ಕೆನಡಾದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾನಿ

ಕೆನಡಾದ ರಿಚ್‌ಮಂಡ್‌ ಹಿಲ್‌ನಲ್ಲಿರುವ ವಿಷ್ಣು ದೇವಸ್ಥಾನದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಬುಧವಾರ ಧ್ವಂಸಗೊಳಿಸಲಾಗಿದೆ. ಪ್ರತಿಮೆಯನ್ನು ಗ್ರಾಫಿಕ್ ಪದಗಳಿಂದ ವಿರೂಪಗೊಳಿಸಲಾಗಿದೆ ಮತ್ತು ಘಟನೆಯನ್ನು ದ್ವೇಷದ ಅಪರಾಧ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಯಾರ್ಕ್ ಪ್ರಾದೇಶಿಕ ಪೊಲೀಸ್ ವಕ್ತಾರ ಕಾನ್‌ಸ್ಟೆಬಲ್ ಆಮಿ ಬೌಡ್ರೊ, ದ್ವೇಷಾಪರಾಧಗಳ ಎಲ್ಲಾ ಘಟನೆಗಳು ಮತ್ತು ಯಾವುದೇ ದ್ವೇಷ-ಪಕ್ಷಪಾತ ಘಟನೆಗಳನ್ನು ನಾವು ತೀವ್ರವಾಗಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.
30 ವರ್ಷಗಳ ಹಿಂದೆ ಪ್ರತಿಮೆಯನ್ನು ಸ್ಥಾಪಿಸಿದಾಗಿನಿಂದ ಇದುವರೆಗೆ ಧ್ವಂಸಗೊಂಡಿಲ್ಲ ಎಂದು ದೇವಾಲಯದ ಅಧ್ಯಕ್ಷ ಬುಧೇಂದ್ರ ದುಬೆ ಸಿಬಿಸಿ ನ್ಯೂಸ್‌ಗೆ ತಿಳಿಸಿದರು.
ಒಂಬತ್ತು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ದೆಹಲಿಯಲ್ಲಿ ತಯಾರಿಸಲಾಯಿತು ಮತ್ತು ಮೇ 1988 ರಲ್ಲಿ ಅನಾವರಣಗೊಳಿಸಲಾಯಿತು.

ಭಾರತದ ಪ್ರತಿಕ್ರಿಯೆ…
ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಮತ್ತು ಒಟ್ಟಾವಾದಲ್ಲಿನ ಭಾರತದ ಹೈಕಮಿಷನ್ ಘಟನೆಯನ್ನು ಖಂಡಿಸಿದೆ ಮತ್ತು ಅಪರಾಧದ ಬಗ್ಗೆ ಕೆನಡಾದ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಈ ಅಪರಾಧವು ಭಾರತೀಯ ಸಮುದಾಯದಲ್ಲಿ “ಹೆಚ್ಚಿದ ಕಾಳಜಿ ಮತ್ತು ಅಭದ್ರತೆಗೆ” ಕಾರಣವಾಗಿದೆ ಎಂದು ಹೈ ಕಮಿಷನ್ ಹೇಳಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement