ರಷ್ಯಾದ ಸ್ಟಂಟ್ಮ್ಯಾನ್ ಒಬ್ಬರು “ಮಾನವ ಬುಲೆಟ್” ನಂತೆ ಕಾರಿನ ಮೂಲಕ ಒಳ ತೂರುವ ತಮ್ಮ ಇತ್ತೀಚಿನ ಸಾಹಸದಿಂದ ಇಂಟರ್ನೆಟ್ ಬೆರಗಾಗಿದೆ.
ವೈರಲ್ ಹಾಗ್ ಹಂಚಿಕೊಂಡ ಈ ವೀಡಿಯೊವು ವಿಭಿನ್ನ ಕೋನಗಳಿಂದ ಸಾಹಸವನ್ನು ತೋರಿಸುತ್ತದೆ, ಎವ್ಗೆನಿ ಚೆಬೊಟರೆವ್ ಎಂಬವರು ಚಲಿಸುವ ಕಾರಿನಿಂದ ಬೀಳುವ ಮೊದಲು ಮತ್ತೊಂದು ವಾಹನದ ಮೂಲಕ ತೂರಿ ಹೊಗುತ್ತಾರೆ. ಅಲ್ಲದೆ ನಂತರ ಈ ಮೊದಲು ಪ್ರಯಾಣಿಸುತ್ತಿದ್ದ ಕಾರಿನ ಛಾವಣಿ ಮೇಲೆ ಮತ್ತೆ ಸವಾರಿ ಮಾಡುತ್ತಾರೆ. ಇದು ಪವಾಡದಂತೆ ಕಾಣುತ್ತದೆ.
10-ಸೆಕೆಂಡ್-ಕ್ಲಿಪ್ ಚೆಬೊಟರೆವ್ ಹೈ-ಸ್ಪೀಡ್ ಕಾರಿನಿಂದ ಜಿಗಿಯುವುದನ್ನು ಮತ್ತು ಇನ್ನೊಂದು ಕಾರಿನ ಹಿಂಬದಿಯ ಎರಡು ಬದಿಯ ಬಾಗಿಲಗಳು ತೆರೆದ ವಾಹನದ ಒಳಭಾಗದ ಮೂಲಕ “ತೂರಿ ಹೋಗುವುದನ್ನು ಆತ ನಿರ್ವಹಿಸುವುದನ್ನು ತೋರಿಸುತ್ತದೆ. ಇದು ಅತ್ಯಂತ ಅಪಾಯಕಾರಿ ಸಾಹಸವಾಗಿದ್ದು ಈತನ ಸಾಹಸ ನೋಡಿ ಇಂಟರ್ನೆಟ್ ದಿಗ್ಭ್ರಮೆಗೆ ಒಳಗಾಗಿದೆ.ವೀಡಿಯೊವನ್ನು
ಹಂಚಿಕೊಂಡಾಗಿನಿಂದ, ಇಂಟರ್ನೆಟ್ ಬೆರಗುಗೊಳಿಸಿದೆ. ಇದನ್ನು ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳಲಾಗಿದೆ, ಅಲ್ಲಿ ನೆಟಿಜನ್ಗಳು ಮನುಷ್ಯನಿಗೆ “ಅಕ್ಷರಶಃ ಸಾವಿನ ಭಯವಿಲ್ಲ” ಎಂದು ಹೇಳಿದ್ದಾರೆ.
ಆದರೆ ಆ ವ್ಯಕ್ತಿ ಆ ಕಿರಿದಾದ ಅಂತರದ ಮೂಲಕ ಕಾರನ್ನು ಮುಟ್ಟದೆ ಸೀಟಿನೊಳಗಿಂದ ಹೇಗೆ ದಾಟಿದನು ಎಂದು ಅನೇಕರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ