ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸ್ವಂತ ವಿಮಾನ ನಿರ್ಮಿಸಿದ ಕೇರಳದ ವ್ಯಕ್ತಿ…! ಕುಟುಂಬದೊಟ್ಟಿಗೆ ಯುರೋಪ್‌ ಟೂರ್

ಲಂಡನ್: ಕೋವಿಡ್ -19 ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮದಿಂದ ವಾಯುಯಾನ ಉದ್ಯಮವು ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ, ಕೇರಳದ ವ್ಯಕ್ತಿಯೊಬ್ಬರು ತಮ್ಮ ಕುಟುಂಬದೊಂದಿಗೆ ತಾವೇ ನಿರ್ಮಿಸಿದ ವಿಮಾನದಲ್ಲಿ ಯುರೋಪ್ ಮೂಲಕ ಪ್ರಯಾಣಿಸುತ್ತಿದ್ದಾರೆ.
ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಈಗ ಲಂಡನ್‌ನಲ್ಲಿ ನೆಲೆಸಿರುವ ಅಶೋಕ್ ಅಲಿಸೆರಿಲ್ ಥಾಮರಕ್ಷಣ್‌ ಅವರು ಈ ವಿಮಾನವನ್ನು ನಿರ್ಮಿಸಿದ್ದಾರೆ.
ಕೇರಳದ ಅಲಪ್ಪುಳ ಮೂಲದ ಅಶೋಕ ಥಾಮರಕ್ಷನ್‌ ಅವರು ನಾಲ್ಕು ಆಸನಗಳ ವಿಮಾನವನ್ನು ನಿರ್ಮಿಸಲು ಸುಮಾರು 18 ತಿಂಗಳುಗಳನ್ನು ತೆಗೆದುಕೊಂಡರು. ನಾಲ್ಕು ಆಸನಗಳ ವಿಮಾನ ಮಾದರಿ “ಸ್ಲಿಂಗ್ ಟಿಎಸ್ಐ” ಗೆ “ಜಿ-ದಿಯಾ” ಎಂದು ಹೆಸರಿಸಲಾಗಿದೆ, ದಿಯಾ ಅವರ ಕಿರಿಯ ಮಗಳ ಹೆಸರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಥಾಮರಕ್ಷನ್ ಅವರು ತಮ್ಮ ಸ್ನಾತಕೋತ್ತರ ಪದವಿ ಪಡೆಯಲು 2006 ರಲ್ಲಿ ಬ್ರಿಟನ್‌ಗೆ ತೆರಳಿದರು ಮತ್ತು ಅವರು ಪ್ರಸ್ತುತ ಫೋರ್ಡ್ ಮೋಟಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಶೋಕ್ ಅವರು ಮಾಜಿ ಶಾಸಕ ಎ ವಿ ಥಾಮರಕ್ಷನ್‌ ಅವರ ಪುತ್ರ. ಅವರು ಪೈಲಟ್ ಪರವಾನಗಿಯನ್ನು ಹೊಂದಿದ್ದಾರೆ. ಅವರು ತಾವೇ ನಿರ್ಮಿಸಿದ ನಾಲ್ಕು ಆಸನಗಳ ವಿಮಾನದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಇದುವರೆಗೆ ಜರ್ಮನಿ, ಆಸ್ಟ್ರಿಯಾ ಮತ್ತು ಜೆಕ್ ರಿಪಬ್ಲಿಕ್‌ಗೆ ಭೇಟಿ ನೀಡಿದ್ದಾರೆ.
ವಿಮಾನವನ್ನು ನಿರ್ಮಿಸುವ ಕಲ್ಪನೆಯನ್ನು ಅವರು ಹೇಗೆ ಸಾಕಾಋಗೊಳಿಸಿದರು ಎಂಬುದರ ಕುರಿತು ಮಾತನಾಡಿದ ಅಶೋಕ್‌ ಅವರು, “ಆರಂಭದಲ್ಲಿ, ನಾನು 2018 ರಲ್ಲಿ ನನ್ನ ಪೈಲಟ್ ಪರವಾನಗಿಯನ್ನು ಪಡೆದ ನಂತರ ಪ್ರಯಾಣಕ್ಕಾಗಿ ಎರಡು ಆಸನಗಳ ಸಣ್ಣ ವಿಮಾನವನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದೆ. ಆದರೆ ನನ್ನ ಕುಟುಂಬವು ನನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಒಳಗೊಂಡಿದೆ. ಹೀಗಾಗಿ ನನಗೆ ನಾಲ್ಕು ಆಸನಗಳ ವಿಮಾನದ ಅಗತ್ಯವಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

ಸರಿಯಾದ ನಾಲ್ಕು ಆಸನಗಳ ವಿಮಾನವನ್ನು ತಯಾರಿ ಹೇಗೆ ಎಂಬುದರ ಬಗ್ಗೆ ಕಂಡುಕೊಳ್ಳಲು ಲಾಕ್‌ಡೌನ್ ಸಮಯ ಅನುಕೂಲವಾಯಿತು. ಇದರ ಬಗ್ಗೆ ವಿಷಯ ತಿಳಿದುಕೊಳ್ಳಲು, ವಿಮಾನ ನಿರ್ಮಾಣದ ಬಗ್ಗೆ ಸಂಶೀಧಿಸಿ, ಸ್ವದೇಶಿ ನಿರ್ಮಿತ ವಿಮಾನಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿತು ಎಂದು ಅವರು ಹೇಳುತ್ತಾರೆ.
ಸ್ವಂತ ವಿಮಾನ ನಿರ್ಮಿಸಲು, 38 ವರ್ಷ ವಯಸ್ಸಿನ ಅಶೋಕ ಜೋಹಾನ್ಸ್‌ಬರ್ಗ್ ಮೂಲದ ಕಂಪನಿ ಸ್ಲಿಂಗ್ ಏರ್‌ಕ್ರಾಫ್ಟ್‌ನ ಕಾರ್ಖಾನೆಗೆ ಭೇಟಿ ನೀಡಿದರು, ಅವರು 2018 ರಲ್ಲಿ ಸ್ಲಿಂಗ್ ಟಿಎಸ್‌ಐ ಎಂಬ ಹೊಸ ವಿಮಾನವನ್ನು ಪ್ರಾರಂಭಿಸಿದ ಕುರಿತು ತಿಳಿದುಕೊಂಡರು. ಕಾರ್ಖಾನೆಯ ಭೇಟಿಯ ನಂತರ, ಅಶೋಕ ಥಾಮರಕ್ಷನ್ ಸ್ವಂತ ವಿಮಾನ ನಿರ್ಮಿಸಲು ಕಿಟ್‌ಗೆ ಆದೇಶಿಸಿದರು.
ಸಾಂಕ್ರಾಮಿಕ-ಪ್ರೇರಿತ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಸಮಯ ಮತ್ತು ಈ ಅವಧಿಯಲ್ಲಿ ಉಳಿಸಿದ ಹಣದಿಂದಾಗಿ, ಅವರು ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದರು. ವಿಮಾನ ನಿರ್ಮಾಣಕ್ಕೆ ಒಟ್ಟು ₹ 1.8 ಕೋಟಿ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement