ಏಷ್ಯಾ ಕಪ್ ಟಿ-20 ವೇಳಾಪಟ್ಟಿ ಪ್ರಕಟ: ಆಗಸ್ಟ್ 27ರಿಂದ ಆರಂಭ, ಆಗಸ್ಟ್ 28ಕ್ಕೆ ಭಾರತ-ಪಾಕಿಸ್ತಾನದ ಪಂದ್ಯ

ದುಬೈ: ಏಷ್ಯಾ ಕಪ್ ಟಿ-20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಗಸ್ಟ್ 28ರಂದು ಪರಸ್ಪರ ಸೆಣಸಲಿವೆ ಎಂದು ಏಷಿಯನ್ ಕ್ರಿಕೆಟ್ ಮಂಡಳಿಯ(ಎಸಿಸಿ) ಅಧ್ಯಕ್ಷ ಜಯ್ ಶಾ ಪ್ರಕಟಿಸಿದ್ದಾರೆ.
ಏಷ್ಯಾ ಕಪ್‌ಗೆ ಆಯ್ಕೆ ಮಾಡಲಾಗುವ ಭಾರತ ತಂಡದಲ್ಲಿ ಯಾವುದೇ ಗಾಯದ ಸಮಸ್ಯೆ ಕಂಡುಬರದಿದ್ದರೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿಯೂ ಅದೇ ತಂಡ ಆಡಲಿದೆ ಎಂದು ಅವರು ಹೇಳಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಶಾ ಅವರು, ಶ್ರೀಲಂಕಾದಿಂದ ದುಬೈಗೆ ಸ್ಥಳಾಂತರಿಸಲ್ಪಟ್ಟ ಏಷ್ಯಾ ಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದರು.ಏಷ್ಯಾ ಕಪ್ ಕಾದಾಟವು ಆಗಸ್ಟ್ 27ರಿಂದ ಆರಂಭವಾಗಲಿದೆ. ಫೈನಲ್ ಸೆಪ್ಟೆಂಬರ್ 11ರಂದು ನಡೆಯಲಿದೆ. ಏಷ್ಯಾ ಕಪ್‌ನ 15ನೇ ಆವೃತ್ತಿಯು ಟಿ-20 ವಿಶ್ವಕಪ್‌ಗೆ ಒಂದೊಳ್ಳೆ ಪೂರ್ವ ತಯಾರಿಯಾಗಲಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
ಏಷ್ಯಾ ಕಪ್‌ ಸರಣಿಯ ಗ್ರೂಪ್-ಎಯಲ್ಲಿ ಭಾರತ, ಪಾಕಿಸ್ತಾನ, ಅರ್ಹತೆ ಪಡೆದ ತಂಡ (ಇನ್ನಷ್ಟೆ ನಿರ್ಧಾರವಾಗಬೇಕಿದೆ) ಮತ್ತು ಗ್ರೂಪ್ ಬಿದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳಿವೆ.

ಒಟ್ಟು 13 ಪಂದ್ಯಗಳು ನಡೆಯಲಿದ್ದು, 10 ಪಂದ್ಯಗಳು ದುಬೈನಲ್ಲಿ ಮತ್ತು ಉಳಿದ ಮೂರು ಪಂದ್ಯಗಳು ಶಾರ್ಜಾದಲ್ಲಿ ನಡೆಯಲಿವೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

ಪಂದ್ಯಾವಳಿ ವೇಳಾ ಪಟ್ಟಿ

ಆಗಸ್ಟ್ 27 : ಶ್ರೀಲಂಕಾ vs ಅಫ್ಘಾನಿಸ್ತಾನ (ದುಬೈ)
ಆಗಸ್ಟ್ 28 : ಭಾರತ vs ಪಾಕಿಸ್ತಾನ (ದುಬೈ)
ಆಗಸ್ಟ್ 30 : ಬಾಂಗ್ಲಾದೇಶ vs ಅಫ್ಘಾನಿಸ್ತಾನ (ಶಾರ್ಜಾ)
ಆಗಸ್ಟ್ 31: ಭಾರತ vs ಕ್ವಾಲಿಫೈಯರ್ (ದುಬೈ)
ಸೆಪ್ಟೆಂಬರ್ 1 : ಶ್ರೀಲಂಕಾ vs ಬಾಂಗ್ಲಾದೇಶ (ದುಬೈ)
ಸೆಪ್ಟೆಂಬರ್ 2 : ಪಾಕಿಸ್ತಾನ vs ಕ್ವಾಲಿಫೈಯರ್ (ಶಾರ್ಜಾ)

ಸೂಪರ್ ನಾಲ್ಕರ ಹಂತ
ಸೆಪ್ಟಂಬರ್ 3: ಬಿ1 vs ಬಿ2 (ಶಾರ್ಜಾ)
ಸೆಪ್ಟೆಂಬರ್ 4:ಎ1 ವಿರುದ್ಧ ಎ2 (ದುಬೈ)
ಸೆಪ್ಟೆಂಬರ್ 6 : ಎ1 vs ಬಿ1 (ದುಬೈ)
ಸೆಪ್ಟೆಂಬರ್ 7:ಎ2 ವಿರುದ್ಧ ಬಿ2 (ದುಬೈ)
ಸೆಪ್ಟೆಂಬರ್ 8: ಎ1 ವಿರುದ್ಧ ಬಿ2 (ದುಬೈ)
ಸೆಪ್ಟೆಂಬರ್ 9: ಬಿ1 ವಿರುದ್ಧ ಎ2 (ದುಬೈ)

ಭಾನುವಾರ, ಸೆಪ್ಟೆಂಬರ್.11: ಫೈನಲ್ (ದುಬೈ).

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement