ದ್ರೌಪದಿ ಮುರ್ಮು ವಿಜಯದ ಅಂತರ ಹೆಚ್ಚಿಸಿದ ವಿರೋಧ ಪಕ್ಷಗಳ ಅಡ್ಡ-ಮತದಾನ: ಯಾವ ರಾಜ್ಯದಲ್ಲಿ ಎಷ್ಟು ಅಡ್ಡ ಮತದಾನ ಇಲ್ಲಿದೆ ಮಾಹಿತಿ

ನವದೆಹಲಿ: ಭಾರತದ ಬುಡಕಟ್ಟು ಜನಾಂಗದ ಮೊದಲ ರಾಷ್ಟ್ರಪತಿಯಾಗಲಿರುವ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮು ಅವರ ಪರವಾಗಿ ಹೆಚ್ಚಿನ ಸಂಖ್ಯೆಯ ವಿರೋಧ ಪಕ್ಷದ ಶಾಸಕರು ಹಾಗೂ ಸಂಸದರು ಅಡ್ಡ ಮತದಾನ ಮಾಡಿದ್ದಾರೆ..!
ಮೂಲಗಳ ಪ್ರಕಾರ ದ್ರೌಪದಿ ಮುರ್ಮು ಅವರ ಬೆಂಬಲಕ್ಕೆ ಪ್ರತಿಪಕ್ಷಗಳ ಸುಮಾರು 125 ಶಾಸಕರು ಮತ್ತು 17 ಸಂಸದರು ಅಡ್ಡ ಮತದಾನ ಮಾಡಿದ್ದಾರೆ. ಚುನಾವಣೆಯಲ್ಲಿ ದ್ರೌಪದಿ ಮುರ್ಮು 64 ಪ್ರತಿಶತ ಮತಗಳನ್ನು ಗಳಿಸಿದರು, ಯಶವಂತ್ ಸಿನ್ಹಾ ಅವರಿಗೆ ಸುಮಾರು 36 ಪ್ರತಿಶತದಷ್ಟು ಮತಗಳನ್ನು ಪಡೆದರು.
ಪ್ರತಿಪಕ್ಷದ ಯಶವಂತ್ ಸಿನ್ಹಾ ವಿರುದ್ಧ ದ್ರೌಪದಿ ಮುರ್ಮು ವಿಜೇತರಾಗಿ ಆಯ್ಕೆಯಾದ ಕೂಡಲೇ, ಬಿಜೆಪಿಯ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ ವಿರೋಧ ಪಕ್ಷದ ಶಾಸಕರಿಗೆ “ಧನ್ಯವಾದ” ಎಂದು ಸಂದೇಶಗಳನ್ನು ಹಾಕಿದರು.

140 ಸದಸ್ಯರ ಕೇರಳದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಒಬ್ಬನೇ ಒಬ್ಬ ಶಾಸಕನನ್ನು ಹೊಂದಿಲ್ಲ. ಆದರೂ ಕೇರಳದಿಂದ ದ್ರೌಪದಿ ಮುರ್ಮು ಅನಿರೀಕ್ಷಿತ ಮತವನ್ನು ಗೆದ್ದಿದ್ದಾರೆ. ಆಡಳಿತಾರೂಢ ಎಡ ನೇತೃತ್ವದ ಸಮ್ಮಿಶ್ರ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಎರಡೂ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ಘೋಷಿಸಿದ್ದವು.ಕೇರಳದ ಮರ್ಮು ಅವರಿಗೆ ನೀಡಲಾದ ಏಕೈಕ ಮತಕ್ಕೆ ಬಿಜೆಪಿಯು ಇದು ರಾಜ್ಯದ ಉಳಿದ 139 ಮತಗಳಿಗಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದು ಹೇಳಿದೆ.
ಅಸ್ಸಾಂನಲ್ಲಿ 25 ವಿರೋಧ ಪಕ್ಷದ ಶಾಸಕರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದರು. 126 ಸದಸ್ಯರ ಅಸ್ಸಾಂ ಅಸೆಂಬ್ಲಿಯಲ್ಲಿ ಎನ್‌ಡಿಎ ಬಲ 79ಕ್ಕೆ ಹೋಲಿಸಿದರೆ ದ್ರೌಪದಿ ಮುರ್ಮು ಅವರು 104 ಮತಗಳನ್ನು ಪಡೆದಿದ್ದಾರೆ. ಅಂದರೆ ಹೆಚ್ಚುವರಿಯಾಗಿ 25 ಮತಗಳನ್ನು ಪ್ರತಿಪಕ್ಷಗಳ ಶಾಸಕರು ನೀಡಿದ್ದಾರೆ. ಅಲ್ಲದೆ 2 ಮತದಾನಕ್ಕೆ ಗೈರುಹಾಜರಾಗಿದ್ದಾರೆ. ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಲ್ಲಿ ತಮ್ಮ ನಂಬಿಕೆ ಇಟ್ಟು ಈ ಐತಿಹಾಸಿಕ ಕ್ಷಣಕ್ಕೆ ಪೂರ್ಣ ಹೃದಯದಿಂದ ಸಹಕರಿಸಿದ್ದಕ್ಕಾಗಿ ಅಸ್ಸಾಂನ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಎರಡೂ ಸ್ಥಾನಗಳನ್ನು ಗೆದ್ದಾಗಲೂ ಇದೇ ರೀತಿಯ ಅಡ್ಡ ಮತದಾನ ನಡೆದಿತ್ತು. ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಎರಡೂ ಪರಸ್ಪರ ಅಡ್ಡ ಮತದಾನದ ಆರೋಪವನ್ನು ಮಾಡಿಕೊಂಡಿವೆ.
ಮಧ್ಯಪ್ರದೇಶದಲ್ಲಿ ದ್ರೌಪದಿ ಮುರ್ಮು 16 ಹೆಚ್ಚುವರಿ ಮತಗಳನ್ನು ಗಳಿಸಿದರು; ಅವರು 146 ಮತ್ತು ಯಶವಂತ್ ಸಿನ್ಹಾ, 79 ಮತಗಳನ್ನು ಪಡೆದರು.
ದ್ರೌಪದಿ ಮುರ್ಮು ಬಿಜೆಪಿ ಮತಗಳಿಗಿಂತ ಹೆಚ್ಚು ಪಡೆದಿದ್ದಾರೆ. ಅವರ ಆತ್ಮಸಾಕ್ಷಿಯನ್ನು ಆಲಿಸಿ ನಮ್ಮ ಅಭ್ಯರ್ಥಿಗೆ ಮತ ಹಾಕಿದ ಇತರ ಪಕ್ಷದ ಶಾಸಕರಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಗ್ ಚೌಹಾಣ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 69 ಶಾಸಕರನ್ನು ಹೊಂದಿದೆ ಆದರೆ ದ್ರೌಪದಿ ಮುರ್ಮು 71 ಮತಗಳನ್ನು ಗಳಿಸಿದ್ದಾರೆ. ಯಶವಂತ್ ಸಿನ್ಹಾ ಅವರ ತವರು ರಾಜ್ಯ ಜಾರ್ಖಂಡ್‌ನಲ್ಲಿಯೂ ಸಹ ಅವರಿಗೆ ಕಡಿಮೆ ಮತಗಳು ಬಂದವು. ಅಲ್ಲಿ 81 ಶಾಸಕರಲ್ಲಿ ಒಂಬತ್ತು ಮಾತ್ರ ಅವರನ್ನು ಬೆಂಬಲಿಸಿದರು.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವಿಶ್ವಾಸ ಮತದ ಸಂದರ್ಭದಲ್ಲಿ 164 ಮತಗಳನ್ನು ಗಳಿಸಿದ್ದರು – ಅದು ಎನ್‌ಡಿಎ ಮತಗಳ ಸಂಖ್ಯೆಯಾಗಿತ್ತು. ಆದರೆ ಮಹಾರಾಷ್ಟ್ರದಿಂದ 181 ಶಾಸಕರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ. ಅಂದರೆ ಎನ್‌ಡಿಗೆ ಇದ್ದ ಮತಗಳಿಗಿಂತ ಹೆಚ್ಚುವರಿಯಾಗಿ 17 ಮತಗಳು ಮುರ್ಮು ಅವರಿಗೆ ಬಿದ್ದಿದೆ.
ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ನ ಕೆಲವು ಶಾಸಕರು ಮೇಘಾಲಯದಲ್ಲಿ ಅಡ್ಡ ಮತದಾನ ಮಾಡಿದರೆ, ಮಣಿಪುರದಲ್ಲಿ ಕಾಂಗ್ರೆಸ್ ಶಾಸಕರು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದರು.ಬಿಹಾರ ಮತ್ತು ಛತ್ತೀಸ್‌ಗಢದ ತಲಾ ಆರು, ಗೋವಾದ ನಾಲ್ವರು ಮತ್ತು ಗುಜರಾತ್‌ನ 10 ಪ್ರತಿಪಕ್ಷಗಳ ಶಾಸಕರು ಕೂಡ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿರಬಹುದು.
ಯಶವಂತ್ ಸಿನ್ಹಾ ಅವರು ಆಂಧ್ರಪ್ರದೇಶ, ಸಿಕ್ಕಿಂ ಮತ್ತು ನಾಗಾಲ್ಯಾಂಡ್‌ನಲ್ಲಿ ಒಂದೇ ಒಂದು ಮತವನ್ನು ಗಳಿಸಲಿಲ್ಲ.
ಗುರುವಾರ 10 ಗಂಟೆಗೂ ಹೆಚ್ಚು ಕಾಲ ನಡೆದ ಮತ ಎಣಿಕೆಯ ನಂತರ ದ್ರೌಪದಿ ಮುರ್ಮು ಅವರನ್ನು ವಿಜಯಿ ಎಂದು ಘೋಷಿಸಲಾಯಿತು. ಯಶವಂತ್ ಸಿನ್ಹಾ ಅವರ 1,877 ಗೆ ಹೋಲಿಸಿದರೆ ದ್ರೌಪದಿ ಮುರ್ಮು 2,824 ಮೊದಲ ಪ್ರಾಶಸ್ತ್ಯದ ಶಾಸಕರ ಮತಗಳನ್ನು ಗಳಿಸಿದರು ಅಂದರೆ ಒಟ್ಟು ಮತಗಳ ಮೌಲ್ಯದ ಲೆಕ್ಕಾಚಾರದಲ್ಲಿ ಯಶವಂತ್ ಸಿನ್ಹಾ ಅವರ 3,80,177 ಮತಗಳಿಗೆ ಹೋಲಿಸಿದರೆ ಮುರ್ಮು ಅವರು ಪಡೆದ ಮತಗಳ ಮೌಲ್ಯ 6,76,803 ಆಗಿದೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement