ದಂಪತಿಗಳಿಗಾಗಿ ಇದ್ದ ‘ಟ್ಯೂನ್ಡ್’ ಆ್ಯಪ್​ಗೆ ವಿದಾಯ ಹೇಳಲಿರುವ ಫೇಸ್​ಬುಕ್

ನವದೆಹಲಿ: ಪ್ರಾರಂಭವಾದ ಎರಡು ವರ್ಷಗಳ ನಂತರ, ಟೆಕ್ ದೈತ್ಯ ಮೆಟಾ ದಂಪತಿಗಳಿಗಾಗಿ `ಟ್ಯೂನ್ಡ್` ಎಂಬ ಸಾಮಾಜಿಕ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಬಳಕೆದಾರರು ಕಳೆದ ವಾರ ಶೀಘ್ರವೇ ಸ್ಥಗಿತಗೊಳಿಸುವ ಕುರಿತು ಅಧಿಸೂಚನೆಯನ್ನು ಸ್ವೀಕರಿಸಲು ಪ್ರಾರಂಭಿಸಿದರು, ಸೆಪ್ಟೆಂಬರ್ 19 ರ ಮೊದಲು ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಲು ಸಲಹೆ ನೀಡಲಾಗಿದೆ, ಅಪ್ಲಿಕೇಶನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಟೆಕ್‌ರೆಂಚ್‌ ವರದಿ ಮಾಡಿದೆ. ಟ್ಯೂನ್ಡ್ ಎಂಬುದು Meta’s New Product Experimentation (NPE) ತಂಡದ ಅಡಿಯಲ್ಲಿ ಒಂದು ಯೋಜನೆಯಾಗಿದೆ, ಇದು ಆರಂಭದಲ್ಲಿ ಗ್ರಾಹಕ-ಮುಖಿ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ರೂಪುಗೊಂಡಿತು,

ಅದು ಮೆಟಾಗೆ ಹೊಸ ವೈಶಿಷ್ಟ್ಯಗಳನ್ನು ಪರೀಕ್ಷಿಸಲು ಮತ್ತು ಜನರ ಪ್ರತಿಕ್ರಿಯೆಗಳನ್ನು ಅಳೆಯಲು ಅನುವು ಮಾಡಿಕೊಡುತ್ತದೆ.
ಸಾಂಕ್ರಾಮಿಕ ರೋಗದ ಆರಂಭಿಕ ತಿಂಗಳುಗಳಲ್ಲಿ ಇದನ್ನು ಪ್ರಾರಂಭಿಸಲಾಯಿತು, ಕಪಲ್ಸ್ ಆ್ಯಪ್ ಎಂದೇ ಜನಪ್ರಿಯವಾಗಿದ್ದ ಟ್ಯೂನ್ಡ್​ ಅಪ್ಲಿಕೇಶನ್ ಮೂಲಕ ದಂಪತಿಗಳು ದೂರವಿರುವಾಗಲೂ ಸಂಪರ್ಕದಲ್ಲಿರಲು ಇದು ನೆರವಾಗುತ್ತಿತ್ತು. ಅಲ್ಲದೆ ಇದರಲ್ಲಿ ಕಪಲ್ಸ್ ಚಾಟಿಂಗ್​, ಫೋಟೊ ಶೇರಿಂಗ್, ಮ್ಯೂಸಿಕ್ ಹಂಚಿಕೊಳ್ಳುವ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿತ್ತು. ಅಂದರೆ ಇಲ್ಲಿ ಕಪಲ್ಸ್​ಗಳು ತಮ್ಮ ವಿಚಾರಗಳನ್ನು ಖಾಸಗಿಯಾಗಿ ಹಂಚಿಕೊಳ್ಳಬಹುದಿತ್ತು. ಈ ಮೂಲಕ ಜೋಡಿಗಳು ಪರಸ್ಪರ ತಿಳಿದುಕೊಳ್ಳಲು, ಹೊಂದಾಣಿಕೆಯಿಂದ ಇರಲು ಇದು ಸಹಾಯ ಮಾಡಲಿದೆ ಎಂದು ಹೇಳಲಾಗಿತ್ತು.
2020 ರಿಂದ ಆ್ಯಪ್​ ಚಾಲ್ತಿಯಲ್ಲಿದ್ದರೂ ಅತೀ ಹೆಚ್ಚು ಇಂಟರ್​ನೆಟ್​ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಈ ಅಪ್ಲಿಕೇಶನ್ ಅಷ್ಟೊಂದು ಜನಪ್ರಿಯತೆ ಪಡೆಯಲಿಲ್ಲ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

ಇದೀಗ ಈ ಅಪ್ಲಿಕೇಶನ್​ ಅನ್ನು ಸ್ಥಗಿತಗೊಳಿಸಲು ಮೆಟಾ ಕಂಪೆನಿ ಮುಂದಾಗಿದ್ದು, ಹೀಗಾಗಿ ಟ್ಯೂನ್ಡ್ ಬಳಕೆದಾರರಿಗೆ ಸೆಪ್ಟೆಂಬರ್ 19 ರ ಮೊದಲು ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಹೀಗಾಗಿ ಸೆ.19 ರ ಬಳಿಕ ಟ್ಯೂನ್ಡ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ ಎಂದು ದಿ ವರ್ಜ್​ ವರದಿ ಮಾಡಿದೆ.
ಟೆಕ್​ಕ್ರಂಚ್ ಸೆನ್ಸಾರ್ ಟವರ್ ಡೇಟಾ ಪ್ರಕಾರ, ಟ್ಯೂನ್ಡ್ ಆ್ಯಪ್ ಅನ್ನು Android ಮತ್ತು iOS ನಲ್ಲಿ ಸುಮಾರು 9,00,000 ಜನರು ಡೌನ್‌ಲೋಡ್ ಮಾಡಿದ್ದಾರೆ. ವಿದೇಶಗಳಲ್ಲಿ ಈ ಆ್ಯಪ್ ಜನಪ್ರಿಯತೆ ಇತ್ತು. ಆದಾಗ್ಯೂ ಇಂತಹದೊಂದು ನಿರ್ಧಾರಕ್ಕೆ ಕಾರಣವೇನು ಎಂಬುದಕ್ಕೆ ಮೆಟಾ ಕಂಪೆನಿ ಸ್ಪಷ್ಟನೆ ನೀಡಿಲ್ಲ. ಆದರೆ ಈಗ ಈ ಟ್ಯೂನ್ಡ್ ಆ್ಯಪ್ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿಯ ಮೂಲಕ ಈ ಆ್ಯಪ್ ವಿಶ್ವದಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.

.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement