ಬೆಳಗಾವಿ ಪೊಲೀಸರ ಕಾರ್ಯಾಚರಣೆ ; ಅಕ್ರಮ ಪಡಿತರ ಅಕ್ಕಿ ವಶ

ಬೆಳಗಾವಿ : ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ಪೊಲೀಸರು ದಾಳಿ ನಡೆಸಿ ಹುಂಚಾನಟ್ಟಿ ಮತ್ತು ಪೀರನವಾಡಿ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 31 ಟನ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಇದರ ಮಾರುಕಟ್ಟೆ ಮೌಲ್ಯ 7.21 ಲಕ್ಷ ರೂ.ಗಳು ಅಂದಾಜಿಸಲಾಗಿದೆ. ಶ್ರೀನಿವಾಸ ಹಾಂಡ ನೇತೃತ್ವದಲ್ಲಿ ಜೆ.ಬಿ. ಬಾಗೋಜಿಕೊಪ್ಪ (ಆಹಾರ ನಿರೀಕ್ಷಕರು) ಸೇರಿದಂತೆ ಇತರ ಸಿಬ್ಬಂದಿ ದಾಳಿ ನಡೆಸಿ ಪಡಿತರ ಅಕ್ಕಿ ವಶ ಪಡಿಸಿಕೊಂಡಿದ್ದಾರೆ. ಹುಂಚಾನಟ್ಟಿ ಶಿಕ್ಷಕರ ಕಾಲೊನಿಯ ವಾಸಿಮ್ ಇಮಾಮ್ ಸಾಬ್ ಮುಜಾವರ್ ಮತ್ತು ಪೀರನವಾಡಿ ಜಾಂಬೋಟಿ ರಸ್ತೆಯ ಸಂಜಯ್ ಸುಬ್ಬರಾವ್ ಭೋಸ್ಲೆ ಅವರನ್ನು ಈ ಪ್ರಕರಣದ ಸಂಬಂಧ ಬಂಧಿಸಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ ಸಿದ್ದರಾಮಯ್ಯ, ಡಿಸಿಎಂಗೆ ಡಿಕೆಶಿಗೆ ಸಮನ್ಸ್‌ ಮರು ಜಾರಿ

ನಿಮ್ಮ ಕಾಮೆಂಟ್ ಬರೆಯಿರಿ

advertisement