5ಜಿ ಸ್ಪೆಕ್ಟ್ರಂ ಹರಾಜಿಗೆ ಅದಾನಿ ಗ್ರೂಪ್-ಖಾಸಗಿ ಜಾಲ ಅಭಿವೃದ್ಧಿ

ನವದೆಹಲಿ:

ಜು. 26ರಂದು ನಡೆಯಲಿರುವ 5ಜಿ ತರಂಗಗುಚ್ಛ ಹಂಚಿಕೆ ಹರಾಜಿನಲ್ಲಿ ಅದಾನಿ ಗ್ರೂಪ್ ಪಾಲ್ಗೊಳ್ಳಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅದಾಗಲೇ ಉದ್ಯಮ ವಲಯದಲ್ಲಿ ಭಾರಿ ಚರ್ಚೆಯೂ ನಡೆದಿದೆ. ಟೆಲಿಕಾಂ ಸೇವಾ ಕ್ಷೇತ್ರಕ್ಕೆ ಅದಾನಿ ಕಂಪನಿ ಅಚ್ಚರಿಯ ಪ್ರವೇಶ ಎಂದು ಹೇಳಲಾಗಿತ್ತು. ಅಲ್ಲದೆ ಈಗಿರುವ ಪ್ರಮುಖ ಟೆಲಿಕಾಂ ಸೇವೆದಾರರಾದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಕಂಪನಿಗಳಿಗೆ ಭಾರಿ ಪೈಪೋಟಿ ಕೊಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಾವು ಗ್ರಾಹಕರಿಗೆ ಸೇವೆ ಒದಗಿಸುವ ಕ್ಷೇತ್ರ ಪ್ರವೇಶಿಸುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಬದಲಾಗಿ ನಮ್ಮ ಖಾಸಗಿ ಜಾಲಕ್ಕೆ ಮಾತ್ರ 5ಜಿ ಸೇವೆ ಬಳಸಿಕೊಳ್ಳುವುದಾಗಿ ಕಂಪನಿ ಹೇಳಿದೆ.

ಅದಾನಿ ಗ್ರೂಪ್ ಕಂಪನಿಗಳ ಒಡೆತನದಲ್ಲಿರುವ ವಿಮಾನ ನಿಲ್ದಾಣ, ಬಂದರು, ಸರಕು ಸೇವೆ, ವಿದ್ಯುತ್ ಘಟಕ ಸೇರಿದಂತೆ ಕಂಪನಿಯ ವಿವಿಧ ಘಟಕಗಳಿಗೆ ಪ್ರತ್ಯೇಕ 5ಜಿ ಜಾಲ ಅಭಿವೃದ್ಧಿಪಡಿಸಲಿದೆ. ಅದರಿಂದ ಸೈಬರ್ ಭದ್ರತೆಗೆ ಹೆಚ್ಚಿನ ಅನುಕೂಲವಾಗಲಿದೆ. ಅದಾನಿ ಕಂಪನಿಗಳ ಡಿಜಿಟಲ್ ವೇದಿಕೆ ಹಾಗೂ ದತ್ತಾಂಶ ಕೇಂದ್ರ ಅದರಿಂದ ಹೆಚ್ಚು ಬಲಗೊಳ್ಳಲಿದೆ ಮತ್ತು ಸುರಕ್ಷಿತವಾಗಲಿದೆ.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

ನಾವು ನಮ್ಮದೇ ಆದ ಪ್ರತ್ಯೇಕ ಡಿಜಿಟಲ್ ವ್ಯವಸ್ಥೆ ಹೊಂದಲಿದ್ದೇವೆ. ಸೂಪರ್ ಆಪ್, ದತ್ತಾಂಶ ಸಂಗ್ರಹ ಕೇಂದ್ರ, ಕೈಗಾರಿಕೆ ನಿರ್ದೇಶನ ಹಾಗೂ ನಿಯಂತ್ರಣ ಕೇಂದ್ರ ಅದರಲ್ಲಿ ಒಳಗೊಳ್ಳಲಿದೆ. ಅದಕ್ಕಾಗಿ ಬಲವಾದ ಹಾಗೂ ವೇಗದ ಸಂಪರ್ಕ ಜಾಲದ ಅಗತ್ಯವಿದೆ. ನಮ್ಮ ಎಲ್ಲ ಉದ್ಯಮಗಳು ಸಮಸ್ಯೆರಹಿತವಾಗಿ ಮುನ್ನಡೆಸಲು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಕಂಪನಿ ಹೇಳಿದೆ.

ಶುಕ್ರವಾರ ಅದಾನಿ ಕಂಪನಿ 5ಜಿ ತರಂಗಗುಚ್ಛ ಹರಾಜು ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದೆ. ಈಗಾಗಲೇ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್-ಐಡಿಯಾ ಕಂಪನಿಗಳು ಅರ್ಜಿ ಸಲ್ಲಿಸಿದ್ದು, ಅದಾನಿ ಕಂಪನಿ 4ನೆಯದಾಗಿದೆ.

5ಜಿ ಸ್ಪೆಕ್ಟ್ರಂ ಹರಾಜಿ ನಡೆಸಲು ಕಳೆದ ತಿಂಗಳು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಒಟ್ಟು 4.3 ಲಕ್ಷ ಕೋಟಿ ರೂ. ಮೌಲ್ಯದ 72,097.85 ಮೆಗಾಹರ್ಟ್ಸ್ ತರಂಗಾಂತರಗಳನ್ನು ಕೇಂದ್ರ ಸರ್ಕಾರ ಹರಾಜಿಗೆ ಇಡಲಿದೆ. 20 ವರ್ಷ ಅವಧಿಗೆ ತರಂಗಾಂತರಗಳು ಟೆಲಿಕಾಂ ಕಂಪನಿಗಳಿಗೆ ಲಭ್ಯವಾಗಲಿದೆ. ಹರಾಜಿನ ವೇಳಾಪಟ್ಟಿ ಪ್ರಕಾರ ಬಿಡ್ ಅರ್ಜಿ ಸಲ್ಲಿಸಿದ ಕಂಪನಿಗಳ ವಿವರ ಜು. 12ರಂದು ಪ್ರಕಟವಾಗಲಿದೆ. ಕ್ರಮಬದ್ಧವಾಗಿರುವ ಹಾಗೂ ಹರಾಜಿಗೆ ಆಯ್ಕೆಯಾಗಿರುವ ಕಂಪನಿಗಳ ಮಾಹಿತಿ ಹೊರಬೀಳಲಿದೆ.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement