ಕನೇ ಆಟಗಾರರಾದರು. ಜೊಕೊವಿಕ್ ಒಟ್ಟು ಏಳು ವಿಂಬಲ್ಡನ್ ಪ್ರಶಸ್ತಿಗಳನ್ನು ಹೊಂದಿದ್ದಾರೆ, ಅವರ ಕೊನೆಯ ನಾಲ್ಕು ಪ್ರಶಸ್ತಿಗಳು 2018, 2019, 2021 ಮತ್ತು 2022 ರಲ್ಲಿ ಬಂದಿವೆ.
ಮೊದಲ ಸೆಟ್‌ನಲ್ಲಿ ಸೋತಿದ್ದ ವಿಶ್ವ ನಂ.3 ಪಂದ್ಯವನ್ನು ಸ್ವಲ್ಪ ಕಳಪೆಯಾಗಿ ಆರಂಭಿಸಿದರು. ಆದರೆ ಎರಡನೇ ಸೆಟ್‌ನಿಂದ, ಜೊಕೊವಿಕ್ ಹಿಡಿತ ಸಾಧಿಸಿದರು. ಕಿಬ್ಬೊಟ್ಟೆಯ ಗಾಯದಿಂದಾಗಿ ರಫೆಲ್ ನಡಾಲ್ ಹೊರಗುಳಿದ ನಂತರ ಕಿರ್ಗಿಯೋಸ್ ಅವರು ಸೆಮಿ-ಫೈನಲ್‌ನಲ್ಲಿ ವಾಕ್‌ಓವರ್ ಪಡೆದರು, 27 ಏಸ್‌ಗಳನ್ನು ಹಾಕಿದರು. ಆದಾಗ್ಯೂ, ಜೊಕೊವಿಕ್ ಅವರನ್ನು ಹಿಂದಿಕ್ಕಲು ಅವರ ಹೋರಾಟ ವ್ಯರ್ಥವಾಯಿತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement