ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಉತ್ತರ ಪ್ರದೇಶಕ್ಕಿಂತ 5 ಹೆಜ್ಜೆ ಮುಂದೆ ಇರ್ತೇವೆ, ಅವಶ್ಯಕತೆ ಬಿದ್ರೆ ಎನ್‌ಕೌಂಟರ್‌ ಸಹ ಮಾಡಬಹುದು: ಸಚಿವ ಡಾ.ಅಶ್ವತ್ಥ ನಾರಾಯಣ

ಬೆಂಗಳೂರು : ಬಿಜೆಪಿ ಕಾರ್ಯಕರ್ತನ ಹತ್ಯೆಯ ಬಗ್ಗೆ ಆಕ್ರೋಶ ಭುಗಿಲೆದ್ದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಅಗತ್ಯಬಿದ್ದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾದರಿ ಬಳಸುವುದಾಗಿ ಹೇಳಿದ ಒಂದು ದಿನದ ನಂತರ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ರಾಜ್ಯ ಸರ್ಕಾರವು “ಉತ್ತರ ಪ್ರದೇಶಕ್ಕಿಂತ ಐದು ಹೆಜ್ಜೆ ಮುಂದೆ ಹೋಗ್ತೇವೆ. ಅವಶ್ಯಕತೆ ಬಿದ್ದರೆ ಬಂದರೆ ಆರೋಪಿಗಳನ್ನ ಗುರಿಯಾಗಿಸಿಕೊಂಡು ಎನ್ಕೌಂಟರ್‌ಗಳನ್ನ ನಡೆಸಬಹುದು ಎಂದು ಹೇಳಿದ್ದಾರೆ
ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಆದರೆ ಈ ತರಹದ ಘಟನೆಗಳು ಘಟನೆಗಳು ನಡೆಯಬಾರದು ಎಂಬುದು ನಮ್ಮ ಕಾರ್ಯಕರ್ತರು ಮತ್ತು ಜನರ ಆಶಯವಾಗಿದೆ. ಅವರ ಇಚ್ಛೆಯಂತೆ ತಪ್ಪಿತಸ್ಥರನ್ನು ಬಂಧಿಸಲಾಗುವುದು, ಸಂದರ್ಭ ಬಂದರೆ ಎನ್‌ಕೌಂಟರ್‌ಗಳನ್ನೂ ನಡೆಸಬಹುದು ಎಂದು ಅವರು ಹೇಳಿದರು.

ನಾವು ಉತ್ತರ ಪ್ರದೇಶಕ್ಕಿಂತ ಐದು ಹೆಜ್ಜೆ ಮುಂದೆ ಹೋಗುತ್ತೇವೆ. ನಾವು ಉತ್ತರ ಪ್ರದೇಶಕ್ಕಿಂತ ಉತ್ತಮ ಮಾದರಿಯನ್ನ ನೀಡುತ್ತೇವೆ. ಕರ್ನಾಟಕವು ಪ್ರಗತಿಪರ ರಾಜ್ಯ ಮತ್ತು ಮಾದರಿ ರಾಜ್ಯವಾಗಿದೆ, ನಾವು ಯಾರನ್ನೂ ಅನುಸರಿಸುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಪ್ರವೀಣ ನೆಟ್ಟಾರು ಅವರು ತಮ್ಮ ಕೋಳಿ ಅಂಗಡಿಯನ್ನ ಮುಚ್ಚುತ್ತಿದ್ದಾಗ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸಿದೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement