ಪಂಚಾಯತ್ ಚುನಾವಣೆಗಳಲ್ಲಿ ಗೆದ್ದಿದ್ದು ಮಹಿಳೆಯರು.. ಆದರೆ ಪ್ರಮಾಣ ವಚನ ಸ್ವೀಕರಿಸಿದ್ದು ಗಂಡಂದಿರು, ಸಂಬಂಧಿಕರು…!

ದಾಮೋಹ್ (ಮಧ್ಯಪ್ರದೇಶ): ಹಲವು ಪ್ರಶ್ನೆಗಳಿಗೆ ಕಾರಣವಾಗಿರುವ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಗ್ರಾಮ ಪಂಚಾಯತದಲ್ಲಿ ಹೊಸದಾಗಿ ಆಯ್ಕೆಯಾದ ಮಹಿಳಾ ಸರಪಂಚ್‌ ಅವರ ಪತಿ ತನ್ನ ಪತ್ನಿಯ ಬದಲಿಗೆ ಪ್ರಮಾಣ ವಚನ ಸ್ವೀಕರಿಸಿದ ಆರೋಪದ ಮೇಲೆ ಈ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಅಧಿಕಾರಿಗಳು ವಿವರ ಕೋರಿದ್ದಾರೆ. .
ಈ ವಿಷಯವು ದಾಮೋಹ್ ಜಿಲ್ಲೆಯ ಗೈಸಾಬಾದ್ ಪಂಚಾಯತ್‌ಗೆ ಸಂಬಂಧಿಸಿದೆ, ಅಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಯ ನಂತರ, ಪರಿಶಿಷ್ಟ ವರ್ಗದ ಮಹಿಳಾ ಸರಪಂಚ್ ಚುನಾಯಿತರಾಗಿದ್ದಾರೆ ಮತ್ತು ಇತರ ಕೆಲವು ಮಹಿಳಾ ಪ್ರತಿನಿಧಿಗಳು ಸಹ ವಿಜಯಶಾಲಿಯಾದರು.
ಜೂನ್ 25 ಮತ್ತು ಜುಲೈ 8 ರ ನಡುವೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಟ್ಟಾ ಬ್ಲಾಕ್‌ನ ಗೈಸಾಬಾದ್ ಪಂಚಾಯತ್‌ನಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆ ನಡೆದ ನಂತರ ಪರಿಶಿಷ್ಟ ಜಾತಿ ಮಹಿಳೆಯೊಬ್ಬರು ಸರಪಂಚ್ ಆಗಿ ಆಯ್ಕೆಯಾದರು. ಚುನಾವಣೆಯಲ್ಲಿ ಇತರ ಹನ್ನೊಂದು ಮಹಿಳೆಯರು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು.

advertisement

ಆದರೆ ಈ ಚುನಾಯಿತ ಮಹಿಳಾ ಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲಿಯೂ ಕಂಡುಬಂದಿಲ್ಲ. ಅವರ ಬದಲಿಗೆ ಅವರ ಪತಿ ಮತ್ತು ಇತರ ಪುರುಷ ಕುಟುಂಬದ ಸಂಬಂಧಿಕರು ಭಾಗವಹಿಸಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಆರೋಪ ಕೇಳಿಬಂದ ನಂತರ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿವಾದಕ್ಕೆ ಕಾರಣವಾಯಿತು. ಚುನಾಯಿತ ಸರಪಂಚ್ ಮತ್ತು ಇತರ ಮಹಿಳೆಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸುವ ಕುರಿತು ಗ್ರಾಮ ಪಂಚಾಯತದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಓದಿರಿ :-   ಮೂಡ್ ಆಫ್ ನೇಷನ್ ಸಮೀಕ್ಷೆ: 2024ರಲ್ಲಿಯೂ ಮೋದಿಯೇ ಪ್ರಧಾನಿಯಾಗಬೇಕೆಂದು ಅರ್ಧಕ್ಕಿಂತ ಹೆಚ್ಚು ಜನರ ಒಲವು; ಸಿಎಂಗಳಲ್ಲಿ ನವೀನ್‌ ಪಟ್ನಾಯಕ್‌ ಬೆಸ್ಟ್‌

ಆದರೆ, ಚುನಾಯಿತ ಮಹಿಳಾ ಪ್ರತಿನಿಧಿಗಳ ಬದಲಿಗೆ ಪತಿಯಂದಿರು ಹಾಜರಾಗಲು ಸಂಬಂಧಪಟ್ಟ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪಿಸಲಾಗಿದೆ. ಲಭ್ಯ ವಿರುವ ಮಾಹಿತಿ ಪ್ರಕಾರ, ಆಯ್ಕೆಯಾದ ಮಹಿಳೆಯರು ಕಾರ್ಯಕ್ರಮಕ್ಕೆ ಬರಲೇ ಇಲ್ಲ. ಆರೋಪಗಳು ತೀವ್ರವಾದ ಬಳಿಕ ಜಿಲ್ಲಾಡಳಿತ ಸತ್ಯಾಸತ್ಯತೆ ಅರಿತು ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ದಾಮೋಹ್ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಜಯ್ ಶ್ರೀವಾಸ್ತವ, ಈ ಘಟನೆಯು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ವಿಷಯವನ್ನು ಪರಿಶೀಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
“ತಮ್ಮ ಚುನಾಯಿತ ಪತ್ನಿಯರ ಬದಲಿಗೆ ಕೆಲವು ಪುರುಷರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು… ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ನಾವು ಆದೇಶಿಸಿದ್ದೇವೆ, ವರದಿ ಬಂದ ನಂತರ ಪಂಚಾಯತ್ ಕಾರ್ಯದರ್ಶಿ (ತಪ್ಪಿತಸ್ಥರಾಗಿದ್ದರೆ) ಶಿಕ್ಷೆಗೆ ಗುರಿಯಾಗುತ್ತಾರೆ” ಎಂದು ಅವರು ಹೇಳಿದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement