ಕೊಲಂಬೊ: ತತ್ತರಿಸುತ್ತಿರುವ ಭಾರೀ ಆರ್ಥಿಕ ಬಿಕ್ಕಟ್ಟಿನ ನಡುವೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಅವರು ಇಂದು, ಬುಧವಾರ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಸಂಸತ್ತಿನ ಮತದಾನದಲ್ಲಿ ಅವರು 219ರಲ್ಲಿ 134 ಮತಗಳನ್ನು ಪಡೆಯುವ ಮೂಲಕ ಪಕ್ಷದ ಪ್ರತಿಸ್ಪರ್ಧಿ ದಲ್ಲಸ್ ಅಲಹಪ್ಪೆರುಮ ಅವರನ್ನು ಸೋಲಿಸಿದರು. ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳ ನಂತರ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸೆ ಕಳೆದ ವಾರ ದೇಶದಿಂದ ಪಲಾಯನ ಮಾಡಿದ್ದರು ಹಾಗೂ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ನಂತರ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ವಿಕ್ರಮಸಿಂಘೆಯವರು ದೇಶವನ್ನು ಆರ್ಥಿಕ ಕುಸಿತದಿಂದ ಹೊರತರುವುದು ಮತ್ತು ತಿಂಗಳ ಸಾಮೂಹಿಕ ಪ್ರತಿಭಟನೆಗಳ ನಂತರ ಸಾರ್ವಜನಿಕ ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ಅವರ ಮುಂದಿರುವ ಸವಾಲಾಗಿದೆ.
ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಸಂಸತ್ತಿನ ಸಂಕೀರ್ಣದ ಒಳಗೆ ಸಂಸತ್ತಿನ ಸಭಾಂಗಣದ ಹೊರಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ಮನವಿ ಮಾಡಿದರು. ನಾಳೆಯಿಂದ ಎಲ್ಲ ಪಕ್ಷಗಳ ಜೊತೆ ಚರ್ಚೆ ನಡೆಸಿ ಆಡಳಿತ ನಡೆಸುವುದಾಗಿ ಹೇಳಿದ್ದಾರೆ.
ಮೇ ತಿಂಗಳಲ್ಲಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡ ಶ್ರೀ ವಿಕ್ರಮಸಿಂಘೆ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಕರೆ ನೀಡಿದ್ದರು. ಪ್ರತಿಭಟನಾಕಾರರು ಅವರ ಖಾಸಗಿ ಮನೆಯನ್ನು ಸುಟ್ಟುಹಾಕಿದರು ಮತ್ತು ಕೊಲಂಬೊದಲ್ಲಿನ ಅವರ ಪ್ರಧಾನ ಮಂತ್ರಿ ಕಚೇರಿಗೆ ಮುತ್ತಿಗೆ ಹಾಕಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ