ಈ ವಾರ $6 ಶತಕೋಟಿ ಡಾಲರ್‌ಗಳಿಗೂ (4,78,77,99,00,000 ರೂ.ಗಳು) ಹೆಚ್ಚು ಮೌಲ್ಯದ ಷೇರುಗಳನ್ನು ತಮ್ಮ ಬಿಲ್ ಗೇಟ್ಸ್-ಮಿಲಿಂಡಾ ಚಾರಿಟೇಬಲ್ ಫೌಂಡೇಶನ್‌ಗೆ ನೀಡಿದ್ದಾರೆ. ಆದರೂ ಸಹ ಬ್ಲೂಮ್‌ಬರ್ಗ್ ಮತ್ತು ಫೋರ್ಬ್ಸ್ ಶ್ರೇಯಾಂಕಗಳ ಪ್ರಕಾರ ಬಿಲ್ ಗೇಟ್ಸ್ ಇನ್ನೂ ವಿಶ್ವದ ಐದನೇ-ಶ್ರೀಮಂತ ವ್ಯಕ್ತಿಯಾಗಿದ್ದಾರೆ.ಆದರೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಈ ತಿಂಗಳ ಆರಂಭದಲ್ಲಿ, ತನ್ನ ಎಲ್ಲಾ ಸಂಪತ್ತನ್ನು ತನ್ನ ಫೌಂಡೇಶನ್‌ಗೆ ನೀಡುವುದಾಗಿ ವಾಗ್ದಾನ ಮಾಡಿ ಅಂತಿಮವಾಗಿ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ.
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಈ ತಿಂಗಳ ಆರಂಭದಲ್ಲಿ, ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಿಂದ ಹೊರಗುಳಿಯಲು ತನ್ನ ಎಲ್ಲಾ ಸಂಪತ್ತನ್ನ ತನ್ನ ಲೋಕೋಪಕಾರಿ ಪ್ರತಿಷ್ಠಾನಕ್ಕೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಈಗ ಕೆಲವೇ ದಿನಗಳ ಹಿಂದೆ ಬಿಲ್ ಗೇಟ್ಸ್, ತಮ್ಮ ಚಾರಿಟಬಲ್ ಫೌಂಡೇಶನ್‌ಗೆ 6 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ಷೇರುಗಳನ್ನ ನೀಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಅಮೆರಿಕದ ಉದ್ಯಮಿ ಕೆನಡಿಯನ್ ನ್ಯಾಷನಲ್ ರೈಲ್ವೆ ಕಂಪನಿಯಲ್ಲಿ ಸುಮಾರು 5.2 ಬಿಲಿಯನ್ ಡಾಲರ್ ಮೌಲ್ಯದ ಸ್ಟಾಕ್ʼನ್ನ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ ದಾನ ಮಾಡಿದ್ದಾರೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಡೀರ್ & ಕಂಪನಿಯ 995 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನ ಗುರುವಾರ ಫೌಂಡೇಶನ್‌ಗೆ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಬ್ಲೂಮ್ಬರ್ಗ್ ಮತ್ತು ಫೋರ್ಬ್ಸ್ ಶ್ರೇಯಾಂಕಗಳ ಪ್ರಕಾರ, ಗೇಟ್ಸ್ ಅವ್ರ ಗಮನಾರ್ಹ ದೇಣಿಗೆಗಳ ಹೊರತಾಗಿಯೂ, ಇನ್ನೂ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಬ್ಲೂಮ್ಬರ್ಗ್ ಪ್ರಕಾರ, ಅವರು ಎಲೋನ್ ಮಸ್ಕ್, ಜೆಫ್ ಬೆಜೋಸ್, ಬರ್ನಾರ್ಡ್ ಅರ್ನಾಲ್ಟ್ ಮತ್ತು ಭಾರತದ ಗೌತಮ್ ಅದಾನಿ ಅವರ ನಂತರ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ವಿಚ್ಛೇದನ ಪಡೆದ ಗೇಟ್ಸ್ ಮತ್ತು ಮೆಲಿಂಡಾ ತಮ್ಮ ಲೋಕೋಪಕಾರಿ ಚಾರಿಟೇಬಲ್ ಸಂಸ್ಥೆಯ ಪ್ರಮುಖ ಸದಸ್ಯರಾಗಿ ಮುಂದುವರಿದಿದ್ದಾರೆ. ಈ ತಿಂಗಳ ಆರಂಭದಲ್ಲಿ ಪ್ರತಿಷ್ಠಾನವು 2026ರ ವೇಳೆಗೆ ತನ್ನ ವಾರ್ಷಿಕ ದೇಣಿಗೆಯನ್ನ 9 ಶತಕೋಟಿ ಡಾಲರ್ʼಗೆ ಹೆಚ್ಚಿಸುವ ಬದ್ಧತೆಯನ್ನ ಘೋಷಿಸಿತ್ತು.
.


ನಿಮ್ಮ ಕಾಮೆಂಟ್ ಬರೆಯಿರಿ