ಜೆಡಿಯು ಕೇಂದ್ರ ಸಚಿವ ಸಂಪುಟಕ್ಕೆ ಸೇರುವುದಿಲ್ಲ: ಆರ್‌ಸಿಪಿ ಸಿಂಗ್ ರಾಜೀನಾಮೆ ನಂತರ ಸ್ಪಷ್ಟಪಡಿಸಿದ ಪಕ್ಷ

ಪಾಟ್ನಾ: ಆರ್‌ಸಿಪಿ ಸಿಂಗ್ ಜೆಡಿಯುಗೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷವು ಕೇಂದ್ರ ಸಚಿವ ಸಂಪುಟವನ್ನು ಸೇರುವುದಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದೆ. ಆರ್‌ಸಿಪಿ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರ ಸಚಿವ ಸಂಪುಟದಲ್ಲಿ ಜೆಡಿಯುವಿನಿಂದ ಯಾರೂ ಸಚಿವರಿಲ್ಲ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅವರು, ಆರ್‌ಸಿಪಿ ಸಿಂಗ್ ಅವರ ದೇಹವು ಇಲ್ಲೇ ಇದೆ ಆದರೆ ಅವರ ಆತ್ಮ ಬೇರೆಲ್ಲೋ ಇದ್ದುದರಿಂದ ಪಕ್ಷದಿಂದ ಅವರು ನಿರ್ಗಮಿಸಿರುವುದು ನಿರೀಕ್ಷಿತವಾಗಿದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ನಾವು ಕೇಂದ್ರದಲ್ಲಿ ಸರ್ಕಾರವನ್ನು ಸೇರದಿರಲು ನಿರ್ಧರಿಸಿದಿರುವ 2019 ರ ನಮ್ಮ ನಿಲುವಿಗೆ ನಾವು ಅಂಟಿಕೊಳ್ಳುತ್ತೇವೆ” ಎಂದು ಅವರು ಹೇಳಿದರು.
ಆದಾಗ್ಯೂ, ಅವರು ತಮ್ಮ ಪಕ್ಷ ಮತ್ತು ಬಿಜೆಪಿ ನಡುವೆ “ಎಲ್ಲವೂ ಚೆನ್ನಾಗಿದೆ” ಎಂದು ಪ್ರತಿಪಾದಿಸಿದ ಅವರು ಇತ್ತೀಚಿನ ಹಲವಾರು ಬೆಳವಣಿಗೆಗಳ ನಂತರದ ಭಿನ್ನಾಭಿಪ್ರಾಯದ ಊಹಾಪೋಹಗಳನ್ನು ತಳ್ಳಿಹಾಕಿದರು, ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಗೈರಾಗುವ ಮುಖ್ಯಮಂತ್ರಿ ನಿರ್ಧಾರವು ಜೆಡಿಯು ಹಾಗೂ ಬಿಜೆಪಿ ಸಂಬಂಧ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಎಲ್ಲಾ ಜನತಾ ದಳ (ಯುನೈಟೆಡ್) ಶಾಸಕರು ಮತ್ತು ಸಂಸದರ ಸಭೆಯನ್ನು ಕರೆದಿದ್ದು, ಬಿಜೆಪಿಯೊಂದಿಗಿನ ಅವರ ಹೆಚ್ಚುತ್ತಿರುವ ಘರ್ಷಣೆ ಒಂದು ಹಂತಕ್ಕೆ ಬರಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ಬಿಹಾರದಲ್ಲಿ ಜೆಡಿಯು ಮೈತ್ರಿಕೂಟದ ಪಾಲುದಾರರಾಗಿರುವ ಬಿಜೆಪಿಯೊಂದಿಗೆ ನಿತೀಶಕುಮಾರ್ ಅಸಮಾಧಾನಗೊಳ್ಳಲು ಹಲವು ಕಾರಣಗಳಲ್ಲಿ ಪ್ರಮುಖವಾದದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಿತ್ರಪಕ್ಷಗಳಿಗೆ ಕೇಂದ್ರ ಸಚಿವ ಸಂಫುಟದಲ್ಲಿ ನೀಡಿರುವ ಟೋಕನ್ ಪ್ರಾತಿನಿಧ್ಯ ಎಂದು ಹೇಳಲಾಗುತ್ತಿದೆ.
ನಿತೀಶಕುಮಾರ್ ಅವರ ಪಕ್ಷವು ಕಳೆದ ತಿಂಗಳು ಅವರ ಮಾಜಿ ಜೆಡಿಯು ಸಹೋದ್ಯೋಗಿ ಆರ್‌ಸಿಪಿ ಸಿಂಗ್‌ಗೆ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿತ್ತು, ಅವರು ಕಳೆದ ವರ್ಷ ಕುಮಾರ್ ಅವರನ್ನು ಸಂಪರ್ಕಿಸದೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದರು. ನಿನ್ನೆ, ಸಿಂಗ್ ರಾಜ್ಯಸಭೆಯ ಸ್ನಬ್‌ನಿಂದ ಜೆಡಿಯುಗೆ ರಾಜೀನಾಮೆ ಸಲ್ಲಿಸಿದ್ದಾರೆ.
“ನಾನು ಕೇಂದ್ರ ಸಚಿವನಾಗಲು ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ” ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮಾಜಿ ಭಾರತೀಯ ಆಡಳಿತ ಸೇವಾ ಅಧಿಕಾರಿ ಸಿಂಗ್ ಹೇಳಿದ್ದಾರೆ. ನಿನ್ನೆಯಷ್ಟೇ ಜೆಡಿ(ಯು) ತೊರೆದು ಮಾತನಾಡಿದ ಅವರು, ಅಸೂಯೆಗೆ ಚಿಕಿತ್ಸೆ ಇಲ್ಲ ಎಂದು ಹೇಳುತ್ತೇನೆ. ನಿತೀಶ್ ಕುಮಾರ್ ಅವರು ತಮ್ಮ ಏಳು ಜೀವನದಲ್ಲಿಯೂ ಪ್ರಧಾನಿಯಾಗುವುದಿಲ್ಲ, ಅವರಿಂದಾಗಿ ಜೆಡಿಯು ಮುಳುಗುವ ಹಡಗಾಗಿದೆ ಎಂದು ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಸತ್ತೈನಾಥರ್ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ತಮಿಳುನಾಡು ಸಿಎಂ ಪುತ್ರಿ-ಉದಯನಿಧಿ ಸ್ಟಾಲಿನ್‌ ಸಹೋದರಿ | ವೀಡಿಯೊ

ಕೇಂದ್ರದಲ್ಲಿ ಸಚಿವ ಸ್ಥಾನಕ್ಕಾಗಿ ಮೋದಿ ಸರ್ಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಆರೋಪವನ್ನು ಸಿಂಗ್ ನಿರಾಕರಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿತೀಶ್‌ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಸಿಂಗ್ ಸ್ವತಃ ಕೇಂದ್ರ ಸಚಿವರಾಗಬೇಕೆಂಬ ಷರತ್ತಿನ ಮೇಲೆ ಪಕ್ಷಕ್ಕೆ ಒಂದು ಸ್ಥಾನವನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಅವರ ಆಸ್ತಿ ವ್ಯವಹಾರಗಳಲ್ಲಿ ಅಕ್ರಮಗಳಿವೆ ಎಂಬ ಜೆಡಿಯು ಆರೋಪಗಳನ್ನು ಸಿಂಗ್ ನಿರಾಕರಿಸಿದ್ದಾರೆ. “ಈ ಆಸ್ತಿಗಳು ನನ್ನ ಪತ್ನಿ ಮತ್ತು ಇತರ ಅವಲಂಬಿತರಿಗೆ ಸೇರಿದ್ದು, ಅವರು 2010 ರಿಂದ ಬಾಕಿ ತೆರಿಗೆ ಪಾವತಿಸುತ್ತಿದ್ದಾರೆ” ಎಂದು ಹೇಳಿರುವ ಅವರು,. ಪಕ್ಷವು ಏನನ್ನು ತನಿಖೆ ಮಾಡುತ್ತದೆಂದು ನನಗೆ ತಿಳಿದಿಲ್ಲ, ನಾನು ಮುಚ್ಚಿಡಲು ಏನನ್ನೂ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.
ಇಂದು, ನಿತೀಶ ಕುಮಾರ್ ಅವರು ಸಿಂಗ್‌ ಅವರ ಅಕ್ರಮ ಆಸ್ತಿ ವ್ಯವಹಾರಗಳನ್ನು ಉಲ್ಲೇಖಿಸಿ ಅವರ ಕುಟುಂಬವನ್ನು ರಾಜಕೀಯ ಹೋರಾಟಕ್ಕೆ ಎಳೆದಿದ್ದಾರೆ.
“ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಅಗತ್ಯವೇನು? ನಾವು ಕೇಂದ್ರ ಸಚಿವ ಸಂಪುಟದ ಭಾಗವಾಗುವುದಿಲ್ಲ ಎಂದು ಮುಖ್ಯಮಂತ್ರಿ 2019 ರಲ್ಲಿ ನಿರ್ಧರಿಸಿದ್ದರು” ಎಂದು ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಇಂದು, ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ಜೆಡಿಯು ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರುವುದಿಲ್ಲ ಎಂದು ಅವರು ಹೇಳಿದ್ದು, ಇದು ಸರಿಪಡಿಸಲಾಗದ ಬಿರುಕು ಊಹಾಪೋಹಗಳಿಗೆ ಕಾರಣವಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ಸಾವು, ಅದರಲ್ಲಿ 12 ನವಜಾತ ಶಿಶುಗಳು

ರಾಜೀವ್ ರಂಜನ್ ಅವರಂತಹ ನಿತೀಶಕುಮಾರ್ ಅವರ ಆಪ್ತರ ಏಕಾಏಕಿ ಹೇಳಿಕೆಗಳು ಬಿಹಾರ ಮುಖ್ಯಮಂತ್ರಿಯ ಬೇಡಿಕೆಗಳಿಗೆ ಮಣಿಯುವಂತೆ ಬಿಜೆಪಿಯ ಮೇಲೆ ಒತ್ತಡ ಹೇರುವ ಲೆಕ್ಕಾಚಾರದ ಕ್ರಮವೆಂದು ಪರಿಗಣಿಸಲಾಗಿದೆ, ಇದರಲ್ಲಿ ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿಂಗ್ ಅವರನ್ನು ಪದಚ್ಯುತಗೊಳಿಸುವುದು ಸೇರಿದೆ. ಯಾಕೆಂದರೆ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಇಷ್ಟವಿಲ್ಲ ಎಂಬುದು ಬಹಿರಂಗ ರಹಸ್ಯವಾಗಿದೆ.
ಮುಖ್ಯಮಂತ್ರಿ ನಿತೀಶಕುಮಾರ ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ, ದೆಹಲಿಯಲ್ಲಿ ನಡೆದ ಸರ್ಕಾರಿ ನೀತಿ (NITI)ಆಯೋಗದ ಸಭೆಯಿಂದ ದೂರ ಉಳಿದಿದ್ದರು, ಇದರಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸೇರಿದಂತೆ 23 ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಗೈರುಹಾಜರಿಯು ಬಿಜೆಪಿ ಬಗ್ಗೆ ನಿತೀಶ್‌ ಅವರ ಅಸಮಾಧಾನದ ಮತ್ತೊಂದು ಪ್ರದರ್ಶನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement