ತನಗೆ ಪ್ರಾಣ ಬೆದರಿಕೆಯ ಪತ್ರ ಬಂದ ನಂತರ ಮುಂಬೈ ಪೊಲೀಸರಿಂದ ಶಸ್ತ್ರಾಸ್ತ್ರ ಪರವಾನಗಿ ಕೋರಿದ ಬಾಲಿವುಡ್‌ ನಟ ಸಲ್ಮಾನ್ ಖಾನ್

ಮುಂಬೈ: ತಮಗೆ ಜೀವ ಬೆದರಿಕೆ ಬಂದ ನಂತರ ಬಾಲಿವುಡ್‌ ನಟ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಕೋರಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಸಲ್ಮಾನ್‌ ಖಾನ್ ಅವರು ಮುಂಬೈ ಪೊಲೀಸರಿಗೆ ಶಸ್ತ್ರಾಸ್ತ್ರ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ಶುಕ್ರವಾರ ವರದಿ ಮಾಡಿದೆ. ಕಳೆದ ತಿಂಗಳು, ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ವಾಯುವಿಹಾರದಲ್ಲಿ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಉದ್ದೇಶಿಸಿ ಬೆದರಿಕೆ ಪತ್ರವೊಂದು ಪತ್ತೆಯಾಗಿತ್ತು.
ವರದಿಯಲ್ಲಿ ಉಲ್ಲೇಖಿಸಲಾದ ಮೂಲಗಳ ಪ್ರಕಾರ, ಬಾಲಿವುಡ್ ನಟ ಶುಕ್ರವಾರ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಿ ತನಗೆ ಮತ್ತು ತಮ್ಮ ತಂದೆಗೆ ಬೆದರಿಕೆ ಪತ್ರದ ಬಂದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ತಿಂಗಳು, ಸಲ್ಮಾನ್‌ ಖಾನ್ ಅವರಿಗೆ “ತುಮ್ಹಾರಾ ಮೂಸೆವಾಲಾ ಕರ್ ದೇಂಗೆ (ನೀವು ಮೂಸೆವಾಲಾರಂತೆ ಮಾಡುತ್ತೇವೆ)” ಎಂಬ ಸಂದೇಶದೊಂದಿಗೆ ಸಹಿ ಮಾಡದ ಬೆದರಿಕೆ ಪತ್ರ ಬಂದಿತ್ತು. ಜೂನ್ 5 ರಂದು ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ವಾಯುವಿಹಾರದಲ್ಲಿ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಉದ್ದೇಶಿಸಿ ಬರೆದ ಪತ್ರ ಪತ್ತೆಯಾಗಿದೆ. ಪತ್ರದ ನಂತರ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು, ಬೆದರಿಕೆ ಪತ್ರವು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿರುವ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನ ಪ್ರಚಾರದ ಸ್ಟಂಟ್ ಎಂದು ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಬಿಷ್ಣೋಯ್ ಅವರ ಸಹವರ್ತಿ ವಿಕ್ರಮ್ ಬರಾದ್ ಅವರ ಆದೇಶದ ಮೇರೆಗೆ ಬೆದರಿಕೆ ಹಾಕಲಾಗಿದೆ.

ಪ್ರಮುಖ ಸುದ್ದಿ :-   ರಾಜಸ್ಥಾನದ ಸಿಎಂ ಹುದ್ದೆಗೆ ಮುಂಚೂಣಿಯಲ್ಲಿರುವ ಬಿಜೆಪಿ ನಾಯಕರು ಇವರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement