ಚೆಸ್‌ ಟೂರ್ನಮೆಂಟ್ ವೇಳೆ 7 ವರ್ಷದ ಬಾಲಕನ ಬೆರಳನ್ನೇ ಮುರಿದ ಚೆಸ್ ಆಡುವ ರೋಬೋಟ್ | ವೀಕ್ಷಿಸಿ

ರಷ್ಯಾದ ಮಾಸ್ಕೋದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಚೆಸ್ ಆಡುತ್ತಿದ್ದ ರೋಬೋಟ್‌ನಿಂದ ಏಳು ವರ್ಷದ ಬಾಲಕನೊಬ್ಬನ ಬೆರಳು ಮುರಿದಿದೆ. ಮಾಸ್ಕೋ ಚೆಸ್ ಓಪನ್ ಪಂದ್ಯಾವಳಿಯಲ್ಲಿ ಜುಲೈ 19 ರಂದು ಈ ಘಟನೆ ನಡೆದಿದೆ.
ನ್ಯೂಸ್‌ವೀಕ್‌ನ ಪ್ರಕಾರ, ರೋಬೋಟ್‌ ಯಂತ್ರವು ತನ್ನ ಆಟ ಆಡಲು ಬೇಕಾದ ಅಗತ್ಯ ಸಮಯಕ್ಕಾಗಿ ಕಾಯದೆ ಮಗು ವೇಗವಾಗಿ ಚೆಸ್‌ ಆಡಲು ಹೋದಾಗ ರೋಬೋಟ್ ಹುಡುಗನ ಬೆರಳನ್ನು ಮುರಿದಿದೆ ಎಂದು ರಷ್ಯಾದ ಚೆಸ್ ಫೆಡರೇಶನ್‌ನ ಉಪಾಧ್ಯಕ್ಷ ಸೆರ್ಗೆ ಸ್ಮ್ಯಾಗಿನ್ ತಿಳಿಸಿದ್ದಾರೆ.
ಸ್ಥಳದ ಒಳಗಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರೋಬೋಟ್ ತನ್ನದೇ ಆದ ಚೆಸ್‌ ಮೂವ್‌ ಮುಗಿಸುವ ಮೊದಲು ಮಗು ತನ್ನ ಆಟ ಮುಂದುವರಿಸಲು ಮುಂದಾಗಿದ್ದನ್ನು ವೀಡಿಯೊ ತೋರಿಸುತ್ತದೆ. ಸ್ವಲ್ಪ ಸಮಯದ ನಂತರ, ಹುಡುಗ ತನ್ನ ಬೆರಳು ರೋಬೋಟ್‌ನ ಕೈಯಲ್ಲಿ ಸಿಕ್ಕಿಹಾಕಿಕೊಂಡ ಬೆರಳನ್ನು ಅದರಿಂದ ಕೈಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುವುದು ಕಂಡುಬರುತ್ತದೆ.. ನಂತರ ವೀಕ್ಷಕರು ಮಧ್ಯಪ್ರವೇಶಿಸಿ ಮಗುವನ್ನು ರೋಬೋಟ್ ತೋಳಿನ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಾರೆ.
ಔಟ್ಲೆಟ್ ಪ್ರಕಾರ, ಏಳು ವರ್ಷದ ಬಾಲಕನನ್ನು ಕ್ರಿಸ್ಟೋಫರ್ ಎಂದು ಗುರುತಿಸಲಾಗಿದೆ. ಅವರು ಒಂಬತ್ತು ವರ್ಷ ವಯಸ್ಸಿನ ಒಳಗಿನ ಮಾಸ್ಕೋದ 30 ಮುಂಚೂಣಿಯ ಚೆಸ್ ಆಟಗಾರರಲ್ಲಿ ಒಬ್ಬರು. ಘಟನೆಯ ನಂತರ, ಅವರ ಬೆರಳು ಮುರಿತವಾಗಿರುವುದು ಕಂಡುಬಂದಿದೆ.

ಏಳು ವರ್ಷದ ಬಾಲಕ ಸ್ಪಷ್ಟವಾಗಿ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಾನೆ ಮತ್ತು ರೋಬೋಟ್‌ನ ಸರದಿ ಬಂದಾಗ ಅದು ತನ್ನ ಮೂವ್‌ ಇಡಲು ಪ್ರಯತ್ನಿಸಿದೆ ಎಂದು ಸ್ಮಗಿನ್ ವಿವರಿಸಿದರು. “ಇದು ಅತ್ಯಂತ ಅಪರೂಪದ ಪ್ರಕರಣ, ನನ್ನ ನೆನಪಿನಲ್ಲಿ ಮೊದಲನೆಯದು” ಎಂದು ಅವರು ಹೇಳಿದರು. ಹುಡುಗನಿಗೆ ” ಗಂಭೀರ ಗಾಯವಾಗಿಲ್ಲ” ಎಂದು ವಿವರಿಸಿದರು ಮತ್ತು ಬಾಲಕ ತನ್ನ ಬೆರಳಿಗೆ ಬ್ಯಾಂಡೇಜ್‌ ಹಾಕಿ ಆಟವಾಡುವುದನ್ನು ಮುಂದುವರಿಸಲು, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲು ಮತ್ತು ದಾಖಲೆಗಳಿಗೆ ಸಹಿ ಹಾಕಲು ಸಾಧ್ಯವಾಯಿತು ಎಂದು ಹೇಳಿದರು.

ಹುಡುಗ ಚೆನ್ನಾಗಿಯೇ ಇದ್ದಾನೆ. ಆತ ವೇಗವಾಗಿ ಗುಣವಾಗಲು ಬೆರಳಿಗೆ ಪ್ಲಾಸ್ಟರ್ ಹಾಕಲಾಗಿದೆ. ರೋಬೋಟ್‌ನೊಂದಿಗೆ ಆಟವಾಡುವಾಗ ಕೆಲವು ಸುರಕ್ಷತಾ ನಿಯಮಗಳಿವೆ ಮತ್ತು ಮಗು ಅವುಗಳನ್ನು ಉಲ್ಲಂಘಿಸಿದೆ. ಮತ್ತು, ರೋಬೋಟ್‌ ತನ್ನ ಮೂವ್‌ ಮಾಡುವಾಗ ಕಾಯಬೇಕಾಗಿತ್ತು ಎಂದು ಗಮನಿಸಲಿಲ್ಲ. ಮತ್ತು, ರೋಬೋಟ್‌ ತನ್ನ ಮೂವ್‌ ಮಾಡುವಾಗ ಕಾಯಬೇಕಾಗಿತ್ತು ಎಂದು ಗಮನಿಸಲಿಲ್ಲ. ಈತ ತಕ್ಷಣವೇ ತನ್ನ ಮೂವ್‌ ಮಾಡಲು ಹೋಗಿದ್ದಾನೆ. ಇದರಿಂದ ರೋಬೋಟ್‌ ಆತನ ಬೆರಳನ್ನು ಹಿಡಿದುಕೊಂಡಿದೆ. ಇದು ಅತ್ಯಂತ ಅಪರೂಪದ ಪ್ರಕರಣವಾಗಿದೆ ಎಂದು ಸ್ಮ್ಯಾಗಿನ್ ಹೇಳಿದರು ಎಂದು ನ್ಯೂಸ್‌ವೀಕ್‌ನ ವರದಿ ಹೇಳಿದೆ.
ಏತನ್ಮಧ್ಯೆ, ರಷ್ಯಾದ ಮಾಧ್ಯಮ ಔಟ್ಲೆಟ್, ಆರ್ಟಿ ಪ್ರಕಾರ, ಮಗುವಿನ ಪೋಷಕರು ಮಾಸ್ಕೋ ಪ್ರಾಸಿಕ್ಯೂಟರ್ ಕಚೇರಿಯನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ. ಆದರೆ ಚೆಸ್ ಫೆಡರೇಶನ್ ಇದನ್ನು ಬಗೆಹರಿಸಿ ಯಾವುದೇ ರೀತಿಯ ಸಹಾಯಕ್ಕೆ ಪ್ರಯತ್ನಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement