
ಹುಬ್ಬಳ್ಳಿ: ನೀರಸಾಗರ ಜಲಾಶಯದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಯುವಕನೊಬ್ಬ ಜಾರಿ ಬಿದ್ದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.
ಮೃತ ಯುವಕನನ್ನು ಕಿರಣ್ ರಜಪೂತ(22) ಎಂದು ಗುರುತಿಸಲಾಗಿದೆ. ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿ ಕಿರಣ್, ಭಾನುವಾರ ತನ್ನ ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದ. ಜಲಾಶಯದ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವ ವೇಳೆಯಲ್ಲಿ ಕಾಲು ಜಾರಿ ಬಿದ್ದ ಕಿರಣ ನೀರಿನ ರಭಸ ಹೆಚ್ಚಾಗಿದ್ದರಿಂದ ಕೊಚ್ಚಿ ಹೋಗಿದ್ದಾನೆ.
ಕಳೆದ 24 ಗಂಟೆಯಿಂದ ಕಿರಣ್‍ಗಾಗಿ ಹುಡುಕಾಟ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೋಮವಾರ ಮೃತದೇಹ ಪತ್ತೆಯಾಗಿದ್ದು, ಕಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ