ಸನ್ಯಾಸಿಯೊಬ್ಬರು ಕಡಿದಾದ ಪರ್ವತವನ್ನು ಏರುತ್ತಿರುವ ಹಳೆಯ ವೀಡಿಯೊ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಆಶ್ಚರ್ಯವೇನಿದೆ ಎಂದು ಅನ್ನಿಸಬಹುದು. ಆದರೆ ಸನ್ಯಾಸಿಯು ಯಾವುದೇ ಸುರಕ್ಷತಾ ಸರಂಜಾಮು ಇಲ್ಲದೆ ಕಡಿದಾದ ಪರ್ವತವನ್ನು ಏರುವುದನ್ನು ನೋಡಬಹುದು ಮತ್ತು ಸಲೀಸಾಗಿ ಹಾಗೂ ಸಹಜವಾಗಿ ಕಡಿದಾದ ದಾರಿಯಲ್ಲಿ ಸನ್ಯಾಸಿ ಸಾಗುತ್ತಾನೆ. ಈ ವೀಡಿಯೊವನ್ನು ತನ್ಸು ಯೆಗೆನ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಇದು ಇಂಟರ್ನೆಟ್ ಅನ್ನುಬೆರಗಾಗಿಸಿದೆ.
ಮಹಿಳೆಯೊಬ್ಬರು ಏಕಕಾಲದಲ್ಲಿ ಸುರಕ್ಷತಾ ಸರಂಜಾಮುಗಳೊಂದಿಗೆ ಪರ್ವತವನ್ನು ಏರುತ್ತಿರುವುದನ್ನು ರೆಕಾರ್ಡ್ ಮಾಡಿರುವಂತೆ ಕಂಡುಬರುವ ವೀಡಿಯೊದಲ್ಲಿ ಸನ್ಯಾಸಿ ಕೆಲವೇ ಸೆಕೆಂಡುಗಳಲ್ಲಿ ಸಲೀಸಾಗಿ ಅದೇ ಪರ್ವತದ ಮೇಲಕ್ಕೆ ಹೋಗುವುದನ್ನು ತೋರಿಸುತ್ತದೆ. ಇದು ಕಡಿದಾದ ಪರ್ವತವಾಗಿದೆ. ಮಹಿಳೆ ತನ್ನ ದಾರಿಯನ್ನು ತುಳಿಯಲು ಹೆಣಗಾಡುತ್ತಿರುವಾಗ, ಯಾವುದೇ ಸಹಾಯವಿಲ್ಲದೆ ಪರ್ವತವನ್ನು ಸನ್ಯಾಸಿ ಅನಾಯಾಸವಾಗಿ ಏರುತ್ತಾನೆ.
ನೆಟಿಜನ್‌ಗಳು ಭರಪೂರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವು ಬಳಕೆದಾರರು ಧ್ಯಾನ ಮತ್ತು ಯೋಗವು ಪರ್ವತ ಏರುವುದನ್ನು ಸುಲಭವಾಗಿ ಮಾಡಲು ಸಹಾಯ ಮಾಡಿತು ಎಂದು ಹೇಳಿದ್ದಾರೆ. “ಇದು ಯೋಗ, ಧ್ಯಾನ ಮತ್ತು ಅಭ್ಯಾಸದ ಶಕ್ತಿ ಎಂದು ನಾನು ಭಾವಿಸುತ್ತೇನೆ” ಎಂದು ಬಳಕೆದಾರರು ಬರೆದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ